ಬ್ರೇಕಿಂಗ್ ನ್ಯೂಸ್
22-03-23 02:53 pm HK News Desk ದೇಶ - ವಿದೇಶ
ಹೊಸದಿಲ್ಲಿ, ಮಾ.22: ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ಸಾವಿರಾರು ಪೋಸ್ಟರ್ಗಳನ್ನು ದಿಲ್ಲಿಯ ಅನೇಕ ಭಾಗಗಳಲ್ಲಿ ಅಂಟಿಸಲಾಗಿದ್ದು, ಇದರ ವಿರುದ್ಧ ಪೊಲೀಸರು ವ್ಯಾಪಕ ಕಾರ್ಯಾಚರಣೆ ನಡೆಸಿದ್ದಾರೆ. 100 ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ತಮ್ಮದೇ ಸ್ವಂತ ಪ್ರಿಂಟಿಂಗ್ ಪ್ರೆಸ್ ಹೊಂದಿದ್ದಾರೆ.
ಬೃಹತ್ ಕಾರ್ಯಾಚರಣೆ ನಡೆಸಿದ ದಿಲ್ಲಿ ಪೊಲೀಸರು, ದಿಲ್ಲಿನ ವಿವಿಧ ಭಾಗಗಳಲ್ಲಿ ಅಂಟಿಸಿದ್ದ ಸುಮಾರು 2,000 ಪೋಸ್ಟರ್ಗಳನ್ನು ತೆರವುಗೊಳಿಸಿದ್ದಾರೆ. ಬಹುತೇಕ ಪೋಸ್ಟರ್ಗಳಲ್ಲಿ 'ಮೋದಿಯನ್ನು ತೊಲಗಿಸಿ, ದೇಶ ಉಳಿಸಿ' ಎಂಬ ಬರಹವಿದೆ.
ಪೋಸ್ಟರ್ಗಳಲ್ಲಿ ಪ್ರಿಂಟಿಂಗ್ ಪ್ರೆಸ್ನ ಹೆಸರು ಉಲ್ಲೇಖಿಸಿರಲಿಲ್ಲ. ಆಮ್ ಆದ್ಮಿ ಪಕ್ಷದ (ಎಎಪಿ) ಕಚೇರಿಗೆ ಕಳುಹಿಸಲಾಗುತ್ತಿತ್ತು ಎನ್ನಲಾದ ಸುಮಾರು 2,000 ಪೋಸ್ಟರ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೇಂದ್ರ ದಿಲ್ಲಿಯ ಐಪಿ ಎಸ್ಟೇಟ್ ಪ್ರದೇಶದಲ್ಲಿ ವ್ಯಾನ್ ಒಂದನ್ನು ಅಡ್ಡಗಟ್ಟಿ ಪರಿಶೀಲನೆ ನಡೆಸಿದಾಗ ಅದರಲ್ಲಿ ಪೋಸ್ಟರ್ಗಳು ಪತ್ತೆಯಾಗಿವೆ.
ಈ ಪೋಸ್ಟರ್ಗಳನ್ನು ಎಎಪಿ ಕೇಂದ್ರ ಕಚೇರಿಗೆ ತಲುಪಿಸುವಂತೆ ತನಗೆ ಸೂಚನೆ ನೀಡಲಾಗಿದೆ ಎಂದು ಪೊಲೀಸರಿಗೆ ಚಾಲಕ ತಿಳಿಸಿದ್ದಾನೆ. ಸೋಮವಾರ ಕೂಡ ಇದೇ ರೀತಿಯ ಪೋಸ್ಟರ್ಗಳನ್ನು ಎಎಪಿ ಕಚೇರಿಗೆ ತಲುಪಿಸಿದ್ದಾಗಿ ಮಾಹಿತಿ ನೀಡಿದ್ದಾನೆ. ಎಫ್ಐಆರ್ ಅನ್ನು ಎಎಪಿ ಪ್ರಶ್ನಿಸಿದೆ. ಪೋಸ್ಟರ್ಗಳಲ್ಲಿ ಆಕ್ಷೇಪಾರ್ಹವಾದ ವಿಷಯ ಏನಿದೆ ಎಂದು ಕೇಳಿದೆ. ಇದು ಮೋದಿ ಸರ್ಕಾರದ ಸರ್ವಾಧಿಕಾರದ ಪರಮಾವಧಿ ಎಂದು ಎಎಪಿ ಆರೋಪಿಸಿದೆ.
ಬಂಧಿತರಾಗಿರುವ ಪ್ರಿಂಟಿಂಗ್ ಪ್ರೆಸ್ ಮಾಲೀಕರು, 'ಮೋದಿ ಹಠಾವೋ, ದೇಶ್ ಬಚಾವೋ' ಎಂಬ 50,000 ಪೋಸ್ಟರ್ಗಳನ್ನು ಮುದ್ರಿಸುವಂತೆ ತಮಗೆ ಆರ್ಡರ್ ಬಂದಿತ್ತು ಎಂದು ತಿಳಿಸಿದ್ದಾರೆ. ಈ ಪೋಸ್ಟರ್ಗಳ ಮೇಲೆ ಪ್ರಿಂಟಿಂಗ್ ಪ್ರೆಸ್ನ ಹೆಸರು ಇಲ್ಲ ಎಂಬ ಕಾರಣಕ್ಕೆ ಮಾಲೀಕರನ್ನು ಬಂಧಿಸಲಾಗಿದೆ.
ಒಟ್ಟಾರೆ ಸುಮಾರು 10 ಸಾವಿರ ಪೋಸ್ಟರ್ಗಳನ್ನು ಪೊಲೀಸರು ಈವರೆಗೂ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಎರಡು ಪ್ರಿಂಟಿಂಗ್ ಪ್ರೆಸ್ಗಳಿಗೆ ಒಂದು ಲಕ್ಷಕ್ಕೂ ಅಧಿಕ ಪೋಸ್ಟರ್ಗಳ ಮುದ್ರಣಕ್ಕೆ ಆರ್ಡರ್ ನೀಡಲಾಗಿತ್ತು ಎಂದೂ ಹೇಳಲಾಗುತ್ತಿದೆ.
Thousands of posters targeting Prime Minister Narendra Modi, put up in various parts of Delhi, have triggered a police crackdown in which 36 cases have been filed and six people have been arrested. Two of the arrested men own a printing press.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm