ಬ್ರೇಕಿಂಗ್ ನ್ಯೂಸ್
02-11-20 11:30 am Headline Karnataka News Network ದೇಶ - ವಿದೇಶ
ಶ್ರೀನಗರ, ನವೆಂಬರ್ 02: ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ಆಪರೇಶನಲ್ ಚೀಫ್ ಆಗಿದ್ದ ಡಾ.ಸೈಫುಲ್ಲಾ ಸೇನಾ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ.
ಜಮ್ಮು ಕಾಶ್ಮೀರದ ಶ್ರೀನಗರದ ರಂಗ್ರೆತ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಈ ಕಾರ್ಯಾಚರಣೆ ನಡೆಸಿದ್ದು, ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಕಮಾಂಡರ್ ಆಗಿದ್ದ ಸೈಫುಲ್ಲಾ ಹತನಾಗಿದ್ದಾನೆ. ಈ ವೇಳೆ ಆತನ ಜೊತೆಗಿದ್ದ ಉಗ್ರನನ್ನು ಭದ್ರತಾ ಪಡೆಗಳು ಜೀವಂತವಾಗಿ ವಶಕ್ಕೆ ಪಡೆದಿವೆ ಎಂದು ಐಜಿಪಿ ವಿಜಯ ಕುಮಾರ್ ಹೇಳಿದ್ದಾರೆ.
ಜಮ್ಮು ಕಾಶ್ಮೀರದ ಪೊಲೀಸರು ಮತ್ತು ಸಿಆರ್ ಪಿಎಫ್ ಪಡೆಗಳು ರಂಗ್ರೆತ್ ಏರಿಯಾದಲ್ಲಿ ಮೂವರು ಉಗ್ರರು ಅಡಗಿಕೊಂಡಿರುವುದನ್ನು ಪತ್ತೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದು ಒಬ್ಬಾತ ಜೀವಂತ ಸೆರೆಸಿಕ್ಕಿದ್ದಾನೆ. ಈ ವೇಳೆ ಸೈಫುಲ್ಲಾ ಮಿರ್ ಎಂಬಾತ ಸಾವನ್ನಪ್ಪಿದ್ದಾನೆ.


ಸೈಫುಲ್ಲಾ ಮಿರ್ ಗಾಝಿ ಹೈದರ್ ಅಲಿಯಾಸ್ ಡಾಕ್ಟರ್ ಸಾಹಬ್ 2014ರಲ್ಲಿ ಹಿಜ್ಬುಲ್ ಉಗ್ರ ಸಂಘಟನೆ ಸೇರಿದ್ದ. ಪುಲ್ವಾಮಾ ಜಿಲ್ಲೆಯ ಮಲಾಂಗ್ ಪೋರಾ ನಿವಾಸಿಯಾಗಿರುವ ಸೈಫುಲ್ಲಾನನ್ನು ರಿಯಾಜ್ ನೈಕು ಎಂಬ ಉಗ್ರ ಹಿಜ್ಬುಲ್ ಸಂಘಟನೆ ಸೇರ್ಪಡೆ ಮಾಡಿದ್ದ. ಅಲ್ಲದೆ, ಸೈಫುಲ್ಲಾನಿಗೆ ಗಾಝಿ ಹೈದರ್ ಎಂದು ನಾಮಕರಣ ಮಾಡಿದ್ದ. ಹಿಜ್ಬುಲ್ ಸಂಘಟನೆಯ ಕಮಾಂಡರ್ ಆಗಿದ್ದ ರಿಯಾಜ್ ನೈಕು ಕಳೆದ ಮೇ ತಿಂಗಳಲ್ಲಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದ. ಆಬಳಿಕ ಸೈಫುಲ್ಲಾ ಕಮಾಂಡರ್ ಆಗಿ ಸಂಘಟನೆಯನ್ನು ಮುನ್ನಡೆಸುತ್ತಿದ್ದ.
ಜಮ್ಮು ಕಾಶ್ಮೀರದ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿದ್ದ ಹತ್ತು ಉಗ್ರರಲ್ಲಿ ಸೈಫುಲ್ಲಾ ಒಬ್ಬ. ಭದ್ರತಾ ಪಡೆಗಳು ಇತ್ತೀಚೆಗಷ್ಟೇ ಮೋಸ್ಟ್ ವಾಂಟೆಡ್ ಉಗ್ರರ ಲಿಸ್ಟ್ ರೆಡಿ ಮಾಡಿತ್ತು. ಜಮ್ಮು ಕಾಶ್ಮೀರದಲ್ಲಿ ನಡೆದ ಹಲವು ಉಗ್ರರ ದಾಳಿ ಪ್ರಕರಣಗಳಲ್ಲಿ ಸೈಫುಲ್ಲಾ ಮಾಸ್ಟರ್ ಮೈಂಡ್ ಆಗಿದ್ದ. ಈತನನ್ನು ಕೊಂದಿದ್ದಕ್ಕೆ ಡಿಜಿಪಿ ದಿಲ್ ಬಾಘ್, ಭದ್ರತಾ ಪಡೆ ಮತ್ತು ಪೊಲೀಸರನ್ನು ಅಭಿನಂದಿಸಿದ್ದಾರೆ.
Hizbul Mujahideen militant commander Saifullah Mir was killed in an encounter with security forces on the outskirts of Srinagar district Sunday.
17-04-26 07:27 pm
HK News Staffer
ಯಾದಗಿರಿ ದೇವಸ್ಥಾನದಿಂದ ಮರಳುತ್ತಿದ್ದವರ ದುರಂತ ಅಂತ್...
17-04-26 01:39 pm
ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಸೇವಾವಧಿ...
16-04-26 10:30 pm
ಫಲಿತಾಂಶ ಬರುವ ಮೊದಲೇ ಸೋಲೊಪ್ಪಿಕೊಂಡ ಕಾಂಗ್ರೆಸ್; ದಾ...
16-04-26 09:43 pm
ಎಸ್ಸೆಸ್ಸೆಲ್ಸಿ ತೃತೀಯ ಭಾಷೆಗೆ ಅಂಕ ಬದಲು ಗ್ರೇಡ್ ;...
16-04-26 07:37 pm
17-04-26 08:08 pm
HK News Staffer
ಹೊಟ್ಟೆನೋವೆಂದು ಆಸ್ಪತ್ರೆಗೆ ಹೋಗಿದ್ದ ವ್ಯಕ್ತಿಗೆ ಬಿ...
17-04-26 11:27 am
250 ರೋಹಿಂಗ್ಯಾಗಳಿದ್ದ ಬೋಟ್ ಅಂಡಮಾನ್ ಸಮುದ್ರದಲ್ಲಿ...
16-04-26 01:09 pm
AI ಅವಾಂತರ ; ಗೂಗಲ್ 'ಜೆಮಿನಿ' ಅನ್ನೇ ಹೆಂಡತಿ ಎಂದು...
15-04-26 01:18 pm
ಅಮೆರಿಕ - ಇಸ್ರೇಲ್ ದಾಳಿಗೆ ಅವಕಾಶ ; ಗಲ್ಫ್ ರಾಷ್ಟ್ರ...
14-04-26 10:48 pm
17-04-26 08:56 pm
HK News Staffer
ಬುರುಡೆ ಗ್ಯಾಂಗ್ ಹೆಸರಿನಲ್ಲಿ ಹಾಸ್ಯ ; ಕಲಾವಿದರಿಗೆ...
17-04-26 03:02 pm
ಬೆಳ್ತಂಗಡಿಯಲ್ಲಿ ಎರಡು ಕಡೆ ಭೂಕಬಳಿಕೆ ; ವೀರೇಂದ್ರ ಹ...
17-04-26 12:33 pm
ಎಚ್ಐವಿ ಪೀಡಿತ ಮಕ್ಕಳ ಬಾಳಿಗೆ ಆಸರೆಯಾದ ಮಂಗಳೂರಿನ ತ...
17-04-26 11:25 am
ಆಟೋದಲ್ಲಿ ಒಡವೆಗಳಿದ್ದ ಬ್ಯಾಗ್ ಬಿಟ್ಟು ಹೋಗಿದ್ದ ಮಹಿ...
13-04-26 11:39 pm
17-04-26 06:48 pm
HK News Staffer
ದೂರವಾಣಿ ಮೂಲಕ ಕರೆ, ಬಾಡಿಗೆ ಮನೆಗಳಲ್ಲಿ ಮೀಟಿಂಗ್ ;...
16-04-26 10:36 pm
ಐಎಎಸ್ ಅಧಿಕಾರಿ ಎಂದು ನಂಬಿಸಿ ಸರ್ಕಾರಿ ವೈದ್ಯರಿಗೆ ವ...
16-04-26 07:35 pm
ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತಾಯಿಯನ್ನು ಮೂರನೇ...
16-04-26 12:35 pm
ಮಂತ್ರಾಲಯ ಬಳಿ ಭೀಕರ ಅಪಘಾತ ; ರಾಯರ ದರ್ಶನಕ್ಕೆ ತೆರಳ...
16-04-26 11:21 am