ಬ್ರೇಕಿಂಗ್ ನ್ಯೂಸ್
14-12-23 10:22 pm HK News Desk ದೇಶ - ವಿದೇಶ
ಹೊಸದಿಲ್ಲಿ, ಡಿ 14: ಇತ್ತೀಚಿನ ಟೈಮ್ಸ್ ನೌ-ಇಟಿಜಿ ಸಮೀಕ್ಷೆಯ ಪ್ರಕಾರ ನರೇಂದ್ರ ಮೋದಿ ಸರ್ಕಾರವು ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಲಿದ್ದು, ಐತಿಹಾಸಿಕ ಸಾಧನೆ ಮೆರೆಯಲಿದೆ.
ಸಮೀಕ್ಷೆಯು 2024ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು 323 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಭರ್ಜರಿ ಬಹುಮತ ಗಳಿಸಲಿದ್ದು, ಮೂರನೇ ಅವಧಿಗೆ ಕೇಂದ್ರದಲ್ಲಿ ಅಧಿಕಾರಕ್ಕೇರ ಹಿಡಿಯಲಿದೆ ಎಂದು ಹೇಳಿದೆ. ಇದೇ ವೇಳೆ ಎನ್‌ಡಿಎ ನಾಗಾಲೋಟಕ್ಕೆ ಅಡ್ಡಗಾಲು ಹಾಕುವ ತುಡಿತಲ್ಲಿರುವ 'ಇಂಡಿಯಾ' ಮೈತ್ರಿಕೂಟವು ಕೇವಲ 163 ಸ್ಥಾನಗಳಲ್ಲಿ ಜಯ ಗಳಿಸುವ ಮೂಲಕ ಹೀನಾಯ ಸೋಲು ಕಾಣಲಿದೆ ಎಂದು ಸಮೀಕ್ಷೆಯು ಭವಿಷ್ಯ ನುಡಿದಿದೆ.
ಇಟಿಜಿ ಸಮೀಕ್ಷೆಯು ಬಿಜೆಪಿ ಏಕಾಂಗಿಯಾಗಿ ಸುಮಾರು 308-328 ಸ್ಥಾನಗಳನ್ನು ಗಳಿಸಬಹುದು ಎಂದು ಹೇಳಿದೆ. ಆದರೆ, ಕಾಂಗ್ರೆಸ್ ಮೂರನೇ ಬಾರಿಗೆ ಹೀನಾಯ ಪ್ರದರ್ಶನ ತೋರಲಿದ್ದು ಕೇವಲ 52-72 ಸ್ಥಾನ ಗಳಿಸಬಹುದು ಎಂದು ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಸವಾಲೆಸೆಯುವ ಪ್ರಯತ್ನವಾಗಿ 18 ಪಕ್ಷಗಳು ಇಂಡಿಯಾ ಒಕ್ಕೂಟವನ್ನು ರಚಿಸಿಕೊಂಡಿದ್ದರೂ, 2024ರ ಲೋಕಸಭಾ ಚುನಾವಣೆಯ ಫಲಿತಾಂಶದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವುದಿಲ್ಲ ಎಂಬುದನ್ನು ಸಮೀಕ್ಷೆಯು ಹೇಳುತ್ತಿದೆ.
2019ಕ್ಕೆ ಹೋಲಿಸಿದರೆ ಎನ್‌ಡಿಎ ಮತ್ತು ಬಿಜೆಪಿಯ ಸ್ಥಾನಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು ಎಂದು ಸಮೀಕ್ಷೆಯು ಸೂಚಿಸಿದೆ. 2019 ರಲ್ಲಿ, ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಮೈತ್ರಿಕೂಟವು (ಎನ್‌ಡಿಎ) 353 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಜೆಪಿ ಶೇ. 37.76ರಷ್ಟು ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತ್ತು. ಒಟ್ಟಾರೆ ಎನ್‌ಡಿಎಯ ಮತ ಗಳಿಕೆಯು ಶೇ.45ರಷ್ಟಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 52 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು.
ಇತ್ತೀಚೆಗೆ ಮುಕ್ತಾಯಗೊಂಡ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹಿಂದಿ ಬೆಲ್ಟ್‌ನಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದೆ. ಇದು 2024ರಲ್ಲಿಯೂ ಮುಂದುವರಿಯುವ ನಿರೀಕ್ಷೆಯಿದೆ. ವಿಶೇಷವಾಗಿ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳು ಬಿಜೆಪಿಯ ಚುನಾವಣಾ ಬಲಕ್ಕೆ ಗಣನೀಯ ಕೊಡುಗೆ ನೀಡಲಿವೆ
On 13th December, Times Now and ETG Research published the results of an opinion survey for the 2024 Lok Sabha elections. The survey results indicated that the National Democratic Alliance (NDA), led by Prime Minister Narendra Modi, is poised to make a historic return for the third consecutive term with an estimated 323 seats. The I.N.D.I. Alliance is expected to be overshadowed by the unmatchable popularity of PM Modi among the masses across the country, as per the survey conducted by ETG Research, I.N.D.I. Alliance may get around 163 seats in the general elections.
23-03-25 11:01 pm
Bangalore Correspondent
Basavaraj Horatti: ಹನಿಟ್ರ್ಯಾಪ್ ಸದ್ದು ; ವಿಧಾನ...
23-03-25 09:50 pm
Honey trap, Karnataka, Rajanna: ರಾಜ್ಯ ರಾಜಕೀಯದ...
23-03-25 06:02 pm
Karnataka Bandh Live, Bangalore, Mangalore Ud...
22-03-25 12:28 pm
Koppal, Sslc Exams, Mother death: SSLC ಪರೀಕ್ಷ...
21-03-25 10:41 pm
23-03-25 02:40 pm
HK News Desk
15 ವರ್ಷದ ಹುಡುಗನಿಂದ ಗರ್ಭವತಿ ; ಹರೆಯದಲ್ಲಿ ಮಾಡಿದ...
22-03-25 09:50 pm
ದೆಹಲಿ ಹೈಕೋರ್ಟ್ ಜಡ್ಜ್ ಮನೆಯಲ್ಲಿ ಅಗಣಿತ ನಗದು ಪತ್ತ...
21-03-25 04:46 pm
Rana Daggubati, Vijay Deverakonda, Prakash Ra...
20-03-25 10:40 pm
ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ...
20-03-25 07:19 pm
23-03-25 10:44 pm
Mangalore Correspondent
MP Govinda Karajola, Mangalore, Honey Trap: ಸ...
22-03-25 06:48 pm
Mangalore, BJP protest, MLC Bharathi Shetty,...
22-03-25 05:45 pm
Sullia, Mangalore, Rabies death: ನಾಯಿ ಮರಿ ಕಚ್...
22-03-25 03:15 pm
Belthangady, Baby News, Mangalore: ಬೆಳ್ತಂಗಡಿ...
22-03-25 01:07 pm
23-03-25 03:56 pm
HK News Desk
Mangalore Fraud, Online, Telagram: ಟೆಲಿಗ್ರಾಂನ...
22-03-25 10:51 pm
Bangalore Fake Police, Crime: ಪಾರ್ಕ್ನಲ್ಲಿ ಜೋ...
21-03-25 12:44 pm
Mangalore, Bangalore Airport Drugs; ಮಂಗಳೂರು ಪ...
20-03-25 05:29 pm
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm