ಬ್ರೇಕಿಂಗ್ ನ್ಯೂಸ್
03-11-20 10:08 am Headline Karnataka News Network ದೇಶ - ವಿದೇಶ
ಕೋಲ್ಕತ್ತಾ, ನವೆಂಬರ್.03: ಉಗ್ರ ಸಂಘಟನೆ ಅಲ್-ಖೈದಾ ಜತೆ ನಂಟು ಹೊಂದಿದ್ದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಅಬ್ದುಲ್ ಮೊಮಿನ್ ಮಂಡಲ್ ಎಂಬಾತನ ಬಂಧನ ಮಾಡಿದೆ. ಪಶ್ಚಿಮ ಬಂಗಾಳದ ಮುಷಿರಾಬಾದ್ ನಿವಾಸಿಯ ಬಂಧನವಾಗಿದ್ದು ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಉಗ್ರ ಸಂಘಟನೆ ನಂಟು ಹೊಂದಿದ್ದ ಎನ್ನಲಾಗಿದೆ.
ಆಗಸ್ಟ್ ತಿಂಗಳಿನಿಂದಲೇ ಎನ್ಐಎಗೆ ಇವನ ಚಟುವಟಿಕೆ ಮೇಲೆ ನಿಗಾ ಇತ್ತು. ಹತ್ತಕ್ಕೂ ಅಧಿಕ ಮಂದಿ ಜಿಹಾದಿ ಹೆಸರಿನಲ್ಲಿ ಅಲ್-ಖೈದಾ ಪರ ಕೆಲಸ ಮಾಡುತ್ತಿದ್ದು ವಿಧ್ವಂಸಕ ಕೃತ್ಯಕ್ಕೆ ಸಿದ್ಧರಾಗುತ್ತಿದ್ದಾರೆ ಎಂಬ ಮಾಹಿತಿಯಿತ್ತು. ದೆಹಲಿ, ಪಶ್ಚಿಮ ಬಂಗಾಳ ಮತ್ತು ಕೇರಳವನ್ನು ಟಾರ್ಗೆಟ್ ಮಾಡಿಕೊಂಡಿದ್ದರು.
ರಾಯಪುರದ ಮದರಸಾ ಒಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡಿಕೊಂಡಿರುವ ಅಬ್ದುಲ್ ಮೊಮಿನ್ ಮಂಡಲ್ ಅಲ್ ಖೈದಾ ಜತೆಗೆ ನಂಟು ಹೊಂದಿ ಉಗ್ರ ಸಂಘಟನೆಯ ಸಭೆಯಲ್ಲಿ ಭಾಗವಹಿಸಿರುವುದು ಬಹಿರಂಗವಾಗಿದೆ.
ಅನೇಕ ಜನರನ್ನು ಉಗ್ರ ಸಂಘಟನೆ ಕಡೆ ಸೆಳೆಯುವ ಕೆಲಸ ಮಾಡುತ್ತಿದ್ದ. ಈತನ ಮನೆ ಮೇಲೆಯೂ ದಾಳಿ ಮಾಡಲಾಗಿದ್ದು ಡಿಜಿಟಲ್ ಉಪಕರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ದಾಳಿ ನಡೆಸಿದ ವೇಳೆ ಡಿಜಿಟಲ್ ಉಪಕರಣ, ಪ್ರಮುಖ ತಾಣಗಳು, ಸ್ಥಳಗಳ ಮ್ಯಾಪ್, ದಾಖಲೆಗಳು, ಜಿಹಾದಿ ಸಾಹಿತ್ಯ, ದೇಶೀ ನಿರ್ಮಿತ ಶಸ್ತ್ರಾಸ್ತ್ರ, ಸ್ಫೋಟಕ ತಯಾರಿಸುವ ವಿಧಾನದ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಲ್-ಖೈದಾ ಜತೆಗಿನ ನಂಟಿನ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿವರೆಗೆ ಒಟ್ಟು ಹನ್ನೊಂದು ಜನರನ್ನು ಬಂಧಿಸಲಾಗಿದ್ದು ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ನಿರಂತರ ಕಾರ್ಯಾಚಾರಣೆ ನಡೆದಿದೆ. ವಿಚಾರಣೆ ನಂತರ ಮತ್ತಷ್ಟು ಸ್ಫೋಟಕ ಮಾಹಿತಿ ಹೊರಬಂದರೆ ಅಚ್ಚರಿ ಇಲ್ಲ.
National Investigation Agency (NIA) on Sunday arrested a madrasa teacher from Murshidabad who was allegedly part of an al-Qaeda module based in West Bengal and Kerala, conspiring to carry out terrorist strikes at different locations in the country, including Delhi, West Bengal and Kerala.
17-04-26 07:27 pm
HK News Staffer
ಯಾದಗಿರಿ ದೇವಸ್ಥಾನದಿಂದ ಮರಳುತ್ತಿದ್ದವರ ದುರಂತ ಅಂತ್...
17-04-26 01:39 pm
ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಸೇವಾವಧಿ...
16-04-26 10:30 pm
ಫಲಿತಾಂಶ ಬರುವ ಮೊದಲೇ ಸೋಲೊಪ್ಪಿಕೊಂಡ ಕಾಂಗ್ರೆಸ್; ದಾ...
16-04-26 09:43 pm
ಎಸ್ಸೆಸ್ಸೆಲ್ಸಿ ತೃತೀಯ ಭಾಷೆಗೆ ಅಂಕ ಬದಲು ಗ್ರೇಡ್ ;...
16-04-26 07:37 pm
17-04-26 08:08 pm
HK News Staffer
ಹೊಟ್ಟೆನೋವೆಂದು ಆಸ್ಪತ್ರೆಗೆ ಹೋಗಿದ್ದ ವ್ಯಕ್ತಿಗೆ ಬಿ...
17-04-26 11:27 am
250 ರೋಹಿಂಗ್ಯಾಗಳಿದ್ದ ಬೋಟ್ ಅಂಡಮಾನ್ ಸಮುದ್ರದಲ್ಲಿ...
16-04-26 01:09 pm
AI ಅವಾಂತರ ; ಗೂಗಲ್ 'ಜೆಮಿನಿ' ಅನ್ನೇ ಹೆಂಡತಿ ಎಂದು...
15-04-26 01:18 pm
ಅಮೆರಿಕ - ಇಸ್ರೇಲ್ ದಾಳಿಗೆ ಅವಕಾಶ ; ಗಲ್ಫ್ ರಾಷ್ಟ್ರ...
14-04-26 10:48 pm
17-04-26 08:56 pm
HK News Staffer
ಬುರುಡೆ ಗ್ಯಾಂಗ್ ಹೆಸರಿನಲ್ಲಿ ಹಾಸ್ಯ ; ಕಲಾವಿದರಿಗೆ...
17-04-26 03:02 pm
ಬೆಳ್ತಂಗಡಿಯಲ್ಲಿ ಎರಡು ಕಡೆ ಭೂಕಬಳಿಕೆ ; ವೀರೇಂದ್ರ ಹ...
17-04-26 12:33 pm
ಎಚ್ಐವಿ ಪೀಡಿತ ಮಕ್ಕಳ ಬಾಳಿಗೆ ಆಸರೆಯಾದ ಮಂಗಳೂರಿನ ತ...
17-04-26 11:25 am
ಆಟೋದಲ್ಲಿ ಒಡವೆಗಳಿದ್ದ ಬ್ಯಾಗ್ ಬಿಟ್ಟು ಹೋಗಿದ್ದ ಮಹಿ...
13-04-26 11:39 pm
17-04-26 06:48 pm
HK News Staffer
ದೂರವಾಣಿ ಮೂಲಕ ಕರೆ, ಬಾಡಿಗೆ ಮನೆಗಳಲ್ಲಿ ಮೀಟಿಂಗ್ ;...
16-04-26 10:36 pm
ಐಎಎಸ್ ಅಧಿಕಾರಿ ಎಂದು ನಂಬಿಸಿ ಸರ್ಕಾರಿ ವೈದ್ಯರಿಗೆ ವ...
16-04-26 07:35 pm
ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತಾಯಿಯನ್ನು ಮೂರನೇ...
16-04-26 12:35 pm
ಮಂತ್ರಾಲಯ ಬಳಿ ಭೀಕರ ಅಪಘಾತ ; ರಾಯರ ದರ್ಶನಕ್ಕೆ ತೆರಳ...
16-04-26 11:21 am