ಬ್ರೇಕಿಂಗ್ ನ್ಯೂಸ್
27-03-23 08:38 pm HK News Desk ದೇಶ - ವಿದೇಶ
ಮುಂಬೈ, ಮಾ.27: ಕ್ಷಮೆ ಕೇಳುವುದಕ್ಕೆ ನಾನೇನು ಸಾವರ್ಕರ್ ಅಲ್ಲ ಎಂದು ಹೇಳಿದ್ದ ರಾಹುಲ್ ಗಾಂಧಿ ಬಗ್ಗೆ ಶಿವಸೇನಾ ವರಿಷ್ಠ ಉದ್ಧವ್ ಠಾಕ್ರೆ ಕಟುವಾಗಿ ಟೀಕಿಸಿದ್ದಾರೆ. ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಸಂಪಾದಕೀಯ ಬರೆದಿದ್ದು, ಸಾವರ್ಕರ್ ಕುರಿತು ಟೀಕೆ ಮಾಡಿದ ಮಾತ್ರಕ್ಕೆ ಯಾರು ಕೂಡ ಧೈರ್ಯಶಾಲಿಯಾಗಲ್ಲ. ಇಂತಹ ಟೀಕೆಯನ್ನು ನಾವು ಸಹಿಸಲ್ಲ ಎಂದಿದ್ದಾರೆ.
ರಾಹುಲ್ ಗಾಂಧಿ, ಸಾವರ್ಕರ್ ಕುರಿತು ಅವಮಾನಕಾರಿ ಹೇಳಿಕೆ ನೀಡುತ್ತಿದ್ದಾರೆ. ಈ ರೀತಿಯ ಹೇಳಿಕೆಯಿಂದ ಜನರ ನಂಬಿಕೆ ಗಳಿಸಲು ಸಾಧ್ಯವಿಲ್ಲ. ಧೈರ್ಯಶಾಲಿ ಎನಿಸಿಕೊಳ್ಳುವುದಕ್ಕೂ ಆಗಲ್ಲ. ದೇಶಕ್ಕಾಗಿ ಪ್ರಾಣ ತೆತ್ತಿರುವ ಕುಟುಂಬದಲ್ಲಿ ರಾಹುಲ್ ಹುಟ್ಟಿದ್ದು ಸತ್ಯವೇ ಆಗಿದ್ದರೆ, ಸಾವರ್ಕರ್ ಬ್ರಿಟಿಷರ ವಿರುದ್ಧ ಹೋರಾಡಿದ್ದೂ ಅಷ್ಟೇ ಸತ್ಯ. ಬ್ರಿಟಿಷ್ ಆಡಳಿತ ಮತ್ತು ಆಗಿನ ಗುಲಾಮಿ ಪದ್ಧತಿಯ ವಿರುದ್ಧ ಸಾವರ್ಕರ್ ಹೋರಾಟ ನಡೆಸಿದ್ದರು ಎನ್ನುವುದನ್ನು ಮರೆಯಬಾರದು ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಉದ್ಧವ್ ನೇತೃತ್ವದ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಮಹಾವಿಕಾಸ್ ಅಘಾಡಿ ಎನ್ನುವ ಹೆಸರಲ್ಲಿ ಮೈತ್ರಿ ಮಾಡಿಕೊಂಡಿದ್ದು, ಕಾಂಗ್ರೆಸ್ ಮೇರು ನಾಯಕನ ವಿರುದ್ಧವೇ ಶಿವಸೇನೆ ನಾಯಕ ಕಿಡಿಕಾರಿದ್ದು ಮಹತ್ವದ್ದಾಗಿದೆ. ಸಾವರ್ಕರ್ ಕುರಿತ ಅವಹೇಳನಕಾರಿ ಹೇಳಿಕೆಯನ್ನು ಶಿವಸೇನೆ ಎಂದೂ ಸಹಿಸುವುದಿಲ್ಲ ಎಂದು ಉದ್ಧವ್ ಠಾಕ್ರೆ ಕಾಂಗ್ರೆಸಿಗೆ ಪರೋಕ್ಷವಾಗಿ ಟೀಕೆ ಮಾಡಿದ್ದಾರೆ.
ರಾಹುಲ್ ಗಾಂಧಿ, ಮೋದಿ ಸಮುದಾಯದ ಬಗ್ಗೆ ನೀಡಿದ್ದ ಹೇಳಿಕೆಯ ಹಿನ್ನೆಲೆಯಲ್ಲಿ ಸೂರತ್ ಕೋರ್ಟಿನಿಂದ ಎರಡು ವರ್ಷಗಳ ಶಿಕ್ಷೆಗೆ ಒಳಗಾಗಿದ್ದಲ್ಲದೆ, ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಯ ಬಗ್ಗೆ ಪಶ್ಚಾತ್ತಾಪ ಇದೆಯೇ, ಕ್ಷಮೆ ಕೇಳುತ್ತೀರಾ ಎಂಬ ಪ್ರಶ್ನೆಗೆ, ಕ್ಷಮೆ ಯಾಚಿಸಲು ನಾನೇನು ಸಾವರ್ಕರ್ ಅಲ್ಲ ಎಂದು ಹೇಳಿದ್ದು ಮತ್ತೊಂದು ವಿವಾದಕ್ಕೆ ಕಾರಣವಾಗಿತ್ತು.
Shiv Sena has slammed Congress leader Rahul Gandhi in its mouthpiece, Saamana, for making statements against Hindutva ideologue Veer Savarkar. The party reminded him that Savarkar fought against slavery and the British Rule, and it will not tolerate any insult to him. The editorial said, “Rahul Gandhi is repeatedly giving statements like ‘my name is not Savarkar’, but by giving such statements one doesn’t become brave nor people’s trust over Savarkar will go.”
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm