ಬ್ರೇಕಿಂಗ್ ನ್ಯೂಸ್
14-07-23 06:44 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 14: ಭಾರತ ಬಾಹ್ಯಾಕಾಶ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಲು ಹೊರಟಿದೆ. ಚಂದ್ರನ ಮೇಲ್ಮೈ ಸ್ಪರ್ಶಿಸಲು ಎರಡನೇ ಪ್ರಯತ್ನ ಆರಂಭಿಸಿದ್ದು ಶುಕ್ರವಾರ ಚಂದ್ರನತ್ತ ಯಶಸ್ವಿಯಾಗಿ ಉಪಗ್ರಹ ಉಡಾವಣೆ ಮಾಡಿದೆ.
ಚಂದ್ರನ ಮೇಲೆ ಗುರಿಯಿಟ್ಟ ಚಂದ್ರಯಾನ -3 ಉಪಗ್ರಹವನ್ನು ಹೊತ್ತ ಜಿಎಸ್ ಎಲ್ ವಿ ಮಾರ್ಕ್ 3 ಉಡಾವಣಾ ನೌಕೆಯು ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜುಲೈ 14ರ ಮಧ್ಯಾಹ್ನ 2.35ಕ್ಕೆ ಆಗಸಕ್ಕೆ ಹಾರಿದೆ. ಬಾಹುಬಲಿ ರಾಕೆಟ್ ಎಂದು ಕರೆಯಲ್ಪಡುವ ಜಿಎಸ್ಎಲ್ವಿ ಮಾರ್ಕ್ - 3 ಚಂದ್ರನ ಮೇಲೆ ಇಳಿಯಬೇಕಾದ ಲ್ಯಾಂಡರ್ ವಿಕ್ರಮ್ ಅನ್ನು ಹೊತ್ತು ಸಾಗಿದ್ದು ಈ ಪ್ರಯಾಣವು 40 ದಿನಗಳದ್ದೆಂದು ಅಂದಾಜು ಹಾಕಲಾಗಿದೆ. ಆಗಸ್ಟ್ 23 ಅಥವಾ 24 ರ ವೇಳೆಗೆ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ನಿರೀಕ್ಷೆಯಿದೆ. ಅದಕ್ಕೂ ಮೊದಲು ಆಗಸ್ಟ್ 5ರ ವೇಳೆಗೆ ಚಂದ್ರನ ಕಕ್ಷೆ ಸೇರುವ ತವಕದಲ್ಲಿ ಇಸ್ರೋ ವಿಜ್ಞಾನಿಗಳಿದ್ದಾರೆ. ಚಂದ್ರನ ಕಕ್ಷೆ ಸೇರಿದ ಬಳಿಕ ನೆಲ ಸ್ಪರ್ಶಿಸುವ ವರೆಗಿನ ಪ್ರಯಾಣ ನಿಧಾನ ಗತಿಯಲ್ಲಿರಲಿದೆ.
ಸದ್ಯಕ್ಕೆ ಉಪಗ್ರಹ ಉಡಾವಣೆ ಯಶಸ್ವಿಯಾಗಿದ್ದು ನೌಕೆ ನಭಕ್ಕೆ ಹಾರಿದ 900 ಸೆಕೆಂಡ್ ಅಂತರದಲ್ಲಿ ಉಡಾವಣಾ ವಾಹಕದಿಂದ ಉಪಗ್ರಹವು ಪ್ರತ್ಯೇಕಗೊಂಡು ಬಾಹ್ಯಾಕಾಶ ಕಕ್ಷೆಯಲ್ಲಿ ಚಲಿಸಲಾರಂಭಿಸಿದೆ. ಆದರೆ ಉಪಗ್ರಹವನ್ನು ಚಂದ್ರನ ಮೇಲೆ ಇಳಿಸುವುದು ಸವಾಲಾಗಿದೆ. 2019ರಲ್ಲಿ ಇದೇ ರೀತಿ ಚಂದ್ರಯಾನ-2 ಕೈಗೊಳ್ಳಲಾಗಿತ್ತು. ಆದರೆ ಉಡ್ಡಯನಗೊಂಡು ಚಂದ್ರನ ಮೇಲ್ಮೈನಲ್ಲಿ ಇಳಿಯುವ ಕೊನೆಕ್ಷಣದಲ್ಲಿ ಭೂಮಿಯ ಸಂಪರ್ಕವನ್ನು ಕಡಿದುಕೊಂಡಿದ್ದರಿಂದ ಯೋಜನೆ ವಿಫಲಗೊಂಡಿತ್ತು. ಚಂದ್ರನ ಮೇಲೆ ನೌಕೆ ಇಳಿಸುವುದು ಸಫಲವಾದಲ್ಲಿ ಈ ಸಾಧನೆ ಮಾಡಿದ ಜಗತ್ತಿನ ನಾಲ್ಕನೇ ದೇಶ ಭಾರತವಾಗಲಿದೆ. ಅಮೆರಿಕ, ಚೀನಾ, ರಷ್ಯಾ ಮಾತ್ರ ಈವರೆಗೆ ಈ ಸಾಧನೆ ಮಾಡಿದೆ. ಆಮೂಲಕ ಭಾರತವೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಿದ ದೇಶಗಳ ಎಲೈಟ್ ಗ್ರೂಪ್ ಸೇರಲಿದೆ. ಇದಕ್ಕೆಲ್ಲ ಸೌರಮಂಡಲದ ಚೈತನ್ಯಶಕ್ತಿ ಸೂರ್ಯನ ಸಹಕಾರವೇ ಮುಖ್ಯವಾಗಿದ್ದು ಸೂರ್ಯದೇವ ಸಹಕರಿಸಿದಲ್ಲಿ ಭಾರತೀಯರ ಸಾಧನೆ ಚಂದ್ರನ ಅಂಗಳ ತಲುಪಲಿದೆ.

ಚಂದ್ರನ ಭೂಪ್ರದೇಶದಲ್ಲಿ ಇಳಿಯುವ ಈ ನೌಕೆಯು, ಹಲವು ಸಂಶೋಧನೆಗಳನ್ನು ನಡೆಸಲಿದೆ. ಅಲ್ಲಿನ ಮಾಹಿತಿ, ದತ್ತಾಂಶಗಳನ್ನು ಇಸ್ರೋ ನಿಯಂತ್ರಣ ಕೇಂದ್ರಕ್ಕೆ ರವಾನೆ ಮಾಡಲಿದೆ. 615 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು ಇದು ಯಶಸ್ವಿಯಾದರೆ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸಾಧಿಸಲಿದೆ.



ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲಿರುವ ಪ್ಲಾಸ್ಮಾ ಸಾಂದ್ರತೆ, ವಾತಾವರಣ ಮತ್ತು ಅದರಲ್ಲಿರುವ ವ್ಯತ್ಯಾಸವನ್ನು ಪತ್ತೆ ಮಾಡಲಿದೆ. ಇದಲ್ಲದೆ, ಚಂದ್ರನ ಮೇಲ್ಮೈನ ತಾಪಮಾನವನ್ನು ಅಧ್ಯಯನ ಮಾಡಲಿದೆ. ಚಂದ್ರನ ಮೇಲ್ಮೈನಲ್ಲಿ ಆಗಬಲ್ಲ ಕಂಪನಗಳ ಬಗ್ಗೆ ಅಧ್ಯಯನ ನಡೆಸಲಿದೆ. ಚಂದ್ರನಲ್ಲಿರುವ ಖನಿಜಗಳು, ಮಣ್ಣು ಮತ್ತು ಅವುಗಳ ರಾಸಾಯನಿಕ ಮಿಶ್ರಣವನ್ನು ಅಧ್ಯಯನ ನಡೆಸಲು ರೋವರ್ನಲ್ಲಿ ವಿಶೇಷ ತಂತ್ರಜ್ಞಾನ ಅಳವಡಿಕೆಯಾಗಿದೆ. ಅದೇ ರೀತಿ ಚಂದ್ರನಲ್ಲಿರುವ ನೀರಿನ ಅಂಶದ ಕುರಿತು ಅಧ್ಯಯನ ನಡೆಸಲಿದೆ.
Successful launch of #Chandrayaan3
— Gaurav Taneja (@flyingbeast320) July 14, 2023
at SriHariKota #JaiHind pic.twitter.com/G8uTV6CtPd
The Chandrayaan-3 mission by the Indian Space Research Organisation (ISRO) successfully lifted off from the Satish Dhawan Space Centre in Sriharikota, Andhra Pradesh, at 2.35 PM IST on Friday, July 14. The mission follows Chandrayaan-2 where scientists aim to demonstrate various capabilities including reaching the orbit of the moon, making a soft-landing on the lunar surface using a lander, and a rover coming out of the lander to study the surface of the moon.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm