ಬ್ರೇಕಿಂಗ್ ನ್ಯೂಸ್
02-04-23 01:04 pm HK News Desk ದೇಶ - ವಿದೇಶ
ವಾಷಿಂಗ್ಟನ್, ಎ.2: ತೀವ್ರ ಸುಂಟರಗಾಳಿ ಸಹಿತ ಬೀಸಿದ ಬಿರುಗಾಳಿಯಿಂದ ದಕ್ಷಿಣ ಮತ್ತು ಮಿಡ್‌ವೆಸ್ಟ್ ನ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ 21 ಮಂದಿ ಮೃತಪಟ್ಟಿದ್ದಾರೆ. ಅರ್ಕಾನ್ಸಾಸ್ ರಾಜಧಾನಿಯ ಅನೇಕ ಪ್ರದೇಶಗಳು ಹಾನಿಗೀಡಾದ ದುರ್ಘಟನೆ ನಡೆದಿದೆ.
ಈ ದುರ್ಘಟನೆ ನಡೆಯುವ ಸಂದರ್ಭದಲ್ಲಿ ಇಲಿನಾಯ್ಸ್‌ನಲ್ಲಿ ತುಂಬಿದ ಸಂಗೀತ ಕಚೇರಿ ನಡೆಯುತ್ತಿತ್ತು. ಆಗ ಕಟ್ಟಡದ ಮೇಲ್ಛಾವಣಿಯು ಕುಸಿದುಬಿದ್ದಿದೆ, ಜನರು ಭಯಭೀತರಾದರು.
ಕನಿಷ್ಠ ಎಂಟು ರಾಜ್ಯಗಳಲ್ಲಿ ಸುಂಟರಗಾಳಿ ಬೀಸಿದ್ದು ಮನೆಗಳು ಮತ್ತು ಅನೇಕ ಕಟ್ಟಡಗಳು, ವಾಣಿಜ್ಯ ಸಂಕೀರ್ಣಗಳು ಹಾನಿಗೀಡಾಗಿವೆ. ಮೃತಪಟ್ಟವರಲ್ಲಿ ಟೆನ್ನೆಸ್ಸೀ ಕೌಂಟಿಯ ಏಳು ಮಂದಿ ಸೇರಿದ್ದಾರೆ. ಅರ್ಕಾನ್ಸಾಸ್‌ನ ಸಣ್ಣ ಪಟ್ಟಣವಾದ ವೈನೆಯಲ್ಲಿ ನಾಲ್ವರು, ಇಂಡಿಯಾನಾದ ಸುಲ್ಲಿವಾನ್‌ನಲ್ಲಿ ಮೂವರು ಮತ್ತು ಇಲಿನಾಯ್ಸ್‌ನಲ್ಲಿ ನಾಲ್ವರು ಮೃತಪಟ್ಟಿದ್ದಾರೆ.


ಶುಕ್ರವಾರ ರಾತ್ರಿಯಿಂದ ಶನಿವಾರದವರೆಗೆ ಅಪ್ಪಳಿಸಿದ ಬಿರುಗಾಳಿಗಳಿಂದ ಅಲಬಾಮಾ ಮತ್ತು ಮಿಸ್ಸಿಸ್ಸಿಪ್ಪಿಯಲ್ಲಿ ಕೂಡ ಜನರು ಸಾವಿಗೀಡಾಗಿದ್ದಾರೆ.
ಮೆಂಫಿಸ್‌ನ ಪಶ್ಚಿಮಕ್ಕೆ 50 ಮೈಲುಗಳು ದೂರದಲ್ಲಿ 8,000 ಜನರ ಸಮುದಾಯವಾದ ಟೆನ್ನೆಸ್ಸೀಯ ವೈನ್‌ನ ನಿವಾಸಿಗಳು, ಹೈಸ್ಕೂಲ್‌ನ ಮೇಲ್ಛಾವಣಿ ಚೂರುಚೂರು ಆಗಿವೆ, ಕಟ್ಟಡದ ಕಿಟಕಿಗಳು ಹಾರಿಹೋಗಿವೆ. ಬೃಹತ್ ಮರಗಳು ಧರೆಗುರುಳಿವೆ. ಮುರಿದು ಬಿದ್ದ ಗೋಡೆಗಳು, ಕಿಟಕಿಗಳು ಮತ್ತು ಛಾವಣಿಗಳು ಮನೆಗಳ ಅವಶೇಷಗಳನ್ನು ನೋಡಬಹುದಾಗಿದೆ.


ಇಂಡಿಯಾನಾ, ಇಲಿನಾಯ್ಸ್, ಅರ್ಕಾನ್ಸಾಸ್ ಮತ್ತು ಟೆನ್ನೆಸ್ಸೀಯಲ್ಲಿ ಸುಮಾರು 4,50,000 ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ವ್ಯಾಪಾರ, ವ್ಯವಹಾರಕ್ಕೆ ತೊಂದರೆಯುಂಟಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಅಲಬಾಮಾ ಮತ್ತು ಜಾರ್ಜಿಯಾದ ಭಾಗಗಳಿಗೆ ಸಹ ಎಚ್ಚರಿಕೆ ನೀಡಲಾಗಿದೆ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ತಿಳಿಸಿದೆ.
At least 21 people have been killed after a series of tornadoes tore through towns and cities in the United States' South and Midwest. Homes were destroyed and thousands left without power after storms caused devastation across several states. According to Washington Post, more than 60 tornado reports have been recorded.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm