ಬ್ರೇಕಿಂಗ್ ನ್ಯೂಸ್
13-12-23 10:10 pm HK News Desk ದೇಶ - ವಿದೇಶ
ಜೈಪುರ, ಡಿ.13: ಮರಳುಗಾಡು ರಾಜಸ್ಥಾನ ಬಹುತೇಕ ರತಪೂತರ ನಾಡು. ಹಿಂದೆ ರಜಪೂತರೇ ಆಳ್ವಿಕೆ ನಡೆಸಿದ್ದರಿಂದ ಹೆಚ್ಚಿನ ಕ್ಷೇತ್ರಗಳಲ್ಲಿ ಈವತ್ತಿಗೂ ಅವರದ್ದೇ ಕಾರುಬಾರು ಇದೆ. ರಜಪೂತ ರಾಣಿಯಾಗಿದ್ದ ವಸುಂಧರಾ ರಾಜೇ ಸಿಂಧಿಯಾ ಬಿಜೆಪಿ ಪಾಲಿಗೆ ಸುದೀರ್ಘ ಕಾಲದಲ್ಲಿ ರಾಜಸ್ಥಾನದ ರಾಣಿಯಾಗಿಯೇ ಇದ್ದವರು. ಆಕೆಯ ಮಾತಿಲ್ಲದೆ, ರಾಜಸ್ಥಾನದ ಬಿಜೆಪಿ ಅಲ್ಲಾಡುವುದೇ ಕಷ್ಟ ಎನ್ನುವಂತಿತ್ತು. ಆದರೆ, 70 ವರ್ಷದ ಹಳೆ ರಾಣಿಯ ಜಾಗಕ್ಕೆ ಬಿಜೆಪಿ ಹೈಕಮಾಂಡ್ ಈ ಬಾರಿ ಅದೇ ರಜಪೂತ ವಂಶದ ದಿಯಾ ಕುಮಾರಿ ಅವರನ್ನು ಸದ್ದಿಲ್ಲದೆ ಹೊಸ ರಾಣಿಯಾಗಿಸಿದ್ದು ಮಹತ್ತರ ನಡೆಯೇ ಸರಿ.
ಮುಖ್ಯಮಂತ್ರಿಯಾಗಿ ಇದೇ ಮೊದಲ ಬಾರಿಗೆ ಶಾಸಕರಾಗಿರುವ ಭಜನಲಾಲ್ ಶರ್ಮಾ ಆಯ್ಕೆಗೊಂಡರೆ, ತಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದುಕೊಂಡಿದ್ದ ರಜಪೂತರ ಅನಭಿಷಿಕ್ತ ರಾಣಿಯಾಗಿದ್ದ ವಸುಂಧರಾ ರಾಜೇ ಸದ್ದಿಲ್ಲದೆ ನೇಪಥ್ಯಕ್ಕೆ ಸರಿದಿದ್ದಾರೆ. ಅವರ ಬದಲಿಗೆ, ರಜಪೂತರನ್ನು ಒಲಿಸಿಕೊಳ್ಳಲು ಎರಡು ಬಾರಿಯ ಶಾಸಕಿ, ಒಂದು ಬಾರಿ ಸಂಸದೆಯೂ ಆಗಿರುವ ಜನರ ಪಾಲಿನ ರಾಣಿಯಾಗಿದ್ದ ದಿಯಾ ಕುಮಾರಿ ಅವರನ್ನು ಡಿಸಿಎಂ ಮಾಡಿದ್ದಾರೆ. ಇಷ್ಟಕ್ಕೂ ದಿಯಾ ಕುಮಾರಿ ಬೆಳೆದು ಬಂದ ಬಗೆಯೇ ಕಲ್ಲು ಮುಳ್ಳಿನ ಹಾದಿ.
ಈವತ್ತು ಜೈಪುರದ ಅರಮನೆಯ ರಾಣಿಯಾಗಿರುವುದರ ಜೊತೆಗೆ, ಎರಡು ಹೊಟೇಲ್, ಎರಡೆರಡು ಮ್ಯೂಸಿಯಂ ಟ್ರಸ್ಟ್ ಗಳ ಒಡತಿಯಾಗಿರುವ ಬಿಲಿಯನೇರ್ ದಿಯಾ ಕುಮಾರಿ ಬ್ರಿಟಿಷರ ಕಾಲದಲ್ಲಿ ಸ್ವಾತಂತ್ರ್ಯಕ್ಕೂ ಮುನ್ನ ಜೈಪುರವನ್ನು ಆಳಿದ್ದ ಕೊನೆಯ ರಾಜ ಮಾನ್ ಸಿಂಗ್ -2 ಅವರ ಮೊಮ್ಮಗಳು. ಇವರ ತಂದೆ ಸವಾಯಿ ಸಿಂಗ್ ಸೇನೆಯಲ್ಲಿ ಬ್ರಿಗೇಡಿಯರ್ ಆಗಿದ್ದವರು. 1971ರಲ್ಲಿ ಭಾರತ – ಪಾಕಿಸ್ಥಾನ ನಡುವಿನ ಯುದ್ಧದಲ್ಲಿ ತೋರಿದ ಶೌರ್ಯಕ್ಕಾಗಿ ಮಹಾವೀರ ಚಕ್ರವನ್ನು ಪಡೆದಿದ್ದ ಸೇನಾನಿ.
ಲಂಡನ್ ಯುನಿವರ್ಸಿಟಿಯಲ್ಲಿ ಫಿಲಾಸಫಿಯಲ್ಲಿ ಪಿಎಚ್ ಡಿ ಮಾಡಿರುವ ದಿಯಾ ಕುಮಾರಿ, ತನ್ನ ತಂದೆಯ ಜೊತೆಗೆ ಅರಮನೆಯಲ್ಲಿ ಸಹಾಯಕನಾಗಿದ್ದ ನರೇಂದ್ರ ಸಿಂಗ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆ ಕಾಲಕ್ಕೆ ಜಾತಿ ಸಂಪ್ರದಾಯವನ್ನು ಮೆಟ್ಟಿ ನಿಂತು ರಜಪೂತ ಸಮಾಜದ ಮುಂದೆ ತೀರಾ ಕೆಳಗಿದ್ದ ನರೇಂದ್ರ ಸಿಂಗ್ ರನ್ನು ಮದುವೆಯಾಗಿದ್ದಕ್ಕೆ ರಜಪೂತರೇ ವಿರೋಧಿಸಿದ್ದರು. 1989ರಲ್ಲಿ ತಂದೆ ಸವಾಯಿ ಸಿಂಗ್ ಕಾಂಗ್ರೆಸಿನಲ್ಲಿ ಸಂಸದ ಕ್ಷೇತ್ರಕ್ಕೆ ಸ್ಪರ್ಧಿಸಿದ್ದಾಗ ನರೇಂದ್ರ ಸಿಂಗ್, ಆಪ್ತ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಅದೇ ಸಂದರ್ಭದಲ್ಲಿ ಮಗಳು ದಿಯಾ ಕುಮಾರಿಗೆ ನರೇಂದ್ರನ ಜೊತೆಗೆ ಪ್ರೀತಿ ಹುಟ್ಟಿ ಮನೆಯವರಿಗೆ ಹೇಳದೆ ಓಡಿ ಹೋಗಿ ಗುಟ್ಟಾಗಿ ಮದುವೆಯಾಗಿದ್ದರು. ಆನಂತರ, ಐದಾರು ವರ್ಷಗಳ ಬಳಿಕ ತಂದೆಯೇ ಒಪ್ಪಿಗೆ ಕೊಟ್ಟು ದೆಹಲಿಯಲ್ಲಿ ನರೇಂದ್ರ ಸಿಂಗ್ ಜೊತೆಯಲ್ಲೇ ಅದ್ದೂರಿಯಾಗೇ ಮದುವೆ ಮಾಡಿಸಿದ್ದರು. ಆದರೆ, ಈ ಮದುವೆಗೆ ರಾಜಸ್ಥಾನದ ಯಾವುದೇ ರಜಪೂತ ವಂಶಸ್ಥರು ಬಂದಿರಲಿಲ್ಲ.
