ಬ್ರೇಕಿಂಗ್ ನ್ಯೂಸ್
21-02-23 09:53 pm HK News Desk ದೇಶ - ವಿದೇಶ
ಮುಂಬೈ, ಫೆ.21: ತನ್ನ ತಾಯಿಯನ್ನೇ ಕೊಲೆಗೈದು ಆಕೆಯ ದೇಹದ ಭಾಗಗಳನ್ನು ಫ್ರೈ ಮಾಡಿ ತಿಂದಿರುವ ಆರೋಪದಲ್ಲಿ ನೇಣು ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿರುವ ವ್ಯಕ್ತಿಗೆ ಮುಂಬೈ ಹೈಕೋರ್ಟ್, ಮೂರು ದಿನಗಳ ಕಾಲ ಮಗಳ ಮದುವೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದೆ.
ಕೊಲ್ಲಾಪುರ ಮೂಲದ ಸುನಿಲ್ ರಾಮ ಕುಚುಕೊರವಿ ಎಂಬಾತನಿಗೆ ಕಳೆದ 2021ರ ಜುಲೈನಲ್ಲಿ ಹೈಕೋರ್ಟ್ ನೇಣು ಗಂಬಕ್ಕೇರಿಸಿ ಸಾಯುವ ವರೆಗೂ ಹಗ್ಗದಲ್ಲಿ ನೇತಾಡಿಸುವ ಶಿಕ್ಷೆಯನ್ನು ಪ್ರಕಟಿಸಿತ್ತು. ಅತ್ಯಂತ ಅಪರೂಪದ ಪ್ರಕರಣ ಆಗಿರುವುದರಿಂದ ಸಮಾಜಕ್ಕೆ ಸಂದೇಶ ಹೋಗಬೇಕು ಅನ್ನುವ ನೆಲೆಯಲ್ಲಿ ಈ ರೀತಿಯ ಘೋರ ಶಿಕ್ಷೆಯನ್ನು ನೀಡಲಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದರು.
ಆರೋಪಿಯ ಮಗಳಿಗೆ ಮದುವೆ ನಿಶ್ಚಯವಾಗಿದ್ದು, ವಾರದ ಮಟ್ಟಿಗೆ ಪೆರೋಲ್ ಮೇಲೆ ಕಳುಹಿಸಲು ಅವಕಾಶ ನೀಡಬೇಕು ಎಂದು ಕೈದಿಯ ಪರವಾಗಿ ಯುಗ್ ಮೋಹಿತ್ ಚೌಧರಿ ಹೈಕೋರ್ಟಿನಲ್ಲಿ ವಾದ ಮಂಡಿಸಿದ್ದರು. ಸುನಿಲ್ ರಾಮ್ ಅಂತಹ ವ್ಯಕ್ತಿ ಆಗಿರಲಿಲ್ಲ. ಅಪರಾಧ ಹಿನ್ನೆಲೆಯವರೂ ಅಲ್ಲ. ಆತನ ಸಾಯಿಸುವ ಹಿಂದಿನ ಉದ್ದೇಶ ಏನಿತ್ತು ಅನ್ನೋದು ಗೊತ್ತಿಲ್ಲ. ತಲೆನೋವಿನ ಕಾರಣಕ್ಕೆ ಲಿಕ್ಕರ್ ಸೇವನೆ ಮಾಡುತ್ತಿದ್ದ. ಬುದ್ಧಿ ಸ್ಥಿಮಿತ ಇಲ್ಲದ ಸಂದರ್ಭದಲ್ಲಿ ಕೃತ್ಯ ಎಸಗಿದ್ದಾನೆ ಎಂದು ವಕೀಲರು ಹೇಳಿದರು. ಎಎಸ್ ಗಡ್ಕರಿ ಮತ್ತು ಪಿ.ಡಿ ನಾಯ್ಕ್ ಅವರಿದ್ದ ನ್ಯಾಯಪೀಠವು, ವಾರದ ಮಟ್ಟಿಗೆ ಪೆರೋಲ್ ನೀಡಲು ನಿರಾಕರಿಸಿತು. ಆದರೆ ಮೂರು ದಿನಗಳ ಮಟ್ಟಿಗೆ ಪೊಲೀಸ್ ಭದ್ರತೆಯಲ್ಲಿ ಮದುವೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಒದಗಿಸಿತು.
ಬಿಪಿಎಲ್ ಕುಟುಂಬ ಆಗಿರುವುದರಿಂದ ಪೊಲೀಸರನ್ನು ಕರೆದೊಯ್ಯಲು ಹಣ ತೆರುವುದು ಸಾಧ್ಯವಿಲ್ಲ. ಅದನ್ನು ವಿನಾಯ್ತಿ ಮಾಡಬೇಕೆಂದು ವಕೀಲರು ಕೇಳಿಕೊಂಡಿದ್ದಕ್ಕೆ ಒಪ್ಪಿದ ನ್ಯಾಯಾಧೀಶರು, ಫೆ.23ರಿಂದ 25ರ ವರೆಗೆ ಬೆಳಗ್ಗೆ 9ರಿಂದ 6ರ ವರೆಗೆ ಜೈಲಿನಿಂದ ಪೊಲೀಸರ ಸುಪರ್ದಿಯಲ್ಲೇ ಮದುವೆ ಕಾರ್ಯಕ್ರಮಕ್ಕೆ ಒಯ್ಯಬಹುದೆಂದು ತಿಳಿಸಿದರು. ದಿನವೂ ಪೊಲೀಸರೇ ಆತನನ್ನು ಕರೆದೊಯ್ದು ಮತ್ತೆ ಜೈಲಿಗೆ ತಂದು ಬಿಡಬೇಕೆಂದು ನಿರ್ದೇಶನ ನೀಡಿದ್ದಾರೆ.
The Bombay High Court has permitted a man convicted for killing his mother and frying her organs, to attend the wedding of his daughter under police escort. In July 2021, Kolhapur man Sunil Rama Kuchkoravi was sentenced to be hanged by the neck till he was dead, for the offence of murder, subject to confirmation by the High Court. The judge had also remarked that the case was the rarest of rare as it shook the social conscience of society.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm