ಬ್ರೇಕಿಂಗ್ ನ್ಯೂಸ್
30-01-23 08:46 pm HK News Desk ದೇಶ - ವಿದೇಶ
ಪೇಶಾವರ, ಜ.30: ಪಾಕಿಸ್ಥಾನದ ಉತ್ತರ ಪ್ರಾಂತ್ಯ ಪೇಶಾವರ ನಗರದ ಮಸೀದಿಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದು, 46 ಮಂದಿ ಸಾವಿಗೀಡಾಗಿದ್ದು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸೋಮವಾರ ಮಧ್ಯಾಹ್ನ ಮಸೀದಿಯಲ್ಲಿ ಕಿಕ್ಕಿರಿದು ತುಂಬಿಕೊಂಡು ಪ್ರಾರ್ಥನೆ ನಡೆಸುತ್ತಿದ್ದಾಗಲೇ ತಾಲಿಬಾನಿ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಮೃತಪಟ್ಟವರಲ್ಲಿ ಹೆಚ್ಚಿನವರು ಪೊಲೀಸರು, ಭದ್ರತಾ ಸಿಬಂದಿ ಇದ್ದಾರೆ ಎಂದು ಆರೋಗ್ಯ ಸಿಬಂದಿ ತಿಳಿಸಿದ್ದಾರೆ.
ಮಧ್ಯಾಹ್ನ 1.40ಕ್ಕೆ ಪೊಲೀಸ್ ಲೈನ್ಸ್ ಪ್ರದೇಶದ ಮಸೀದಿಯಲ್ಲಿ ಸ್ಫೋಟ ಸಂಭವಿಸಿದೆ. ಪೊಲೀಸರು, ಸೇನಾ ಸಿಬಂದಿ ಹೆಚ್ಚಾಗಿ ಅಲ್ಲಿ ಪ್ರಾರ್ಥನೆಗೆ ಸೇರಿದ್ದರು. ಬಾಂಬರ್ ಆಗಿದ್ದವನು ಪ್ರಾರ್ಥನೆಗೆ ಸೇರಿದ್ದವರಲ್ಲಿ ಮೊದಲ ಸಾಲಿನಲ್ಲಿದ್ದ ಎಂದು ಅಧಿಕಾರಿಗಳು ಸಂಶಯ ಪಟ್ಟಿದ್ದಾರೆ. ತೆಹ್ರೀಕ್ ಇ- ತಾಲಿಬಾನ್ ಪಾಕಿಸ್ಥಾನಿ ಇದರ ಕಮಾಂಡರ್ ಉಮರ್ ಖಾಲಿದ್ ಖುರಸಾನಿ, ಇದು ತಾಲಿಬಾನ್ ಪರವಾಗಿ ನಡೆಸಿರುವ ಸುಸೈಡ್ ಬಾಂಬರ್ ಕೃತ್ಯ ಎಂದು ಹೇಳಿದ್ದಾನೆ. ಕಳೆದ ಬಾರಿ ಅಫ್ಘಾನಿಸ್ತಾನದಲ್ಲಿ ತನ್ನ ಸೋದರನ ಹತ್ಯೆಗೆ ಪ್ರತೀಕಾರವಾಗಿ ಈ ಕೃತ್ಯ ಎಸಗಿದ್ದೇವೆ ಎಂದಿದ್ದಾನೆ. ತೆಹ್ರೀಕ್ ಸಂಘಟನೆ, ಪಾಕಿಸ್ಥಾನದಲ್ಲಿರುವ ತಾಲಿಬಾನಿ ಸಂಘಟನೆ ಎಂದು ಕರೆಸಿಕೊಂಡಿದೆ.

![]()
ಪೇಶಾವರ ನಗರದ ಎಸ್ಪಿ ಶಾಜಾದ್ ಕೌಕಾಬ್ ಟಾರ್ಗೆಟ್ ಇಟ್ಟುಕೊಂಡು ದಾಳಿ ನಡೆದಿತ್ತು. ಶಾಜಾದ್ ಇರುವ ಎಸ್ಪಿ ಕಚೇರಿ ದಾಳಿ ನಡೆದಿರುವ ಮಸೀದಿ ಬಳಿಯಲ್ಲೇ ಇದೆ. ಮಧ್ಯಾಹ್ನ ಶಾಜಾದ್ ಕೌಕಾಬ್ ಪ್ರಾರ್ಥನೆಗೆ ಬಂದಿದ್ದು, ಒಳಗೆ ಎಂಟರ್ ಆಗುತ್ತಲೇ ಬ್ಲಾಸ್ಟ್ ಆಗಿತ್ತು. ಇದರಿಂದಾಗಿ ಶಾಜಾದ್ ಬಚಾವ್ ಆಗಿದ್ದಾರೆ.
A Taliban suicide bomber blew himself up in a mosque packed with worshippers during afternoon prayers on Monday in the high-security zone in Pakistan's restive northwestern Peshawar city, killing 46 people and wounding nearly 150 others, mostly policemen, officials said. The blast occurred inside the mosque in the Police Lines area around 1.40 pm when worshippers, which included personnel of the police, army and bomb disposal squad - were offering the Zuhr (afternoon) prayers.
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm