ಹಳಬರಿಗೆ ಕೊಕ್ ಸಾಧ್ಯತೆ ; ಮೂರು ರಾಜ್ಯಗಳಿಗೆ ಬಿಜೆಪಿ ವೀಕ್ಷಕರ ನೇಮಕ, ರಾಜಸ್ಥಾನಕ್ಕೆ ರಾಜನಾಥ್, ಮಧ್ಯಪ್ರದೇಶಕ್ಕೆ ಖಟ್ಟರ್, ಛತ್ತೀಸ್ಗಢಕ್ಕೆ ಅರ್ಜುನ್ ಮುಂಡಾ

08-12-23 01:50 pm       HK News Desk   ದೇಶ - ವಿದೇಶ

ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಐದು ದಿನಗಳ ನಂತರ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢ ರಾಜ್ಯಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಮಾಡಲು ಬಿಜೆಪಿ ಹೈಕಮಾಂಡ್ ಪಕ್ಷದ ವೀಕ್ಷಕರನ್ನು ನೇಮಿಸಿದೆ.

ನವದೆಹಲಿ, ಡಿ.8;  ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಐದು ದಿನಗಳ ನಂತರ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢ ರಾಜ್ಯಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಮಾಡಲು ಬಿಜೆಪಿ ಹೈಕಮಾಂಡ್ ಪಕ್ಷದ ವೀಕ್ಷಕರನ್ನು ನೇಮಿಸಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿನೋದ್ ತಾವಡೆ ಮತ್ತು ಸರೋಜ್ ಪಾಂಡೆ ಅವರನ್ನು ರಾಜಸ್ಥಾನದ ವೀಕ್ಷಕರನ್ನಾಗಿ ನೇಮಕ ಮಾಡಿದೆ. 

ಮಧ್ಯಪ್ರದೇಶಕ್ಕೆ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಕೆ ಲಕ್ಷ್ಮಣ್ ಮತ್ತು ಆಶಾ ಲಾಕ್ರಾ ಅವರನ್ನು ನೇಮಿಸಲಾಗಿದೆ. ಛತ್ತೀಸ್‌ಗಢದಲ್ಲಿ ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ಸರ್ಬಾನಂದ ಸೋನೋವಾಲ್ ಮತ್ತು ದುಷ್ಯಂತ್ ಗೌತಮ್ ಅವರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ.

Assembly Elections 2023:छत्तीसगढ़, राजस्थान और मध्य प्रदेश में बन रही भाजपा  की सरकार, होगी बंपर जीत: दुष्यंत - Dushyant Gautam Said That Bjp Government  Is Being Formed In Chhattisgarh ...

Sarbananda Sonowal resigns from Assam Assembly | North East India News -  The Indian Express

Hemant Soren | Ranchi Mayor Asha Lakra Welcome Hemant Soren Government  Order To Allows Buses To Resume In Jharkhand | यात्रियों से दोगुना से अधिक  बस किराया वसूलने पर मेयर नाराज, सरकार

BJP | Dr K Laxman : బీజేపీ సంచలనం.. డా.కె. లక్ష్మణ్‌కు రాజ్యసభ సీటు..  మైనార్టీ మంత్రికి మొడిచేయి! | bjp rajya sabha candidates Telangana obc  leader Dr K Laxman nominated from UP and minority ...

Haryana rains: CM Manohar Lal Khattar calls emergency meeting, cancels all  his pre-scheduled programmes | Mint

ಮೂರು ರಾಜ್ಯಗಳ ಮುಖ್ಯಮಂತ್ರಿ ಆಯ್ಕೆಯಲ್ಲಿ ಹೊಸಬರಿಗೆ ಬಿಜೆಪಿ ಮಣೆ ಹಾಕಲಿದೆ ಎನ್ನಲಾಗಿದೆ. ಭವಿಷ್ಯದ ನಾಯಕರನ್ನು ರೂಪಿಸಲು ಇದು ಸಕಾಲ ಎಂದು ಭಾವಿಸಿರುವ ಕೇಂದ್ರ ನಾಯಕರು, ಮೂರು ರಾಜ್ಯಗಳಲ್ಲಿ ಹಳಬರಿಗೆ ಕೊಕ್ ಕೊಟ್ಟು ಹೊಸ ಮುಖಗಳಿಗೆ ಅವಕಾಶ ನೀಡಲಿದ್ದಾರೆ. ಇದಕ್ಕಾಗಿ ಈ ರಾಜ್ಯಗಳಿಗೆ ಬರಲಿರುವ ವೀಕ್ಷಕರು ಶಾಸಕರ ಅಭಿಪ್ರಾಯ ಪಡೆಯಲಿದ್ದಾರೆ. ಹೊಸ ಮುಖಕ್ಕೆ ಅವಕಾಶ ನೀಡುವ ಬಗ್ಗೆ ಶಾಸಕರ ಮನವೊಲಿಕೆ ಮಾಡಲಿದ್ದಾರೆ. 

ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಕೈಯಲ್ಲಿದ್ದ ಅಧಿಕಾರವನ್ನು  ಬಿಜೆಪಿ ಕಸಿದುಕೊಂಡಿದ್ದು ಗೆಲುವಿನ ಉತ್ಸಾಹದಲ್ಲಿದೆ. ಆದರೆ ಪ್ರಾದೇಶಿಕವಾಗಿ ಮುಖ್ಯಮಂತ್ರಿ ಆಕಾಂಕ್ಷಿಗಳು ಹಲವರಿದ್ದು ಅವರನ್ನು ಮನವೊಲಿಸುವ ಕೆಲಸವೂ ಆಗಬೇಕಾಗಿದೆ. ಬಿಜೆಪಿ ಮಧ್ಯ ಭಾರತದ ಹಿಂದಿ ಹಾರ್ಟ್ ಲ್ಯಾಂಡ್ ನಲ್ಲಿ ಹಿಡಿತ ಬಿಗಿಗೊಳಿಸಿರುವುದು ಈ ಚುನಾವಣೆಯಲ್ಲಿ ಸ್ಪಷ್ಟವಾಗಿದ್ದು ಲೋಕಸಭೆಗೆ ತಯಾರಾಗುತ್ತಿರುವ ಬಿಜೆಪಿಗೆ ಟಾನಿಕ್ ಸಿಕ್ಕಂತಾಗಿದೆ.

Five days after the declaration of Assembly election results in four states, the Bharatiya Janata Party on Friday announced the appointment of observers for three states –Rajasthan, Madhya Pradesh and Chhattisgarh– where the party emerged victorious in the recently-concluded Assembly elections.