ಬ್ರೇಕಿಂಗ್ ನ್ಯೂಸ್
24-02-23 08:03 pm HK News Desk ದೇಶ - ವಿದೇಶ
ತಿರುವನಂತಪುರಂ, ಫೆ.24 : ಕೋಜಿಕ್ಕೋಡ್ ನಿಂದ ಸೌದಿಯ ದಮ್ಮಾಮ್ ಹೊರಟಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ತಾಂತ್ರಿಕ ದೋಷದಿಂದಾಗಿ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿ ತಾಂತ್ರಿಕ ತೊಂದರೆ ತಿಳಿಯುತ್ತಿದ್ದಂತೆ ಪೈಲಟ್ ಎಮೆರ್ಜೆನ್ಸಿ ಲ್ಯಾಂಡಿಂಗ್ ಮಾಡಲು ಮುಂದಾಗಿದ್ದು ಇದೇ ವೇಳೆ ವಿಮಾನದಲ್ಲಿದ್ದ ಹೆಚ್ಚುವರಿ ಇಂಧನವನ್ನು ಸಮುದ್ರಕ್ಕೆ ಸುರಿದು ಅಪಾಯ ದೂರ ಮಾಡಿದ್ದಾರೆ.
ಕೋಜಿಕ್ಕೋಡ್ ವಿಮಾನ ನಿಲ್ದಾಣದಿಂದ ಬೆಳಗ್ಗೆ 9.30ರ ವೇಳೆಗೆ ಟೇಕಾಫ್ ಆಗಿದ್ದ ವಿಮಾನದ ಹಿಂಭಾಗ ರನ್ ವೇಗೆ ಬಡಿದಿದೆ ಎನ್ನಲಾಗುತ್ತಿದ್ದು, ಇದರಿಂದ ಹೈಡ್ರಾಲಿಕ್ ಬ್ರೇಕ್ ನಲ್ಲಿ ಸಮಸ್ಯೆ ಉಂಟಾಗಿತ್ತು. ಕೂಡಲೇ ವಿಮಾನವನ್ನು ತುರ್ತು ಲ್ಯಾಂಡ್ ಮಾಡಬೇಕೆಂದು ಪೈಲಟ್ ಸೂಚನೆ ರವಾನಿಸಿದ್ದರು. ಕೊಚ್ಚಿ ಅಥವಾ ತಿರುವನಂತಪುರ ನಿಲ್ದಾಣಕ್ಕೆ ಒಯ್ಯಬೇಕಾಗಿತ್ತು. ವಿಮಾನದಲ್ಲಿ ಸುಮಾರು168 ಮಂದಿ ಪ್ರಯಾಣಿಕರಿದ್ದು ಸೌದಿ ಅರೇಬಿಯಾಗೆ ತೆರಳುತ್ತಿದ್ದರು. ವಿಮಾನದಲ್ಲಿ ಸಮಸ್ಯೆ ಆಗಿರುವುದು ತಿಳಿಯುತ್ತಿದ್ದಂತೆ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರು.

ಆಕಾಶದಿಂದಲೇ ಸಮುದ್ರಕ್ಕೆ ಇಂಧನ ಸುರಿದ ಪೈಲಟ್
ವಿಮಾನವನ್ನು ತುರ್ತು ಭೂಸ್ಪರ್ಶ ಮಾಡುವ ವೇಳೆ ರನ್ ವೇ ವಿಮಾನದ ಹಿಂಭಾಗಕ್ಕೆ ಘರ್ಷಿಸಿದರೂ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇದ್ದುದರಿಂದ ಪೈಲಟ್ ಕಾಳಜಿ ಮೆರೆದಿದ್ದಾರೆ. ಹಾಗಾಗಿ ವಿಮಾನವನ್ನು ಸಮುದ್ರ ಮಾರ್ಗದಲ್ಲಿ ಹಾರಿಸಿ, ಆಕಾಶದಿಂದಲೇ ಸಮುದ್ರಕ್ಕೆ ಹೆಚ್ಚುವರಿ ಇಂಧನವನ್ನು ಸುರಿಯುವಂತೆ ಮಾಡಿದ್ದಾರೆ. ಆನಂತರ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ.

ಲ್ಯಾಂಡಿಂಗ್ ವೇಳೆ ಎಮರ್ಜೆನ್ಸಿ ಘೋಷಣೆ
ವಿಮಾನ ತುರ್ತು ಭೂಸ್ಪರ್ಶ ಆಗುತ್ತಿದ್ದ ಹಿನ್ನೆಲೆಯಲ್ಲಿ ಯಾವುದೇ ಸ್ಥಿತಿಯನ್ನು ಎದುರಿಸುವುದಕ್ಕೂ ಸಜ್ಜಾಗಿರುವಂತೆ ತಿರುವನಂತಪುರ ಏರ್ಪೋರ್ಟ್ ನಲ್ಲಿ ಸಂಪೂರ್ಣ ತುರ್ತು ಸ್ಥಿತಿ ಘೋಷಣೆ ಮಾಡಲಾಗಿತ್ತು. ವಿಮಾನ ಅಪಘಾತಕ್ಕೀಡಾದರೆ ತೆಗೆದುಕೊಳ್ಳಬೇಕಾದ ರಕ್ಷಣಾ ಕ್ರಮಗಳಿಗೆ ಸಿದ್ಧತೆ ಕೈಗೊಳ್ಳಲಾಗಿತ್ತು. ಅಗ್ನಿಶಾಮಕ ವಾಹನಗಳು, ರಕ್ಷಣಾ ಸಿಬ್ಬಂದಿ ಸರ್ವ ಸನ್ನದ್ಧರಾಗಿದ್ದರು.
A Saudi Arabia-bound Air India Express flight, that took off from Kozhikode international airport on Friday morning, made an emergency landing here after it developed a technical snag. After it developed a snag in its hydraulic systems, the flight en route to Dammam, was given permission to land at the international airport here around 12.15 pm. All the 182 passengers and crew are safe.
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm