ಬ್ರೇಕಿಂಗ್ ನ್ಯೂಸ್
21-12-23 06:34 pm HK News Desk ದೇಶ - ವಿದೇಶ
ನವದೆಹಲಿ, ಡಿ.21: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ನವೆಂಬರ್ 22ರಂದು ಚುನಾವಣೆ ಪ್ರಚಾರ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ರಾಹುಲ್ ಗಾಂಧಿ ನತದೃಷ್ಟ, ಪಿಕ್ ಪಾಕೆಟರ್ ಎಂದು ಹೇಳಿರುವುದಕ್ಕೆ ಚುನಾವಣಾ ಆಯೋಗದಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್ ಸೂಚನೆ ನೀಡಿದೆ.
ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ಮತ್ತು ಉದ್ಯಮಿ ಗೌತಮ್ ಅದಾನಿಯನ್ನು ರಾಹುಲ್ ಗಾಂಧಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಿಕ್ ಪಾಕೆಟರ್ ಎಂದು ಮೂದಲಿಸಿದ್ದರು. ಈ ಬಗ್ಗೆ ರಾಹುಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ದೆಹಲಿ ಹೈಕೋರ್ಟಿಗೆ ಪಿಐಎಲ್ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮನಮೋಹನ್ ಮತ್ತು ಮಿನಿ ಪುಷ್ಕರ್ಣ ಅವರಿದ್ದ ನ್ಯಾಯಪೀಠವು, ಈ ಬಗ್ಗೆ ಚುನಾವಣಾ ಆಯೋಗ ಎಂಟು ವಾರದೊಳಗೆ ಕ್ರಮ ಕೈಗೊಳ್ಳುವಂತೆ ಹೇಳಿದೆ. ಈ ರೀತಿಯ ಹೇಳಿಕೆ ಒಳ್ಳೆಯ ಅಭಿರುಚಿಯಿಂದ ಕೂಡಿದ್ದಲ್ಲ ಎಂದು ಅಭಿಪ್ರಾಯ ಪಟ್ಟಿದೆ.
ಈ ರೀತಿಯ ಹೇಳಿಕೆ ನೀಡುವುದನ್ನು ನಿರ್ಬಂಧಿಸಲು ಕಠಿಣ ಕಾನೂನು ತರುವಂತೆ ಸಂಸತ್ತಿಗೆ ಸೂಚಿಸಬೇಕೆಂದು ವಕೀಲರು ಕೇಳಿದ್ದಕ್ಕೆ, ಆ ರೀತಿಯ ನಿರ್ದೇಶನವನ್ನು ಸಂಸತ್ತಿಗೆ ನಾವು ನೀಡುವಂತಿಲ್ಲ ಎಂದು ಹೇಳಿದೆ. ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ಈಗಾಗಲೇ ಚುನಾವಣಾ ಆಯೋಗ ಶೋಕಾಸ್ ನೋಟೀಸ್ ನೀಡಿದೆ. ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ಅಧ್ಯಕ್ಷ ಆದಿಶ್ ಅಗರ್ವಾಲ್ ಅರ್ಜಿದಾರರ ಪರವಾಗಿ ಕೋರ್ಟಿಗೆ ಹಾಜರಾಗಿದ್ದು, ಚುನಾವಣಾ ಆಯೋಗಕ್ಕೆ ನೋಟೀಸ್ ಕೊಡುವುದು ಬಿಟ್ಟು ಹೆಚ್ಚಿನ ಕ್ರಮ ಕೈಗೊಳ್ಳಲು ಅಧಿಕಾರ ಇಲ್ಲ ಎಂದು ಹೇಳಿದರು.
ಚುನಾವಣಾ ಆಯೋಗ ನೋಟೀಸ್ ಮಾಡಿರುವಾಗ ನಾವು ಮಧ್ಯಪ್ರವೇಶ ಮಾಡುವುದು ಸರಿಯಾಗಲ್ಲ. ಇದೆಲ್ಲ ವ್ಯಕ್ತಿಗತ ಜವಾಬ್ದಾರಿ. ಇಂತಹ ಹೇಳಿಕೆಗಳು ಕೆಟ್ಟ ಅಭಿರುಚಿಯದ್ದು ಅನ್ನುವುದನ್ನು ನಾವು ಒಪ್ಪುತ್ತೇವೆ ಎಂದು ನ್ಯಾಯಾಧೀಶರು ಹೇಳಿದರು. ನವೆಂಬರ್ 23ರಂದು ರಾಹುಲ್ ಗಾಂಧಿ ಚುನಾವಣಾ ಪ್ರಚಾರ ಭಾಷಣದಲ್ಲಿ ಮೋದಿಯನ್ನು ‘ಪನೌತಿ’ (ನತದೃಷ್ಟ) ಮತ್ತು ‘ಜೇಬ್ ಕತ್ರಾ’ (ಪಿಕ್ ಪಾಕೆಟರ್) ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಬಿಜೆಪಿಯಿಂದ ಕೋರ್ಟಿನಲ್ಲಿ ಖಾಸಗಿ ದೂರು ದಾಖಲಿಸಲಾಗಿತ್ತು.
The Delhi High Court on Thursday directed the Election Commission of India (ECI) to take appropriate action against Congress MP Rahul Gandhi for his speech on November 22 in which he called Prime Minister Narendra Modi a “pickpocket”.
27-03-25 06:41 pm
HK News Desk
Nandini Milk Rate: ಬೆಲೆ ಏರಿಕೆ ಬಿಸಿಯಿಂದ ತತ್ತರಿ...
27-03-25 04:49 pm
Yatnal, BJP, Karnataka Congress Twitter: ಈಗ '...
27-03-25 02:03 pm
BJP MLA Yatnal, Tweet: 'ಸತ್ಯವಂತರಿಗಿದು ಕಾಲವಲ್ಲ...
27-03-25 01:00 pm
BJP Yatnal Out, Vijayapura, BY Vijayendra: ಬಿ...
26-03-25 09:42 pm
27-03-25 04:07 pm
HK News Desk
ರಾಹುಲ್ ಗಾಂಧಿ ಭಾರತೀಯ ಪೌರತ್ವ ಹೊಂದಿದ್ದಾರೋ, ಇಲ್ಲ...
25-03-25 04:06 pm
Justice Yashwant Varma: ಭಾರೀ ಪ್ರಮಾಣದ ನೋಟು ಸುಟ...
24-03-25 03:54 pm
Delhi High Court judge Varma: ಹೈಕೋರ್ಟ್ ಜಡ್ಜ್...
23-03-25 02:40 pm
15 ವರ್ಷದ ಹುಡುಗನಿಂದ ಗರ್ಭವತಿ ; ಹರೆಯದಲ್ಲಿ ಮಾಡಿದ...
22-03-25 09:50 pm
27-03-25 08:45 pm
Mangalore Correspondent
Mangalore Kukke Subrahmanya Temple: ರಾಜ್ಯದ ಶ್...
27-03-25 07:53 pm
Bedra Bus Saudi, Mangalore, Moodbidri: ಸೌದಿಯಲ...
27-03-25 04:39 pm
U T Khader, Ullal, Cashew: ದೇಶದಲ್ಲಿ 90 ಶೇ. ಗೇ...
27-03-25 01:42 pm
Mangalore Anirvedha Organization: ಅನಿರ್ವೇದ ಸಂ...
26-03-25 10:02 pm
27-03-25 01:37 pm
HK News Desk
Bangalore Fake Marksheet, Arrest: ನಕಲಿ ಅಂಕಪಟ್...
26-03-25 11:19 pm
ಮನೆ ಮಾಲೀಕನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಶಂಕೆ ; ಯೋ...
26-03-25 11:08 pm
Mangalore Dharmasthala PSI P Kishor, Wife Att...
26-03-25 08:38 pm
ಸೈಬರ್ ಕೇಸಿನಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲು ಲಂಚ...
26-03-25 08:00 pm