ಬ್ರೇಕಿಂಗ್ ನ್ಯೂಸ್
12-12-23 10:05 pm HK News Desk ದೇಶ - ವಿದೇಶ
ಭೋಪಾಲ್, ಡಿ.12: ತನಗಾಗಿ ಏನನ್ನೂ ಕೇಳುವುದಕ್ಕಾಗಿ ದೆಹಲಿಗೆ ಹೋಗಲ್ಲ. ಹಾಗೆ ಕೇಳಿಕೊಂಡು ಹೋಗುವುದಕ್ಕಿಂತ ಸಾಯುವುದೇ ಲೇಸು ಎಂದು ಮಧ್ಯಪ್ರದೇಶದ ನಿರ್ಗಮಿತ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ ಬಳಿಕ ತನ್ನ ವಿದಾಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಗದ್ಗದಿತರಾಗಿಯೇ ಉತ್ತರಿಸಿದರು. ಮೋಹನ್ ಯಾದವ್ ಅವರನ್ನು ಸಿಎಂ ಆಯ್ಕೆ ಮಾಡಿರುವ ಬಿಜೆಪಿ ಕೇಂದ್ರ ನಾಯಕರ ನಿರ್ಧಾರವನ್ನು ಒಪ್ಪಿಕೊಳ್ಳುವುದಾಗಿ ಹೇಳಿದರು.
ಮುಖ್ಯಮಂತ್ರಿ ಮೋಹನ್ ಯಾದವ್ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ನನ್ನ ಅವಧಿಯಲ್ಲಿ ಕೈಗೊಂಡ ಯೋಜನೆಗಳನ್ನು ಪೂರ್ಣಗೊಳಿಸುತ್ತದೆ ಎಂಬ ವಿಶ್ವಾಸ ನನಗಿದೆ. ಈ ಮೂಲಕ ಪ್ರಗತಿ ಮತ್ತು ಅಭಿವೃದ್ಧಿಯಲ್ಲಿ ಮಧ್ಯಪ್ರದೇಶವು ಹೊಸ ಛಾಪು ಮೂಡಿಸುತ್ತದೆ. ಇದಕ್ಕಾಗಿ ನಾನು ಅವರನ್ನು ಬೆಂಬಲಿಸುತ್ತೇನೆ ಎಂದರು. ಬಿಜೆಪಿ ಹೈಕಮಾಂಡ್ ನಿರ್ಧಾರದಿಂದ ನನಗೆ ತೃಪ್ತಿಯಿದೆ. 2005 ರಲ್ಲಿ ಮುಖ್ಯಮಂತ್ರಿಯಾಗಿದ್ದೆ. ಉಮಾಭಾರತಿ ಅವರ ಕಠಿಣ ಪರಿಶ್ರಮದಿಂದ ಅಂದು ಸರ್ಕಾರ ರಚನೆಯಾಗಿತ್ತು. ನಾನು ಈಗ ನನಗಾಗಿ ಏನನ್ನಾದರೂ ಬಯಸುವುದಕ್ಕಿಂತ ಸಾಯುವುದೇ ಮೇಲು. ಇವತ್ತು ನಾನು ಇಲ್ಲಿಂದ ವಿದಾಯ ಹೇಳುತ್ತಿದ್ದೇನೆ. ನನ್ನ ಹೃದಯ ಸಂತೋಷ ಮತ್ತು ತೃಪ್ತಿಯಿಂದ ತುಂಬಿದೆ ಎಂದು ಹೇಳಿದರು.
ಚೌಹಾಣ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದಂತೆಯೇ ಸೋಮವಾರ ಅವರ ಮಹಿಳಾ ಅಭಿಮಾನಿಗಳು ಭೇಟಿಯಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ನಾವು ನಿಮಗೆ ಮತ ನೀಡಿದ್ದೇವೆ, ನೀವು ರಾಜೀನಾಮೆ ನೀಡಬಾರದು ಎಂದು ಕಣ್ಣೀರು ಹಾಕಿದರು. ಈ ವೇಳೆ ಚೌಹಾಣ್ ಅವರು ಮಹಿಳಾ ಅಭಿಮಾನಿಗಳನ್ನು ಸಮಾಧಾನ ಪಡಿಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Bhopal, Outgoing Madhya Pradesh Chief Minister Shivraj Singh Chouhan on Tuesday said he will "rather die" than asking something for himself from his party. He will carry out whatever task the Bharatiya Janata Party gives him, said the four-term chief minister who would soon be replaced by Mohan Yadav following the party's resounding victory in the last month's assembly elections.
23-03-25 11:01 pm
Bangalore Correspondent
Basavaraj Horatti: ಹನಿಟ್ರ್ಯಾಪ್ ಸದ್ದು ; ವಿಧಾನ...
23-03-25 09:50 pm
Honey trap, Karnataka, Rajanna: ರಾಜ್ಯ ರಾಜಕೀಯದ...
23-03-25 06:02 pm
Karnataka Bandh Live, Bangalore, Mangalore Ud...
22-03-25 12:28 pm
Koppal, Sslc Exams, Mother death: SSLC ಪರೀಕ್ಷ...
21-03-25 10:41 pm
23-03-25 02:40 pm
HK News Desk
15 ವರ್ಷದ ಹುಡುಗನಿಂದ ಗರ್ಭವತಿ ; ಹರೆಯದಲ್ಲಿ ಮಾಡಿದ...
22-03-25 09:50 pm
ದೆಹಲಿ ಹೈಕೋರ್ಟ್ ಜಡ್ಜ್ ಮನೆಯಲ್ಲಿ ಅಗಣಿತ ನಗದು ಪತ್ತ...
21-03-25 04:46 pm
Rana Daggubati, Vijay Deverakonda, Prakash Ra...
20-03-25 10:40 pm
ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ...
20-03-25 07:19 pm
23-03-25 10:44 pm
Mangalore Correspondent
MP Govinda Karajola, Mangalore, Honey Trap: ಸ...
22-03-25 06:48 pm
Mangalore, BJP protest, MLC Bharathi Shetty,...
22-03-25 05:45 pm
Sullia, Mangalore, Rabies death: ನಾಯಿ ಮರಿ ಕಚ್...
22-03-25 03:15 pm
Belthangady, Baby News, Mangalore: ಬೆಳ್ತಂಗಡಿ...
22-03-25 01:07 pm
23-03-25 03:56 pm
HK News Desk
Mangalore Fraud, Online, Telagram: ಟೆಲಿಗ್ರಾಂನ...
22-03-25 10:51 pm
Bangalore Fake Police, Crime: ಪಾರ್ಕ್ನಲ್ಲಿ ಜೋ...
21-03-25 12:44 pm
Mangalore, Bangalore Airport Drugs; ಮಂಗಳೂರು ಪ...
20-03-25 05:29 pm
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm