ಬ್ರೇಕಿಂಗ್ ನ್ಯೂಸ್
29-07-23 04:38 pm HK News Desk ದೇಶ - ವಿದೇಶ
ಬೊಕಾರೊ, ಜುಲೈ 29: ಮೊಹರಂ ಮೆರವಣಿಗೆ ಸಂದರ್ಭದಲ್ಲಿ ಉಂಟಾದ ವಿದ್ಯುತ್ ಅವಘಡದಲ್ಲಿ ನಾಲ್ಕು ಮಂದಿ ಕರೆಂಟ್ ಶಾಕ್ ಹೊಡೆದು ಮೃತಪಟ್ಟಿದ್ದರೆ, ಇನ್ನು 13 ಮಂದಿ ಗಾಯಗೊಂಡಿದ್ದಾರೆ. ಜಾರ್ಖಂಡ್‌ನ ಬೊಕಾರೊದಲ್ಲಿ ಶನಿವಾರ ಈ ಭೀಕರ ಘಟನೆ ನಡೆದಿದೆ.
ಮುಸ್ಲಿಂ ಸಮುದಾಯದ ಗುಂಪು ಮೊಹರಂ ಮೆರವಣಿಗೆಯಲ್ಲಿ ಸಾಗಿಸುತ್ತಿದ್ದ 'ತಾಜಿಯಾ'ವು 11 ಸಾವಿರ ಹೈ ವೋಲ್ಟೇಜ್ ವೈರ್‌ಗೆ ತಗುಲಿದ್ದರಿಂದ ಭಾರಿ ಸ್ಫೋಟ ಸಂಭವಿಸಿದೆ. ಅದರ ಬೆನ್ನಲ್ಲೇ ಅವಘಡ ಉಂಟಾಗಿದೆ.
ಗಾಯಗೊಂಡಿರುವ ವ್ಯಕ್ತಿಗಳನ್ನು ತಕ್ಷಣದ ಚಿಕಿತ್ಸೆಗಾಗಿ ಬೊಕಾರೋದ ಥರ್ಮಲ್ ಡಿವಿಸಿ ಆಸ್ಪತ್ರೆಗೆ ಕೂಡಲೇ ದಾಖಲು ಮಾಡಲಾಗಿದೆ. 13 ಮಂದಿ ಗಾಯಾಳುಗಳ ಪೈಕಿ 9 ಮಂದಿಯ ಸ್ಥಿತಿ ಗಂಭೀರವಾಗಿದೆ. ಸ್ಫೋಟಕ್ಕೆ ಕಾರಣ ತಿಳಿಯುವ ಸಲುವಾಗಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ರಾಜಧಾನಿ ರಾಂಚಿಯಿಂದ ಸುಮಾರು 80 ಕಿಮೀ ದೂರದಲ್ಲಿನ ಪೆಟಾರ್ವರ್ ಪೊಲೀಸ್ ಠಾಣೆ ವ್ಯಾಪ್ತಿಯ ಖೆಟ್ಕೋ ಗ್ರಾಮದಲ್ಲಿ ಮೊಹರಂ ಮೆರವಣಿಗೆ ನಡೆಯುತ್ತಿತ್ತು. ಧಾರ್ಮಿಕ ಧ್ವಜವನ್ನು ಅಳವಡಿಸಿದ ಕಬ್ಬಿಣದ ರಾಡು, 11,000 ಹೈ ವೋಲ್ಟೇಜ್ ವಿದ್ಯುತ್ ಹರಿಯುತ್ತಿದ್ದ ತಂತಿಗೆ ತಗುಲಿದ್ದರಿಂದ ಅನಾಹುತ ಸಂಭವಿಸಿದೆ ಎಂದು ಬೊಕಾರೋ ಪೊಲೀಸ್ ವರಿಷ್ಠಾಧಿಕಾರಿ ಪ್ರಿಯದರ್ಶಿನಿ ಅಲೋಕ್ ತಿಳಿಸಿದ್ದಾರೆ.
ಶನಿವಾರ ಮುಂಜಾನೆ 6 ಗಂಟೆ ಸುಮಾರಿಗೆ ಅವರು ಮೊಹರಂ ಮೆರವಣಿಗೆಗೆ ಸಿದ್ಧತೆ ನಡೆಸುತ್ತಿದ್ದರು. ಧಾರ್ಮಿಕ ಧ್ವಜ ಅಂಟಿಸಿದ ಕಬ್ಬಿಣದ ಕಂಬವು ವಿದ್ಯುತ್ ತಂತಿಗೆ ತಗುಲಿದ್ದು, ಅಲ್ಲಿದ್ದ ಅನೇಕರಿಗೆ ವಿದ್ಯುತ್ ಆಘಾತವಾಗಿದೆ" ಎಂದು ಅವರು ಹೇಳಿದ್ದಾರೆ.
ಗಾಯಾಳುಗಳನ್ನು ಬೊಕಾರೋ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ.
Four men were electrocuted, while 13 others were injured while carrying out a Muharram procession in Jharkhand’s Bokaro on Saturday. The incident occurred while the ‘Tazia’ came in contact with an 11,000 high-voltage tension wire, resulting in a blast.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
10-05-25 01:58 pm
HK News Desk
ಯುದ್ಧ ಸಮಸ್ಯೆಗೆ ಪರಿಹಾರ ಅಲ್ಲ, ಮಾತುಕತೆಯಿಂದ ಬಗೆಹರ...
09-05-25 06:49 pm
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm