ಬ್ರೇಕಿಂಗ್ ನ್ಯೂಸ್
12-06-23 06:14 pm HK News Desk ದೇಶ - ವಿದೇಶ
ಜೈಪುರ, ಜೂನ್ 12: ರಾಜಸ್ಥಾನದ ಬರಾನ್ ಜಿಲ್ಲೆಯಲ್ಲಿ ಮೇ 26ರಂದು ನಡೆದ ಸಾಮೂಹಿಕ ಮದುವೆ ಕಾರ್ಯಕ್ರಮ, ಬರೋಬ್ಬರಿ 2,143 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ವಿಶ್ವ ದಾಖಲೆಯೇ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿವ ಪ್ರಮೋದ್ ಜೈನ್ ಭಾಯಾ ಅವರ ಸಮ್ಮುಖದಲ್ಲಿ ವಿವಾಹ ಕಾರ್ಯಕ್ರಮ ನಡೆಸಲಾಯಿತು. ಹಸೆ ಮಣೆ ಏರಿದ ದಂಪತಿಗಳಿಗೆ ಗಣ್ಯರು ಆಶೀರ್ವದಿಸಿದರು.

ಅಂದ ಹಾಗೆ ಈ ಸಾಮೂಹಿಕ ಮದುವೆ ಸಮಾರಂಭವು ಎರಡು ದಾಖಲೆಗಳನ್ನು ನಿರ್ಮಿಸಿದೆ. 12 ಗಂಟೆಗಳಲ್ಲಿ ನಡೆದ ಅತೀ ಹೆಚ್ಚು ಮದುವೆ ಹಾಗೂ 24 ಗಂಟೆಗಳಲ್ಲಿ ನಡೆದ ಅತಿ ಹೆಚ್ಚು ಮದುವೆ ಎನ್ನುವ ದಾಖಲೆ ಈ ಸಾಮೂಹಿಕ ಮದುವೆ ಸಮಾರಂಭಕ್ಕೆ ದೊರಕಿದೆ. ಈ ಹಿಂದೆ 2013ರಲ್ಲಿ 963 ಜೋಡಿ ಮದುವೆಯಾಗಿದ್ದು, ಅದು ದಾಖಲೆಯನ್ನು ಹೊಂದಿತ್ತು. ಅದರ ದಾಖಲೆಯನ್ನು ಈಗಿನ ಸಮಾರಂಭ ಮುರಿದಿದೆ.


ಶ್ರೀ ಮಹಾವೀರ ಗೋಶಾಲಾ ಕಲ್ಯಾಣ ಸಂಸ್ಥಾನವು ಈ ಸಾಮೂಹಿಕ ವಿವಾಹವನ್ನು ಏರ್ಪಡಿಸಿತ್ತು. ಅದರಲ್ಲಿ ಹಿಂದೂಗಳ ಜತೆ ಮುಸ್ಲಿಂ ಜೋಡಿಗಳೂ ಮದುವೆ ಮಾಡಿಕೊಂಡಿರುವುದು ವಿಶೇಷ. ಪ್ರತಿ ದಂಪತಿಗೆ ಆಯಾ ಸಮುದಾಯದ ಪುರೋಹಿತರು, ಕ್ವಾಜಿಗಳ ಕೈಯಿಂದಲೇ ಮದುವೆ ಮಾಡಿಸಲಾಯಿತು. ಮದುವೆ ಮುಗಿದ ನಂತರ ರಾಜಸ್ಥಾನ ಸರ್ಕಾರದ ಅಧಿಕಾರಿಗಳು ದಂಪತಿಗಳಿಗೆ ಮದುವೆ ಪ್ರಮಾಣಪತ್ರಗಳನ್ನು ನೀಡಿದರು.

ಮದುವೆ ನಂತರ ಪ್ರತಿ ದಂಪತಿಗೆ ಆಭರಣ, ಹಾಸಿಗೆ, ಅಗತ್ಯ ಅಡುಗೆ ಪಾತ್ರೆಗಳು, ದೂರದರ್ಶನ, ರೆಫ್ರಿಜರೇಟರ್ಮ ಕೂಲರ್‌ನಂತಹ ಗೃಹೋಪಯೋಗಿ ಉಪಕರಣಗಳನ್ನು ಉಡುಗೊರೆಯಾಗಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಒಟ್ಟು ಹತ್ತು ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದು, ನೂತನ ವಧು ವರರಿಗೆ ಆಶೀರ್ವದಿಸಿದ್ದಾರೆ.
A mass wedding ceremony in Rajasthan’s Baran has set a new world record, bringing together 2,143 couples in a joyous celebration of love and commitment. Organized by Shri Mahaveer Goshala Kalyan Sansthan, a registered trust dedicated to serving marginalized communities, this remarkable event aimed to help underprivileged individuals fulfil their dreams of marriage.
17-07-26 02:55 pm
HK News Staffer
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
17-07-26 10:32 am
HK News Staffer
ಹಾರ್ಮುಜ್ನಲ್ಲಿ ಇರಾನ್ ಅಟ್ಟಹಾಸ! ಮತ್ತೆ ಎರಡು ಟ್ಯಾ...
14-07-26 08:20 pm
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
17-07-26 10:25 pm
HK News Staffer
ಎಸ್ಐಆರ್ ನಡುವೆ ಶಾಶ್ವತ ನಿವಾಸಿ ಪತ್ರ ಜಾರಿ ಅಕ್ರಮ ಬ...
17-07-26 07:58 pm
ಉಳ್ಳಾಲ ತೀರಕ್ಕೆ ಅಪ್ಪಳಿಸಿದ ಬೂತಾಯಿ ಮೀನುಗಳ ರಾಶಿ !...
17-07-26 07:22 pm
ಸುರತ್ಕಲ್ ಬಳಿ ಮೀನುಗಾರಿಕಾ ದೋಣಿ ಪಲ್ಟಿ ; ಸಮುದ್ರಕ್...
17-07-26 03:55 pm
ಸೌಂದರ್ಯ ಕೆಡಿಸಿದೆ ತೊಕ್ಕೊಟ್ಟು ಫ್ಲೈ ಓವರಿನ ಅನಧಿಕೃ...
15-07-26 10:44 pm
17-07-26 09:07 pm
HK News Staffer
ಮಠದಕಣಿ ಮನೆ ಕಳ್ಳತನ ಬೆನ್ನತ್ತಿದ ಬರ್ಕೆ ಪೊಲೀಸರು; ನ...
17-07-26 08:11 pm
ಬಿಸಿ ರೋಡಿನಲ್ಲಿ ಯುವತಿ ಕೊಂದ ಆರೋಪಿ ಚೇತನ್ ಪಚ್ಚನಾಡ...
17-07-26 12:58 pm
Bc Road Murder Update, Mangalore: ಏಕಮುಖದ ಪ್ರೀ...
16-07-26 09:26 pm
BC Road Murder, Crime Mangalore: ಬಿಸಿ ರೋಡ್ ಬಸ...
16-07-26 07:25 pm