ಬ್ರೇಕಿಂಗ್ ನ್ಯೂಸ್
20-07-23 01:14 pm H K News Desk ದೇಶ - ವಿದೇಶ
ನವದೆಹಲಿ, ಜುಲೈ 20: ಎರಡು ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರಕ್ಕೆ ಮಣಿಪುರ ರಾಜ್ಯವೇ ಸುಟ್ಟು ಕರಕಲಾಗಿದೆ. ಇದೀಗ ರಾಜ್ಯ ಶಾಂತಿಯತ್ತ ಮರಳುತ್ತಿರುವಾಗಲೇ ಮೇ 4 ರಂದು ನಡೆದಿದೆ ಎನ್ನಲಾದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಮತ್ತೆ ಆಕ್ರೋಶ ಭುಗಿಲೆದ್ದಿದೆ. ಕೆಲವು ಕಡೆ ಮತ್ತೆ ಹಿಂಸಾಚಾರ ಆರಂಭಗೊಂಡಿದೆ. ಇಬ್ಬರು ಮಹಿಳೆಯರನ್ನು ಕಿಡಿಗೇಡಿಗಳ ಗುಂಪು ಬೆತ್ತಲೆ ಮೆರವಣಿಗೆ ಮಾಡಿಸಿ, ಅತ್ಯಾಚಾರ ಎಸಗಿದ್ದಾರೆ ಎಂದು ಬುಡಕಟ್ಟು ಸಮುದಾಯ ಆರೋಪ ಮಾಡಿದೆ.
ರಾಜಧಾನಿ ಇಂಫಾಲ್‌ನಿಂದ 35 ಕಿಲೋಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ. ಇಬ್ಬರು ಮಹಿಳೆಯರನ್ನು ಕಿಡಿಗೇಡಿಗಳ ಗ್ಯಾಂಗ್ ಬೆತ್ತಲೆಗೊಳಿಸಿ, ರಸ್ತೆಯಲ್ಲಿ ಮೆರವಣಿಗೆ ಮಾಡಿಸಿದ್ದಾರೆ. ಮಹಿಳೆಯರು ಕಣ್ಣೀರಿಡುತ್ತಾ ಬೇಡಿಕೊಂಡರು ಆಕ್ರೋಶಿತರು ಕೇಳಿಸಿಕೊಂಡಿಲ್ಲ. ಇದರ ಬದಲು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ.
ಸತತ ಪ್ರಯತ್ನಗಳ ಬಳಿಕ ಹಿಂಸಾಚಾರ ತಣ್ಣಗಾಗಿತ್ತು. ಆದರೆ ಕೆಲವು ಪ್ರದೇಶಗಳಲ್ಲಿ ಭುಗಿಲೆದ್ದ ಪ್ರತಿಭಟನೆ, ಹಿಂಸಚಾರವನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗಿತ್ತು. ಇದೀಗ ವಿಕೃತು ಮೆರೆದಿರುವ ವಿಡಿಯೋ ಹೊರ ಬಂದಿರುವುದು ಬುಡಕಟ್ಟು ಸಮುದಾಯಗಳನ್ನು ಮತ್ತಷ್ಟು ಕೆರಳಿಸಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್, ಮಣಿಪುರ ಹಿಂಸಾಚಾರ ಕುರಿತು ವಿಚಾರಣೆ ನಡೆಸಿತ್ತು. ‘ಮಣಿಪುರದಲ್ಲಿ ಮತ್ತಷ್ಟು ಕಿಚ್ಚು ಹಚ್ಚಲು ಸುಪ್ರೀಂ ಕೋರ್ಟನ್ನು ವೇದಿಕೆ ಆಗಿ ಬಳಸಿಕೊಳ್ಳಬೇಡಿ’ ಎಂದು ಕೋರ್ಟ್ ಕಿಡಿಕಾರಿತ್ತು.
ಮಣಿಪುರದ ವಸ್ತುಸ್ಥಿತಿ ವರದಿ ಸಲ್ಲಿಸಿದ ರಾಜ್ಯ ಸರ್ಕಾರ, 142 ಜನರು ಗಲಭೆಯಲ್ಲಿ ಸಾವನ್ನಪ್ಪಿದ್ದಾರೆ. 5,995 ಎಫ್‌ಐಆರ್ ದಾಖಲಾಗಿದ್ದು, 6745 ಜನರನ್ನು ಬಂಧಿಸಲಾಗಿದೆ. 6 ಕೇಸುಗಳ ತನಿಖೆಯನ್ನು ಸಿಬಿಐ ನಡೆಸುತ್ತಿದೆ ಎಂದು ಹೇಳಿಕೆ ನೀಡಿದೆ.
A video showing two women being paraded naked by a mob in the violence-hit northeastern state of Manipur has sparked outrage in India. The police say they have opened a case of gang rape and arrested a man, adding that others will be held soon.
17-07-26 02:55 pm
HK News Staffer
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
17-07-26 10:32 am
HK News Staffer
ಹಾರ್ಮುಜ್ನಲ್ಲಿ ಇರಾನ್ ಅಟ್ಟಹಾಸ! ಮತ್ತೆ ಎರಡು ಟ್ಯಾ...
14-07-26 08:20 pm
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
17-07-26 10:25 pm
HK News Staffer
ಎಸ್ಐಆರ್ ನಡುವೆ ಶಾಶ್ವತ ನಿವಾಸಿ ಪತ್ರ ಜಾರಿ ಅಕ್ರಮ ಬ...
17-07-26 07:58 pm
ಉಳ್ಳಾಲ ತೀರಕ್ಕೆ ಅಪ್ಪಳಿಸಿದ ಬೂತಾಯಿ ಮೀನುಗಳ ರಾಶಿ !...
17-07-26 07:22 pm
ಸುರತ್ಕಲ್ ಬಳಿ ಮೀನುಗಾರಿಕಾ ದೋಣಿ ಪಲ್ಟಿ ; ಸಮುದ್ರಕ್...
17-07-26 03:55 pm
ಸೌಂದರ್ಯ ಕೆಡಿಸಿದೆ ತೊಕ್ಕೊಟ್ಟು ಫ್ಲೈ ಓವರಿನ ಅನಧಿಕೃ...
15-07-26 10:44 pm
17-07-26 09:07 pm
HK News Staffer
ಮಠದಕಣಿ ಮನೆ ಕಳ್ಳತನ ಬೆನ್ನತ್ತಿದ ಬರ್ಕೆ ಪೊಲೀಸರು; ನ...
17-07-26 08:11 pm
ಬಿಸಿ ರೋಡಿನಲ್ಲಿ ಯುವತಿ ಕೊಂದ ಆರೋಪಿ ಚೇತನ್ ಪಚ್ಚನಾಡ...
17-07-26 12:58 pm
Bc Road Murder Update, Mangalore: ಏಕಮುಖದ ಪ್ರೀ...
16-07-26 09:26 pm
BC Road Murder, Crime Mangalore: ಬಿಸಿ ರೋಡ್ ಬಸ...
16-07-26 07:25 pm