ದಿಯಾ ಕುಮಾರಿ ಮತ್ತು ನರೇಂದ್ರ ಸಿಂಗ್ ದಂಪತಿಗೆ ಮೂವರು ಮಕ್ಕಳಿದ್ದಾರೆ. ದೊಡ್ಡ ಮಗ ಪದ್ಮನಾಭ ಸಿಂಗ್ 13 ವರ್ಷದವನಿದ್ದಾಗಲೇ 2011ರಲ್ಲಿ ಜೈಪುರದ ರಾಜನಾಗಿ ಪಟ್ಟಾಭಿಷೇಕ ಮಾಡಲಾಗಿತ್ತು. ಲಕ್ಷ್ಯರಾಜ ಸಿಂಗ್ ಮತ್ತು ಗೌರವಿ ಕುಮಾರಿ ಎಂಬ ಇನ್ನಿಬ್ಬರು ಮಕ್ಕಳಿದ್ದಾರೆ. 2013ರಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ದಿಯಾ ಕುಮಾರಿ ಅವರನ್ನು ಬಿಜೆಪಿಗೆ ಸೆಳೆದುಕೊಂಡಿದ್ದರು. ಆಗಿನ ಸಿಎಂ ವಸುಂಧರಾ ರಾಜೇ ಸಮ್ಮುಖದಲ್ಲಿಯೇ ಜೈಪುರದಲ್ಲಿ ನಡೆದ ಬೃಹತ್ ರ್ಯಾಲಿಯಲ್ಲಿ ದಿಯಾ ಕುಮಾರಿ ಬಿಜೆಪಿ ಸೇರಿದ್ದರು. ಆಗಿನ ಸಂದರ್ಭದಲ್ಲಿಯೇ ದಿಯಾ ಪಕ್ಷ ಸೇರ್ಪಡೆಗೆ ಲಕ್ಷಾಂತರ ಕಾರ್ಯಕರ್ತರು ಸಾಕ್ಷಿಯಾಗಿದ್ದರು. ಮೊದಲ ಬಾರಿಗೆ ಸವಾಯಿ ಮಾಧೋಪುರ್ ಕ್ಷೇತ್ರದಿಂದ ಶಾಸಕರಾಗಿದ್ದ ದಿಯಾ, 2019ರಲ್ಲಿ ರಾಜಸಮಂದ್ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಗೊಂಡಿದ್ದರು. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜೈಪುರ ನಗರದ ವಿದ್ಯಾಧರ್ ನಗರ್ ಕ್ಷೇತ್ರದಿಂದ ಸ್ಪರ್ಧಿಸಿದ್ದು 71 ಸಾವಿರ ಮತಗಳ ಅಂತರದಿಂದ ಗೆಲುವು ಕಂಡಿದ್ದರು. ಅಸೆಂಬ್ಲಿ ಚುನಾವಣೆಯಲ್ಲಿ ಇಷ್ಟೊಂದು ಭಾರೀ ಅಂತರದಿಂದ ಗೆಲುವು ಸಾಧಿಸಿದ್ದು ದಾಖಲೆಯಾಗಿತ್ತು.
ಈ ಬಾರಿಯ ಅಸೆಂಬ್ಲಿ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಪರಿವರ್ತನ್ ಸಂಕಲ್ಪ ಯಾತ್ರೆಯನ್ನು ಜೈಪುರದಲ್ಲಿ ಸಮಾಪ್ತಿಗೊಳಿಸಿದ್ದರು. ವೇದಿಕೆಯಲ್ಲಿ ಸ್ವತಃ ಮೋದಿ ಅವರೇ ಮುಂದಿನ ರಜಪೂತ ನಾಯಕಿಯೆಂದು ದಿಯಾ ಕುಮಾರಿ ಅವರನ್ನು ಘೋಷಣೆ ಮಾಡಿದ್ದರು. ಅಲ್ಲದೆ, ಇಡೀ ರಾಜ್ಯದಲ್ಲಿ ಪಕ್ಷದ ಸಂಯೋಜಕಿಯಾಗಿ ಚುನಾವಣೆ ಗೆಲ್ಲಿಸುವ ಗುರಿಯನ್ನು ದಿಯಾ ಕುಮಾರಿಗೆ ನೀಡಿದ್ದರು. ರಾಜಕೀಯದಲ್ಲಿ ಸಣ್ಣ ಹೆಜ್ಜೆಗಳೇ ದೊಡ್ಡ ಮೆಟ್ಟಿಲು ಅನ್ನುವಂತೆ, ದಿಯಾ ಕುಮಾರಿ ಭವಿಷ್ಯದ ನಾಯಕಿಯಾಗುವ ಸೂಚನೆಯನ್ನು ಅಂದಿನ ರ್ಯಾಲಿ ನೀಡಿತ್ತು. ರಾಜಾಳ್ವಿಕೆ ಕೊನೆಗೊಂಡು 75 ವರ್ಷ ಕಳೆದರೂ ರಾಜಸ್ಥಾನದ ಪಾಲಿಗೆ ರಜಪೂತ ವಂಶಸ್ಥರದ್ದೇ ಕಾರುಬಾರು ಅನ್ನುವುದನ್ನು ತಿಳಿದಿರುವ ಬಿಜೆಪಿ ಕೇಂದ್ರ ನಾಯಕರು, ಸದ್ದಿಲ್ಲದೆ ವಸುಂಧರಾ ರಾಜೇ ಜಾಗಕ್ಕೆ ಹೊಸ ರಾಣಿಯನ್ನಾಗಿ ದಿಯಾ ಕುಮಾರಿ ಅವರನ್ನು ತಂದಿದ್ದಾರೆ. ಆಮೂಲಕ ಜೈಪುರ ರಾಜ ವಂಶಸ್ಥೆ ಮತ್ತೆ ಆಳ್ವಿಕೆಯ ಮುಂಚೂಣಿಗೆ ಬಂದಿದ್ದಾರೆ. ಭಜನಲಾಲ್ ಶರ್ಮಾ ಹೆಸರಿಗೆ ಮುಖ್ಯಮಂತ್ರಿಯಾಗಿದ್ದರೂ, ಆಡಳಿತದಲ್ಲಿ ಅನುಭವಿಯಾಗಿರುವ ದಿಯಾ ಕುಮಾರಿಯದ್ದೇ ಆಳ್ವಿಕೆ ನಡೆಯೋದರಲ್ಲಿ ಸಂಶಯವಿಲ್ಲ.
The BJP on Tuesday sprang a surprise by naming Bhajan Lal Sharma Rajasthan’s new Chief Minister and said Diya Kumari and Premchand Bairwa would be the Deputy CMs. Kumari’s name was the least surprising among the trio because for the past several months it was apparent that her star was on the rise. She was also considered among the potential CM candidates.
23-03-25 11:01 pm
Bangalore Correspondent
Basavaraj Horatti: ಹನಿಟ್ರ್ಯಾಪ್ ಸದ್ದು ; ವಿಧಾನ...
23-03-25 09:50 pm
Honey trap, Karnataka, Rajanna: ರಾಜ್ಯ ರಾಜಕೀಯದ...
23-03-25 06:02 pm
Karnataka Bandh Live, Bangalore, Mangalore Ud...
22-03-25 12:28 pm
Koppal, Sslc Exams, Mother death: SSLC ಪರೀಕ್ಷ...
21-03-25 10:41 pm
23-03-25 02:40 pm
HK News Desk
15 ವರ್ಷದ ಹುಡುಗನಿಂದ ಗರ್ಭವತಿ ; ಹರೆಯದಲ್ಲಿ ಮಾಡಿದ...
22-03-25 09:50 pm
ದೆಹಲಿ ಹೈಕೋರ್ಟ್ ಜಡ್ಜ್ ಮನೆಯಲ್ಲಿ ಅಗಣಿತ ನಗದು ಪತ್ತ...
21-03-25 04:46 pm
Rana Daggubati, Vijay Deverakonda, Prakash Ra...
20-03-25 10:40 pm
ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ...
20-03-25 07:19 pm
23-03-25 10:44 pm
Mangalore Correspondent
MP Govinda Karajola, Mangalore, Honey Trap: ಸ...
22-03-25 06:48 pm
Mangalore, BJP protest, MLC Bharathi Shetty,...
22-03-25 05:45 pm
Sullia, Mangalore, Rabies death: ನಾಯಿ ಮರಿ ಕಚ್...
22-03-25 03:15 pm
Belthangady, Baby News, Mangalore: ಬೆಳ್ತಂಗಡಿ...
22-03-25 01:07 pm
23-03-25 03:56 pm
HK News Desk
Mangalore Fraud, Online, Telagram: ಟೆಲಿಗ್ರಾಂನ...
22-03-25 10:51 pm
Bangalore Fake Police, Crime: ಪಾರ್ಕ್ನಲ್ಲಿ ಜೋ...
21-03-25 12:44 pm
Mangalore, Bangalore Airport Drugs; ಮಂಗಳೂರು ಪ...
20-03-25 05:29 pm
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm