ಬ್ರೇಕಿಂಗ್ ನ್ಯೂಸ್
28-01-23 05:47 pm HK News Desk ದೇಶ - ವಿದೇಶ
ನವದೆಹಲಿ, ಜ.28: ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಮುಖ್ಯ ಭೂಮಿಕೆಯಲ್ಲಿರುವ ಹಿಂದಿಯ ಪಠಾಣ್ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಮೂರೇ ದಿನಗಳಲ್ಲಿ 313 ಕೋಟಿ ಗಳಿಕೆ ಕಂಡಿದೆ.
ಜನವರಿ 25ರಂದು ತೆರೆ ಕಂಡ ಚಿತ್ರ ಮೂರನೇ ದಿನ ಹಿಂದಿಯಲ್ಲಿ ₹38 ಕೋಟಿ ನಿವ್ವಳ ಗಳಿಕೆ ಕಂಡಿದೆ. ಇತರೆ ಭಾಷೆಗಳಲ್ಲಿ ₹1.25 ಕೋಟಿ ಗಳಿಸಿದೆ ಎಂದು ಚಿತ್ರ ನಿರ್ಮಾಣ ಮಾಡಿರುವ ಯಶ್ ರಾಜ್ ಫಿಲ್ಮ್ಸ್ ತಿಳಿಸಿದೆ.

ಮೂರನೇ ದಿನ ಚಿತ್ರವು ಭಾರತದಲ್ಲಿ ₹39.25 ನಿವ್ವಳ ಗಳಿಕೆ (ಒಟ್ಟು ₹47ಕೋಟಿ) ಕಂಡಿದ್ದು, ವಿದೇಶದಲ್ಲಿ ಒಟ್ಟು ₹43 ಕೋಟಿ ಗಳಿಸಿದೆ. ಒಟ್ಟಾರೆ ವಿಶ್ವದಾದ್ಯಂತ ಮೂರನೇ ದಿನದ ಗಳಿಕೆ ₹90 ಕೋಟಿ ಆಗಿದೆ’ ಎಂದು ಸಂಸ್ಥೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
4 ವರ್ಷಗಳ ದೀರ್ಘ ವಿರಾಮದ ಬಳಿಕ ತೆರೆ ಕಂಡಿರುವ ಶಾರುಖ್ ಖಾನ್ ಅವರ ಚಿತ್ರ ಮೊದಲ ದಿನವೇ ವಿಶ್ವದಾದ್ಯಂತ ₹106 ಕೋಟಿ ಗಳಿಸಿತ್ತು. ಎರಡನೇ ದಿನ ₹113.6 ಕೋಟಿ ಮತ್ತು ಮೂರನೇ ದಿನ ₹90 ಕೋಟಿ ಗಳಿಸಿದೆ.

ಮೂರು ದಿನಗಳ ಬಳಿಕ ಚಿತ್ರ ಭಾರತದಲ್ಲಿ ₹201 ಕೋಟಿ ಮತ್ತು ವಿದೇಶದಲ್ಲಿ ₹112 ಕೊಟಿ ಗಳಿಕೆ ಕಂಡಿದೆ. ಪಠಾಣ್ ಚಿತ್ರವು ಮೊದಲ ದಿನ ಭಾರತ ಮತ್ತು ವಿದೇಶದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
‘ಪಠಾಣ್ ಚಿತ್ರವನ್ನು ವಿಶ್ವದಾದ್ಯಂತ ಇರುವ ಭಾರತೀಯರು ಆಶೀರ್ವದಿಸಿದ್ದಾರೆ. ಚಿತ್ರ ಮುನ್ನುಗ್ಗುತ್ತಿರುವ ಪರಿ ಅಭೂತಪೂರ್ವ ಮತ್ತು ಐತಿಹಾಸಿಕವಾದದ್ದು’ಎಂದು ಯಶ್ ರಾಜ್ ಫಿಲ್ಮ್ಸ್ ಸಿಇಒ ಅಕ್ಷಯೆ ವಿಧಾನಿ ಹೇಳಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಪ್ರಕಾರ, ಪಠಾಣ್ ಚಿತ್ರವು 21 ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್, ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Bollywood superstar Shah Rukh Khan made a grand comeback to the big screen with 'Pathaan', which has minted a whopping Rs 313 crore in worldwide gross earnings in three days, movie critic Taran Adarsh said on Saturday 'Pathaan' marks SRK's comeback in a lead role after five years. He last played the lead in 'Zero' in 2018, which turned out to be a massive failure at the box office.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
17-10-26 11:09 am
HK News Staffer
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am