ಬ್ರೇಕಿಂಗ್ ನ್ಯೂಸ್
01-02-23 03:34 pm HK News Desk ದೇಶ - ವಿದೇಶ
ನವದೆಹಲಿ, ಫೆ.1: ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಈ ಸಾಲಿನ ಬಜೆಟ್ ಮಂಡಿಸಿದ್ದು ಆದಾಯ ತೆರಿಗೆದಾರರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಐದು ಲಕ್ಷ ಇದ್ದ ಆದಾಯ ತೆರಿಗೆ ಮಿತಿಯನ್ನು 7 ಲಕ್ಷಕ್ಕೆ ಏರಿಸಿದ್ದು ಅಲ್ಲಿ ವರೆಗೆ ತೆರಿಗೆ ಇರುವುದಿಲ್ಲ ಎಂದು ಹೇಳಿದ್ದಾರೆ.
ಸದ್ಯ ಹಳೆಯ ಹಾಗೂ ಹೊಸ ತೆರಿಗೆ ಪದ್ಧತಿ ಪ್ರಕಾರ 5 ಲಕ್ಷ ರೂ. ಆದಾಯದ ವರೆಗೆ ಯಾವುದೇ ತೆರಿಗೆ ಇಲ್ಲ. ಇದೀಗ ಹೊಸ ತೆರಿಗೆ ಪದ್ಧತಿ ಅಡಿಯಲ್ಲಿ ಮಿತಿಯನ್ನು 7 ಲಕ್ಷ ರೂ.ಗೆ ಏರಿಕೆ ಮಾಡಿದ್ದು, ಇಷ್ಟು ಆದಾಯ ಇರುವವರು ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಇದರಿಂದ 9 ಲಕ್ಷ ರೂ. ಆದಾಯ ಇರುವವರು ಮುಂದೆ 45,000 ಸಾವಿರ ರೂ. ತೆರಿಗೆ ಪಾವತಿಸಬೇಕಾಗುತ್ತದೆ. ಇದು ಆದಾಯದ ಶೇ. 5ರಷ್ಟು ಮಾತ್ರ ಆಗಿರಲಿದೆ. ಸದ್ಯ ಪಾವತಿಸುತ್ತಿರುವ 65,000 ರೂ. ತೆರಿಗೆಗೆ ಹೋಲಿಸಿದರೆ ತೆರಿಗೆ ಶೇ. 25ರಷ್ಟು ಇಳಿಕೆ ಎಂದವರ ಲೆಕ್ಕಾಚಾರ.
ಇದೇ ರೀತಿ 15 ಲಕ್ಷ ರೂ. ಆದಾಯ ಪಡೆಯುವವರು ಮುಂದೆ 1.5 ಲಕ್ಷ ರೂ. ತೆರಿಗೆ ಪಾವತಿಸಬೇಕಾಗುತ್ತದೆ. ಇದರಿಂದ ಆದಾಯದ ಶೇ. 10ರಷ್ಟು ತೆರಿಗೆಯನ್ನಷ್ಟೇ ಜನರು ಪಾವತಿಸಲಿದ್ದಾರೆ. ಈಗ ಪಾವತಿಸುತ್ತಿರುವ 1,87,500 ರೂ.ಗೆ ಹೋಲಿಸಿದರೆ ಇದು ಶೇ. 20ರಷ್ಟು ಕಡಿಮೆಯಾಗುತ್ತದೆ.
ಹೊಸ ತೆರಿಗೆ ಪದ್ಧತಿಗೂ ಸ್ಟ್ಯಾಂಡರ್ಡ್ ಡಿಡಕ್ಷನ್
ಹೊಸ ತೆರಿಗೆ ಪದ್ಧತಿಯಡಿಯಲ್ಲಿ ಸ್ಡ್ಯಾಂಡರ್ಡ್ ಡಿಡಕ್ಷನ್ ಅನ್ನು ಹೊಸತಾಗಿ ಆರಂಭಿಸಲಾಗಿದೆ. 15.5 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಇರುವ ವೇತನದಾರರು ಮತ್ತು ಪಿಂಚಣಿದಾರರಿಗೆ 52,500 ರೂ. ಸ್ಟ್ಯಾಂಡರ್ಡ್ ಡಿಡಕ್ಷನ್ ಸಿಗಲಿದೆ. ಅಲ್ಲದೆ, ಸದ್ಯದ ಪದ್ಧತಿಯಲ್ಲಿ ಸರ್ಚಾರ್ಜ್ ಸೇರಿ ಗರಿಷ್ಠ ತೆರಿಗೆ ಶೇ. 42.7 ಆಗಿತ್ತು. ಇದೀಗ ಗರಿಷ್ಠ ಸರ್ಚಾರ್ಜ್ ಅನ್ನು ಶೇ.37ರಿಂದ ಶೇ.25ಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದ ಹೊಸ ಪದ್ಧತಿ ಪ್ರಕಾರ ಗರಿಷ್ಠ ತೆರಿಗೆ ಶೇ. 39 ಆಗಿರಲಿದೆ.
ಹಿರಿಯ ನಾಗರಿಕರ ಠೇವಣಿಗಳ ಗರಿಷ್ಟ ಮಿತಿ, ಬಡ್ಡಿ ದರ ಹೆಚ್ಚಳ
ಇದೇ ವೇಳೆ, ಹಿರಿಯ ನಾಗರಿಕರ ಠೇವಣಿಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಉಳಿತಾಯ ಖಾತೆಗಳಿಗೆ ಇದ್ದ ಗರಿಷ್ಠ ಠೇವಣಿ ಮಿತಿಯನ್ನು ಹೆಚ್ಚಿಸಿದ್ದು ಅವರಿಗೆ ನೀಡುತ್ತಿದ್ದ ಬಡ್ಡಿ ದರವನ್ನೂ ಹೆಚ್ಚಿಸಲಾಗಿದೆ. ಇದರ ಜೊತೆಗೆ, ಮಾಸಿಕ ಆದಾಯದ ಮಾದರಿ ಠೇವಣಿ ಮಿತಿಯನ್ನೂ ಹೆಚ್ಚಿಸಲಾಗಿದೆ.
ಹಿರಿಯ ನಾಗರಿಕರು ಉಳಿತಾಯ ಖಾತೆಗಳಲ್ಲಿ ಗರಿಷ್ಠ 15 ಲಕ್ಷಗಳನ್ನು ಮಾತ್ರ ಇಡಲು ಅವಕಾಶವಿತ್ತು. ಈ ಮಿತಿಯನ್ನು ಹೆಚ್ಚಿಸಿದ್ದು ತಮ್ಮ ಖಾತೆಯಲ್ಲಿ 30 ಲಕ್ಷ ರೂ. ವರೆಗೆ ಠೇವಣಿ ಇಟ್ಟುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಹಿರಿಯ ನಾಗರಿಕರ ಉಳಿತಾಯ ಠೇವಣಿಗಳ (Senior Citizens' Savings Scheme - SCSS) ಮೇಲಿನ ಬಡ್ಡಿ ದರವನ್ನು ಏರಿಸಲು ನಿರ್ಧರಿಸಲಾಗಿದೆ. ಹಿರಿಯ ನಾಗರಿಕರ ಉಳಿತಾಯ ಖಾತೆಗಳ ಮೇಲಿನ ವಾರ್ಷಿಕ ಬಡ್ಡಿ ದರ ಶೇ. 7.4ರಿಂದ ಶೇ.7.6ರ ವರೆಗೆ ಹೆಚ್ಚಾಗಲಿದೆ.
FM Sitharaman announced Mahila Samman Bachat Patra- a one-time new small savings scheme – for a two-year period up to March 2025. This initiative will avail a deposit facility for a woman up to ₹two lakh for two-year period at a fixed interest rate of 7.5% with partial withdrawal option.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am