ಬ್ರೇಕಿಂಗ್ ನ್ಯೂಸ್
10-04-23 06:53 pm HK News Desk ದೇಶ - ವಿದೇಶ
ನವದೆಹಲಿ, ಎ.10 : ಬಾಲಕನ ತುಟಿಗೆ ಮುತ್ತು ಕೊಡುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬೌದ್ಧ ಧರ್ಮಗುರು ದಲೈಲಾಮಾ, ಬಾಲಕ ಮತ್ತು ಆತನ ಕುಟುಂಬಕ್ಕೆ ಕ್ಷಮೆ ಯಾಚಿಸಿದ್ದಾರೆ. ಅಲ್ಲದೇ, ದಲೈಲಾಮಾ ಅವರು ತಮ್ಮನ್ನು ಭೇಟಿಯಾಗುವ ಜನರನ್ನು ಮುಗ್ಧ ಹಾಗೂ ತಮಾಷೆ ರೀತಿಯಲ್ಲಿ ಕೀಟಲೆ ಮಾಡುತ್ತಾರೆ ಎಂದು ದಲೈಲಾಮಾ ಅವರ ತಂಡ ಹೇಳಿಕೆ ನೀಡಿದೆ.
ಕ್ಷಮೆ ಯಾಚನೆಯ ಟಿಪ್ಪಣಿಯನ್ನು ದಲೈಲಾಮಾ ತನ್ನ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಕ್ಷಮಾಪಣೆ ಟಿಪ್ಪಣಿಯನ್ನು ದಲೈಲಾಮಾ ಪರವಾದ ತಂಡ ಬರೆದುಕೊಂಡಿದ್ದು, ದಲೈಲಾಮಾ ವರ್ತನೆಯಿಂದ ನೋವಾಗಿದ್ದರೆ ಆ ಬಾಲಕ ಹಾಗೂ ಅವರ ಕುಟುಂಬ ಮತ್ತು ವಿಶ್ವಾದ್ಯಂತ ಇರುವ ಸ್ನೇಹಿತರಲ್ಲಿ ಅವರು ಕ್ಷಮೆ ಯಾಚಿಸುತ್ತಾರೆ. ದಲೈಲಾಮಾ ಅವರು ತಮ್ಮನ್ನು ಭೇಟಿಯಾಗುವ ಜನರನ್ನು ಮುಗ್ಧ ಮತ್ತು ತಮಾಷೆಯ ರೀತಿಯಲ್ಲಿ ನೋಡುತ್ತಾರೆ. ಈ ಘಟನೆಯ ಬಗ್ಗೆ ಅವರು ವಿಷಾದ ವ್ಯಕ್ತಪಡಿಸುತ್ತಾರೆ ಎಂದು ಹೇಳಿದ್ದಾರೆ.

ವೈರಲ್ ಆದ ವಿಡಿಯೋದಲ್ಲಿ ದಲೈಲಾಮಾ ಬಾಲಕನ ತುಟಿಗಳಿಗೆ ಮುತ್ತಿಡುತ್ತಾ ಹಣೆ ಸ್ಪರ್ಶಿಸುತ್ತಿರುವ ದೃಶ್ಯ ಇತ್ತು. ಅಲ್ಲದೆ, ತಮ್ಮ ನಾಲಿಗೆಯನ್ನು ಹೊರಹಾಕಿ ನಾಲಿಗೆಯನ್ನು ನೆಕ್ಕುವಂತೆ ಹೇಳಿರುವ ದೃಶ್ಯಗಳು ಅದೇ ವಿಡಿಯೋದಲ್ಲಿವೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ದಲೈಲಾಮಾ ವಿರುದ್ಧ ಕಿಡಿಕಾರಿದ್ದರು.

ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರಾಗಿರುವ ದಲೈಲಾಮಾ ಈ ಹಿಂದೆ 2019ರಲ್ಲಿ ಇದೇ ರೀತಿಯ ವಿವಾದ ಸೃಷ್ಟಿಸಿಕೊಂಡಿದ್ದರು. ತಮ್ಮ ಉತ್ತರಾಧಿಕಾರಿ ಮಹಿಳೆಯಾಗಬೇಕಾದರೆ ಅವರು ನೋಡಲು ಆಕರ್ಷಕವಾಗಿರಬೇಕು ಎಂದು ಹೇಳಿದ್ದರು. ಅದು ವಿವಾದವಾದ ಬಳಿಕ ಕ್ಷಮೆ ಯಾಚಿಸಿದ್ದರು. ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ದಲೈಲಾಮಾ, ಮಹಿಳಾ ದಲೈಲಾಮಾ ಬರಬೇಕೆಂದರೆ ಅವಳು ಹೆಚ್ಚು ಆಕರ್ಷಕವಾಗಿರಬೇಕು ಎಂದು ಹೇಳಿದ್ದು ವಿವಾದಕ್ಕೆ ಒಳಗಾಗಿತ್ತು.
The Dalai Lama has apologised to a young boy after a video emerged online of the spiritual Tibetan Buddhist leader kissing him on the lips and asking him to suck his tongue. The disturbing video of the most senior spiritual figure in Tibetan Buddhism was recorded during an event in northern India's hillside city of Dharamshala back in February.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm