ಬ್ರೇಕಿಂಗ್ ನ್ಯೂಸ್
08-02-23 09:18 pm HK News Desk ದೇಶ - ವಿದೇಶ
ಇಸ್ತಾಂಬುಲ್, ಫೆ.8 : ಭೂಕಂಪದಲ್ಲಿ ಮೃತರ ಸಂಖ್ಯೆ 11 ಸಾವಿರಕ್ಕೇರಿಕೆ, ಪರಿಹಾರಕ್ಕೆ ಭಾರತದಿಂದ 5 ವಿಮಾನ ರವಾನೆ
ಅಂಕಾರ: ಎರಡು ಪ್ರಬಲ ಭೂಕಂಪಗಳ ಪರಿಣಾಮ ದಕ್ಷಿಣ ಟರ್ಕಿ ಮತ್ತು ನೆರೆಯ ಸಿರಿಯಾ ದೇಶಗಳಲ್ಲಿ ವಿನಾಶ ತಾಂಡವವಾಡಿದೆ.
ದುರಂತದ ಪ್ರಮಾಣ ಈಗಷ್ಟೇ ಸ್ಪಷ್ಟವಾಗುತ್ತಿದ್ದು, ಸಾವಿನ ಸಂಖ್ಯೆ 11,000 ಮೀರಿದೆ. ಅವಶೇಷಗಳ ನಡುವಿನಿಂದ ಬದುಕುಳಿದಿರಬಹುದಾದವರನ್ನು ರಕ್ಷಿಸಲು ರಕ್ಷಣಾ ಕಾರ್ಯಕರ್ತರು ಹೆಣಗಾಡುತ್ತಿದ್ದಾರೆ. ಈ ಪೈಕಿ ಟರ್ಕಿಯೊಂದರಲ್ಲೇ 8500 ಜನರು ಮೃತಪಟ್ಟಿದ್ದಾರೆ ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಹೇಳಿದ್ದಾರೆ. ಟರ್ಕಿ, ಸಿರಿಯಾಗೆ ಭಾರತದಿಂದ ಪರಿಹಾರ ತಂಡಗಳ ಐದು ವಿಮಾನಗಳನ್ನು ಕಳುಹಿಸಿ ಕೊಡಲಾಗಿದೆ. ಮತ್ತೊಂದೆಡೆ, ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರ ಟರ್ಕಿ ಪ್ರವಾಸವನ್ನು ರದ್ದುಪಡಿಸಲಾಗಿದೆ. ಭೂಕಂಪದಿಂದ ತತ್ತರಿಸಿರುವಾಗ ಟರ್ಕಿಗೆ ಬರುವುದ ಬೇಡ ಎಂದು ಅಲ್ಲಿನ ಸರ್ಕಾರ ಹೇಳಿದ್ದರಿಂದ, ಷರೀಫ್ ಅನಿವಾರ್ಯವಾಗಿ ತಮ್ಮ ಪ್ರವಾಸ ರದ್ದು ಮಾಡಿದ್ದಾರೆ.


ಭೂಕಂಪ ಸಂಭವಿಸಿದ ಮೊದಲ ದಿನವಾದ ಸೋಮವಾರ ಪರಿಹಾರ ಕಾರ್ಯಾಚರಣೆಗೆ ಸ್ವಲ್ಪ ಹಿನ್ನೆಡೆಯಾಗಿತ್ತು. ಆದರೆ, ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎದು ಎರ್ಡೋಗನ್ ಅವರು ಹೇಳಿದ್ದಾರೆ. ಯಾವುದೇ ಪ್ರಜೆ ಬೀದಿಯಲ್ಲಿ ಉಳಿಯಲು ನಾವು ಬಿಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಸರ್ಕಾರಿ ನಿಯಂತ್ರಿತ ಸಿರಿಯಾ ಪ್ರದೇಶದಲ್ಲಿ 1,250 ಜನರು ಮೃತಪಟ್ಟರೆ, ಬಂಡುಕೋರರು ನಿಯಂತ್ರಣದಲ್ಲಿರುವ ಪ್ರದೇಶದಲ್ಲಿ ಕನಿಷ್ಠ 1280 ಮಂದಿ ಸಾವಿಗೀಡಾಗಿದ್ದಾರೆ ಎಂದು ಸಿರಿಯಾ ಹೇಳಿಕೊಂಡಿದೆ.
ಟರ್ಕಿ, ಸಿರಿಯಾಗೆ ಭಾರತದಿಂದ ಪರಿಹಾರ ತಂಡಗಳ ಐದು ವಿಮಾನ
ಸರಣಿ ಭೂಕಂಪದಿಂದ ತತ್ತರಿಸಿರುವ ಟರ್ಕಿ ಮತ್ತು ಸಿರಿಯಾ ಜನರಿಗೆ ನೆರವು ನೀಡುವುದಕ್ಕಾಗಿ ಭಾರತದ ಐದು ವಿಮಾನಗಳನ್ನು ಕಳುಹಿಸಲಾಗಿದೆ. ಇದರಲ್ಲಿ ತಜ್ಞ ವೈದ್ಯರು, ಪರಿಹಾರ ಕಾರ್ಯಾಚರಣೆ ತಂಡ, ಪರಿಹಾರ ಸಾಮಾಗ್ರಿ, ಔಷಧಗಳನ್ನು ಕಳುಹಿಸಿಕೊಡಲಾಗಿದೆ. ಜತೆಗೆ ಡಾಗ್ ಸ್ಕಾಟ್ ಕೂಡ ಇದೆ.
Five back-to-back earthquakes since Monday have killed over 8,300 people and left tens of thousands injured in Turkey and Syria. Officials and medics said 8,574 people have died in Turkey and 2,662 in Syria, bringing the total to around 11,200. On Monday, an earthquake of magnitude 7.8 centered in the Pazarcik district jolted Kahramanmaras and hit several provinces, including Gaziantep, Sanliurfa, Diyarbakir, Adana, Adiyaman, Malatya, Osmaniye, Hatay, and Kilis. Later in the day, an earthquake of 7.6 magnitude centred in Kahramanmaras's Elbistan district jolted the region
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm