ಬ್ರೇಕಿಂಗ್ ನ್ಯೂಸ್
12-06-23 08:08 pm HK News Desk ದೇಶ - ವಿದೇಶ
ಕೋಲ್ಕತ್ತಾ, ಜೂನ್ 12: ಅಟೆಂಡರ್, ಡ್ರೈವರ್, ಕಾರ್ಮಿಕ, ಸ್ವಚ್ಛತಾ ಕೆಲಸಗಾರರು – ರೂ.4 ಲಕ್ಷ, ಕ್ಲರ್ಕ್, ನಗರಸಭೆ ನಡೆಸುವ ಶಾಲೆಯ ಶಿಕ್ಷಕರು, ಪೈಪ್ ಲೈನ್ ಇನ್ಸ್ ಪೆಕ್ಟರ್, ಅಸಿಸ್ಟೆಂಟ್ ಕ್ಯಾಶಿಯರ್ – ರೂ. 5 ಲಕ್ಷ, ಸಬ್ ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗೆ 6 ಲಕ್ಷ ರೂ... ಇದು ಇವರಿಗೆ ನೀಡಲಾಗುವ ಸಂಬಳದ ಲಿಸ್ಟ್ ಅಂತೂ ಅಲ್ಲ. ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದ ಹುದ್ದೆಗಾಗಿ ಲಂಚ ಹಗರಣದಲ್ಲಿ ನಗರಸಭೆ ಮತ್ತು ಮಹಾನಗರ ಪಾಲಿಕೆಯ ಅಧೀನದ ಗ್ರೂಪ್ ಡಿ ಮತ್ತು ಗ್ರೂಪ್ ಸಿ ಹುದ್ದೆಗಳ ಮಾರಾಟಕ್ಕೆ ಮಾಡಿರುವ ‘ರೇಟ್ ಲಿಸ್ಟ್’ ಅಂತೆ.
ಕೇಂದ್ರ ಸರಕಾರದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆಯ ಬಳಿಕ ಈ ರೀತಿಯ ಆರೋಪಿತ ರೇಟ್ ಲಿಸ್ಟ್ ಇರುವುದನ್ನು ಹೊರಗೆಡವಿದ್ದಾರೆ. ಈ ಬಗ್ಗೆ ನ್ಯೂಸ್ 18 ಇಂಗ್ಲಿಷ್ ವೆಬ್ ಸುದ್ದಿ ಪ್ರಸಾರ ಮಾಡಿದ್ದು, ಹಗರಣದ ಮಾಹಿತಿಗಳನ್ನು ನೀಡಿದೆ. ಶಿಕ್ಷಕರ ನೇಮಕಾತಿಯಲ್ಲಿ ಆಗಿದೆ ಎನ್ನಲಾಗಿರುವ ಹುದ್ದೆಗಾಗಿ ಲಂಚ ಪ್ರಕರಣದ ಬೆನ್ನತ್ತಿದ ಅಧಿಕಾರಿಗಳು ಇಲಾಖೆಗೆ ಸಂಬಂಧಿಸಿದ ವಿವಿಧ ಕಚೇರಿಗಳಿಗೆ ದಾಳಿ ನಡೆಸಿದಾಗ ಈ ರೀತಿಯ ರೇಟ್ ಲಿಸ್ಟ್ ಇರುವುದನ್ನು ಪತ್ತೆ ಮಾಡಿದ್ದಾರೆ.
2014-15ರ ಸಾಲಿನಿಂದ ಗ್ರೂಪ್ ಸಿ ಮತ್ತು ಡಿ ದರ್ಜೆಯ 17 ವಿಭಾಗದಲ್ಲಿ ರಾಜ್ಯದಾದ್ಯಂತ ಆರು ಸಾವಿರ ಹುದ್ದೆಗಳನ್ನು ನೇಮಕಾತಿ ಮಾಡಲಾಗಿದ್ದು, ಎಲ್ಲದಕ್ಕೂ ಹುದ್ದೆ ಪಡೆಯಲು ಅಭ್ಯರ್ಥಿಗಳು ಲಂಚ ನೀಡಿದ್ದಾರೆ ಎಂದು ಇಡಿ ಅಧಿಕಾರಿಗಳು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಅಭ್ಯರ್ಥಿಗಳು ನೀಡಿರುವ ಹಣದ ಮೊತ್ತ ಎಷ್ಟು, ಯಾವ ಏಜಂಟ್ ಮುಖಾಂತರ ಹಣ ನೀಡಿದ್ದಾರೆ, ಈಗ ಯಾವ ಹುದ್ದೆಯಲ್ಲಿದ್ದಾರೆ, ಎಷ್ಟು ಲಕ್ಷ ಹಣ ನೀಡಿ ಹುದ್ದೆ ಪಡೆದಿದ್ದಾರೆ, ಹಣ ಸಂಗ್ರಹಿಸಿದ ಏಜಂಟರು ಯಾರೆಲ್ಲ ಇತ್ಯಾದಿ ಮಾಹಿತಿಗಳನ್ನು ಇಡಿ ಅಧಿಕಾರಿಗಳು ಸಂಗ್ರಹಿಸಿದ್ದು, ಅದನ್ನು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಲಂಚದ ಮೊತ್ತದ ಪಾಲು ಮುನ್ಸಿಪಾಲಿಟಿಯ ಆಡಳಿತ ಹೊತ್ತುಕೊಂಡವರು, ಹಿರಿಯ ಅಧಿಕಾರಿಗಳಿಗೆ ಹೋಗಿದೆ. ಅಭ್ಯರ್ಥಿಗಳಿಂದ ಹಣ ಸಂಗ್ರಹ ಮಾಡಿದ ಏಜಂಟರ ಲಿಸ್ಟ್ ನಮ್ಮಲ್ಲಿದೆ. ತನಿಖೆ ಮುಂದುವರಿದಿದ್ದು, ಪೂರ್ತಿ ನೇಮಕಾತಿ ಪ್ರಕ್ರಿಯೆಯನ್ನು ಬದಲಾಯಿಸಿ ಲಂಚ ನೀಡಿದವರಿಗೆ ಮಾತ್ರ ಹುದ್ದೆಗಳನ್ನು ಮಾರಾಟ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಪಶ್ಚಿಮ ಬಂಗಾಳದ ಆಡಳಿತ ಪಕ್ಷದ ನಾಯಕರು ಮಾತ್ರ ಇವೆಲ್ಲ ಬಿಜೆಪಿಯ ರಾಜಕೀಯ ಅಜೆಂಡಾ ಹಿಂದಿನ ದಾಳಿ ಮಾತ್ರ ಎಂದಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕ, ಸಂಸದ ಸುಗತಾ ರಾಯ್ ಪ್ರತಿಕ್ರಿಯಿಸಿ, ಹಗರಣದ ಬಗ್ಗೆ ಸಾಕ್ಷಿಗಳಿದ್ದರೆ ಯಾರು ದೋಷಿಗಳೆಂದು ಬಹಿರಂಗ ಮಾಡಲಿ. ಅವರನ್ನು ಬಂಧಿಸಲಿ. ನಮ್ಮ ಸರಕಾರ ಯಾವುದೇ ಅಡ್ಡಿಪಡಿಸಲ್ಲ. ನಮ್ಮ ಪಕ್ಷದ ನಾಯಕರು ಅಥವಾ ಯಾರೇ ತಪ್ಪಿತಸ್ಥರಿರಲಿ, ಕೇಂದ್ರೀಯ ಏಜನ್ಸಿಗಳು ಬಂಧಿಸಲಿ ಎಂದು ಹೇಳಿದ್ದಾರೆ.
Rs 4 lakh for labour, sweeper, peon, ambulance attendant, driver, mason, sanitary assistant, dumper operator; Rs 5 lakh for clerks, teachers (in municipality run schools), pipeline inspector, assistant cashier; and Rs 6 lakh for sub assistant engineer — this is allegedly the ‘rate chart’ for positions under the group D and group C services across municipalities and municipal corporations in West Bengal, an investigation by the Enforcement Directorate has revealed.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 09:22 pm
Mangalore Correspondent
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm