ಬ್ರೇಕಿಂಗ್ ನ್ಯೂಸ್
08-09-23 09:45 pm HK News Desk ದೇಶ - ವಿದೇಶ
ಗಾಜಿಯಾಬಾದ್, ಸೆ.8: ನಾಯಿ ಕಚ್ಚಿದ ವಿಷಯವನ್ನು ಮನೆಯವರಿಗೆ ತಿಳಿಸದೇ ಒಂದೂವರೆ ತಿಂಗಳ ನಂತರ ರೇಬಿಸ್ ರೋಗಕ್ಕೆ ತುತ್ತಾಗಿ 14 ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್ ಬಳಿಯ ಬುಲಂದ್ ಶಹರ್ ನಗರದ ನಿವಾಸಿ ಶಹವಾಜ್ ಮೃತಪಟ್ಟ ಬಾಲಕ. ಎಂಟನೇ ತರಗತಿ ವಿದ್ಯಾರ್ಥಿಯಾಗಿದ್ದ ಶಹವಾಜ್ ಒಂದೂವರೆ ತಿಂಗಳ ಹಿಂದೆ ಸ್ನೇಹಿತರೊಂದಿಗೆ ಮನೆಯ ಬಳಿ ಆಟವಾಡುತ್ತಿದ್ದಾಗ ನೆರೆ ಮನೆಯ ನಾಯಿ ದಾಳಿ ಮಾಡಿ ಗಾಯಗೊಳಿಸಿತ್ತು. ಗಾಯವಾಗಿದ್ದರೂ ಹುಡುಗ ಮನೆಗೆ ಬಂದು ಪೋಷಕರಿಗೆ ತಿಳಿಸಿರಲಿಲ್ಲ. ನಾಯಿ ಕಚ್ಚಿರುವ ವಿಷಯ ತಿಳಿಸಿದರೆ ಪೋಷಕರು ಬೈತಾರೆ ಎನ್ನುವ ಭಯದಲ್ಲಿ ಹೇಳಿರಲಿಲ್ಲ.
ಒಂದು ತಿಂಗಳ ನಂತರ ಶಹವಾಜ್ ಅಸ್ವಸ್ಥಗೊಂಡಿದ್ದು, ಅಸಹಜವಾಗಿ ವರ್ತಿಸತೊಡಗಿದ್ದ. ಊಟವನ್ನೂ ಬಿಟ್ಟಿದ್ದ. ಆತನನ್ನು ವೈದ್ಯರಲ್ಲಿ ಕರೆದುಕೊಂಡು ಹೋದಾಗ ರೇಬಿಸ್ ರೋಗ ಅಂಟಿರುವುದು ಬಯಲಾಗಿದೆ. ಅಲ್ಲದೆ, ನಾಯಿ ತನಗೆ ಕಡಿದಿದ್ದನ್ನೂ ಪೋಷಕರಲ್ಲಿ ತಿಳಿಸಿದ್ದಾನೆ. ಕೂಡಲೇ ಆತನನ್ನು ಗಾಜಿಯಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ದಿಲ್ಲಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು ಚಿಕಿತ್ಸೆ ಸಾಧ್ಯವಾಗಲಿಲ್ಲ. ಆಯುರ್ವೇದ ಚಿಕಿತ್ಸೆ ಮಾಡಿಯೂ ಚೇತರಿಕೆ ಕಾಣಲಿಲ್ಲ. ಕೊನೆಗೆ, ರೋಗ ಉಲ್ಬಣಿಸಿ ಆಸ್ಪತ್ರೆಗೆ ಕರೆದೊಯ್ಯುವಾಗ ಆಂಬ್ಯುಲೆನ್ಸ್‌ನಲ್ಲಿಯೇ ಅಸುನೀಗಿದ್ದಾನೆ. ಪೋಷಕರು ಈ ಬಗ್ಗೆ ಬುಲಂದ್ ಶಹರ್‌ನ ವಿಜಯನಗರ ಪೊಲೀಸರಿಗೆ ದೂರು ನೀಡಿದ್ದು ನೆರೆಮನೆಯ ನಾಯಿ ಮಾಲೀಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
A 14-year-old boy who was bitten by a dog over a month ago and hid the incident from his parents died of rabies in Uttar Pradesh's Ghaziabad. Shahvaz, a student of class 8, died on Monday evening when he was being brought back to Ghaziabad from Bulandshahr, where he was taken for treatment after his condition deteriorated, news agency PTI reported quoting the police.
03-04-25 09:44 pm
Bangalore Correspondent
Hubballi student suicide attempt: ಯುವತಿಯ ಖಾಸಗ...
02-04-25 10:48 pm
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
03-04-25 11:10 pm
HK News Desk
Waqf Bill, Amit Shah; ಸುದೀರ್ಘ ಚರ್ಚೆ ಬಳಿಕ ಸಂಸತ...
03-04-25 01:04 pm
ವಕ್ಫ್ ತಿದ್ದುಪಡಿ ವಿಧೇಯಕ ಸಂಸತ್ತಿನಲ್ಲಿ ಮಂಡನೆ ; ವ...
02-04-25 07:35 pm
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
03-04-25 10:14 pm
Dinesh Nayak, Mangaluru Correspondent
Mangalore Court, Lawyers Protest, Judge: ಜಡ್ಜ...
03-04-25 04:04 pm
Belthangady, Head Constable Praveen, Cm Medal...
03-04-25 03:09 pm
Sdpi Protest Mangalore: ವಕ್ಫ್ ತಿದ್ದುಪಡಿ ಮಸೂದೆ...
02-04-25 11:02 pm
Kora Kannada Movie, Release, P Murthy, Sunami...
02-04-25 04:11 pm
03-04-25 05:01 pm
HK News Desk
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm