ಬ್ರೇಕಿಂಗ್ ನ್ಯೂಸ್
29-03-23 05:31 pm HK News Desk ದೇಶ - ವಿದೇಶ
ನವದೆಹಲಿ, ಮಾ.29: ವಯನಾಡ್ ಸಂಸದ ರಾಹುಲ್ ಗಾಂಧಿ ಸದಸ್ಯತ್ವ ಅನರ್ಹಗೊಳಿಸಿದ್ದು ಚರ್ಚೆಗೀಡಾಗಿರುವ ನಡುವೆಯೇ ಹತ್ತು ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದ ಲಕ್ಷದ್ವೀಪದ ಸಂಸದ ಮಹಮ್ಮದ್ ಫೈಜಲ್ ಅವರ ಸದಸ್ಯತ್ವವನ್ನು ಲೋಕಸಭೆ ಕಾರ್ಯಾಲಯ ಪುನರ್ ಸ್ಥಾಪಿಸಿದೆ.
ಕೊಲೆಯತ್ನ ಪ್ರಕರಣದಲ್ಲಿ ಸಂಸದ ಮೊಹಮ್ಮದ್ ಫೈಜಲ್ ಸೇರಿದಂತೆ ಆರು ಮಂದಿಗೆ ಕಳೆದ ಜನವರಿ 11ರಂದು ಲಕ್ಷದ್ವೀಪದ ಕರವತ್ತಿ ನ್ಯಾಯಾಲಯ ಹತ್ತು ವರ್ಷಗಳ ಶಿಕ್ಷೆ ವಿಧಿಸಿತ್ತು. ಇದರ ಬೆನ್ನಲ್ಲೇ ಲೋಕಸಭೆ ಸದಸ್ಯತ್ವದಿಂದ ಫೈಜಲ್ ಅವರನ್ನು ವಜಾ ಮಾಡಲಾಗಿತ್ತು. ಆದರೆ ಫೈಜಲ್ ಕರವತ್ತಿ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಕೇರಳ ಹೈಕೋರ್ಟಿನಲ್ಲಿ ದಾವೆ ಹೂಡಿದ್ದರು. ಹೈಕೋರ್ಟ್ ಅದೇ ತಿಂಗಳ ಜನವರಿ 25ರಂದು ಶಿಕ್ಷೆಯನ್ನು ಅಮಾನತುಗೊಳಿಸಿ ತೀರ್ಪು ನೀಡಿತ್ತು.
ಈ ಬಗ್ಗೆ ಮಾರ್ಚ್ 29ರಂದು ಲೋಕಸಭೆ ಕಾರ್ಯಾಲಯದಿಂದ ಮಹಮ್ಮದ್ ಫೈಜಲ್ ಸದಸ್ಯತ್ವ ಪುನರ್ ಸ್ಥಾಪಿಸಿ ಆದೇಶ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದ ಫೈಜಲ್, ನನ್ನನ್ನು ಶಿಕ್ಷೆ ತೀರ್ಪು ನೀಡಿದ ಮರುದಿನವೇ ಸಂಸತ್ ಸದಸ್ಯತ್ವದಿಂದ ವಜಾ ಮಾಡಲಾಗಿತ್ತು. ಆದರೆ ಹೈಕೋರ್ಟ್ ಜನವರಿ 25ರಂದು ಶಿಕ್ಷೆಯನ್ನು ಅಮಾನತುಗೊಳಿಸಿ ತೀರ್ಪು ನೀಡಿದ್ದರೂ, ಇಲ್ಲಿ ವರೆಗೂ ಸದಸ್ಯತ್ವ ಸ್ಥಾನ ನೀಡದೆ ಸತಾಯಿಸಿದರು. ಇದರಿಂದಾಗಿ ನನಗೆ ಬಜೆಟ್ ಅಧಿವೇಶನಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಲೋಕಸಭೆ ಸ್ಪೀಕರ್ ಅವರಲ್ಲಿ ಕೇಳಿದಾಗ, ಅದಕ್ಕೆ ಉತ್ತರ ಇರಲಿಲ್ಲ. ರಾಹುಲ್ ಗಾಂಧಿ ಅವರ ಶಿಕ್ಷೆಯ ತೀರ್ಪು ಕೂಡ ಮೇಲಿನ ಕೋರ್ಟಿನಲ್ಲಿ ವಜಾಗೊಂಡು ಆದಷ್ಟು ಬೇಗ ಮತ್ತೆ ಸಂಸತ್ತಿಗೆ ಪ್ರವೇಶ ಪಡೆಯಲಿದ್ದಾರೆ ಎಂಬ ವಿಶ್ವಾಸ ಇದೆ ಎಂದಿದ್ದಾರೆ.
ಲೋಕಸಭೆ ಸದಸ್ಯತ್ವ ಮರು ಸ್ಥಾಪಿಸಲು ವಿಳಂಬ ಮಾಡಲಾಗುತ್ತಿದೆ ಎಂದು ಮಹಮ್ಮದ್ ಫೈಜಲ್ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಮಂಗಳವಾರ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಲೋಕಸಭೆ ಕಾರ್ಯಾಲಯ ಸಂಸದ ಸ್ಥಾನವನ್ನು ಪುನರ್ ಸ್ಥಾಪಿಸಿ ಆದೇಶ ಮಾಡಿದೆ.
P.P. Mohammed Faizal has dubbed his restoration as MP of Lakshadweep on Wednesday as an encouraging sign for senior Congress leader Rahul Gandhi who stands disqualified as Wayanad MP by the Lok Sabha Secretariat following his conviction by a Surat court for criminal defamation.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm