ಬ್ರೇಕಿಂಗ್ ನ್ಯೂಸ್
16-01-23 07:41 pm HK News Desk ದೇಶ - ವಿದೇಶ
ಕಠ್ಮಂಡು, ಜ.16: ನೇಪಾಳದ ಪೊಖರಾದಲ್ಲಿ ಪತನವಾದ ಯೇತಿ ಏರ್ಲೈನ್ಸ್ಗೆ ಸೇರಿದ ಪ್ರಯಾಣಿಕ ವಿಮಾನದ ಬ್ಲ್ಯಾಕ್ ಬಾಕ್ಸ್ಅನ್ನು ಅಪಘಾತ ನಡೆದ ಸ್ಥಳದಿಂದ ಸೋಮವಾರ ವಶಕ್ಕೆ ತೆಗೆದುಕೊಳ್ಳಲಾಗಿದೆ. ಕಾಣೆಯಾಗಿರುವ 4 ಮಂದಿಗಾಗಿ ಶೋಧಕಾರ್ಯವನ್ನು ತೀವ್ರಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
68 ಮೃತದೇಹಗಳಲ್ಲಿ 35 ಮೃತದೇಹಗಳ ಗುರುತು ಪತ್ತೆ ಮಾಡಲಾಗಿದೆ. ಶೋಧ ಕಾರ್ಯಾಚರಣೆ ಪ್ರಕ್ರಿಯೆ ಸಂಪೂರ್ಣವಾದ ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಕಸ್ಕಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶೋಧ ಮತ್ತು ರಕ್ಷಣಾ ಕಾರ್ಯಕರ್ತರು 300 ಮೀಟರ್ ಆಳದ ಕಂದಕಕ್ಕೆ ಇಳಿದು ವಿಮಾನದ ಕಾಕ್ಪಿಟ್ ಧ್ವನಿಮುದ್ರಕ(ಸಿವಿಆರ್) ಮತ್ತು ವಿಮಾನದ ಡೇಟಾ ಮುದ್ರಕವನ್ನು(ಎಫ್ಡಿಆರ್) ಹುಡುಕಿ ತಂದಿದ್ದಾರೆ. ರೇಡಿಯೊ ಪ್ರಸರಣ ಮತ್ತು ಕಾಕ್ಪಿಟ್ನ ಇತರ ಶಬ್ದಗಳನ್ನು ಸಿವಿಆರ್ನಲ್ಲಿ ಧ್ವನಿಮುದ್ರಣವಾಗಿರುತ್ತದೆ. ವಿಮಾನದ ವೇಗ, ವಿಮಾನ ಹಾರಾಟದ ಎತ್ತರ, ದಿಕ್ಕು, ಪೈಲಟ್ನ ತೆಗೆದುಕೊಂಡ ಕ್ರಮಗಳು ಸೇರಿ ಇತರ 80 ವಿವಿಧ ಬಗೆಯ ಮಾಹಿತಿಗಳು ಎಪ್ಡಿಆರ್ನಲ್ಲಿ ದಾಖಲಾಗಿರುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬ್ಲ್ಯಾಕ್ ಬಾಕ್ಸ್ಗಳನ್ನು ನೇಪಾಳ ನಾಗರಿಕ ವಿಮಾನಯಾನ ಪ್ರಾಧಿಕಾರಕ್ಕೆ (ಸಿಎಎಎನ್) ಒಪ್ಪಿಸಲಾಗಿದೆ ಎಂದು ಯೇತಿ ಏರ್ಲೈನ್ಸ್ ವಕ್ತಾರರು ತಿಳಿಸಿದ್ದಾರೆ.
ಭಾನುವಾರ ಬೆಳಿಗ್ಗೆ 10.58ಕ್ಕೆ ಪೊಖಾರಾ ವಿಮಾನ ನಿಲ್ದಾಣದಲ್ಲಿ ನಿಲುಗಡೆ ಆಗಬೇಕಿದ್ದ ವಿಮಾನವು, ನಿಲುಗಡೆಗೆ ಕೆಲವೇ ಸೆಕಂಡುಗಳು ಬಾಕಿ ಇರುವಂತೆ ಸೇಟಿ ನದಿಯ ದಡಕ್ಕೆ ಅಪ್ಪಳಿಸಿತು. ಎರಡು ಭಾಗವಾದ ವಿಮಾನದ ಒಂದು ಭಾಗ ನದಿಯ ಕಂದಕದಲ್ಲಿ ಬಿದ್ದರೆ, ಮತ್ತೊಂದು ಭಾಗ ನದಿಯ ದಡದಲ್ಲಿ ಬಿದ್ದಿತು. ಭಾರತದ ಐವರು ಸೇರಿ ಒಟ್ಟು 72 ಮಂದಿ ವಿಮಾನದಲ್ಲಿ ಇದ್ದರು.
ಎಟಿಆರ್– 72 ವಿಮಾನವು ಉದ್ಯಮಿ ವಿಜಯ್ ಮಲ್ಯ ಒಡೆತನದ ಪ್ರಸ್ತುತ ನಿಷ್ಕ್ರಿಯವಾಗಿರುವ ಕಿಂಗ್ ಫಿಷರ್ ಏರ್ಲೈನ್ಸ್ ಮಾಲೀಕತ್ವದಲ್ಲಿತ್ತು ಎಂದು ‘ಸಿರಿಯಮ್ ಫ್ಲೀಟ್ಸ್’ ತಿಳಿಸಿದೆ.
ಸಿರಿಯಮ್ ಫ್ಲೀಟ್ಸ್’ ಮಾಹಿತಿಯ ಪ್ರಕಾರ, 2007ರಲ್ಲಿ 9ಎನ್–ಎಎನ್ಸಿ ವಿಮಾನವನ್ನು ಕಿಂಗ್ಫಿಷರ್ ಏರ್ಲೈನ್ಸ್ ಖರೀದಿಸಿತ್ತು. ಆರು ವರ್ಷಗಳ ಬಳಿಕ ಈ ವಿಮಾನವನ್ನು ಥಾಯ್ಲೆಂಡ್ನ ನೋಕ್ ಏರ್ ಖರೀದಿಸಿತ್ತು. ಬಳಿಕ ಈ ವಿಮಾನವನ್ನು 2019ರಲ್ಲಿ ನೇಪಾಳದ ಯೇತಿ ಏರ್ಲೈನ್ಸ್ಗೆ ಮಾರಾಟ ಮಾಡಲಾಗಿತ್ತು.
The search and rescue teams have found the black box of an ATR 72 aircraft of Yeti Airlines that crashed in Pokhara on Sunday killing at least 68 people. Prem Nath Thakur, spokesperson of Kathmandu’s Tribhuvan International Airport, confirmed with the Post that the black box has been recovered. Thakur is also a member of the rescue coordination committee.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am