ಬ್ರೇಕಿಂಗ್ ನ್ಯೂಸ್
16-01-23 03:23 pm HK News Desk ದೇಶ - ವಿದೇಶ
ನವದೆಹಲಿ, ಜ.16: 16 ವರ್ಷಗಳ ಹಿಂದೆ ಆಕೆಯ ಗಂಡನೂ ನೇಪಾಳದಲ್ಲಿ ಪತನಗೊಂಡಿದ್ದ ವಿಮಾನದಲ್ಲಿ ದುರಂತ ಸಾವನ್ನಪ್ಪಿದ್ದರು. ಆವತ್ತು ಕೂಡ ಗಂಡ ವಿಮಾನದಲ್ಲಿ ಕೋ ಪೈಲಟ್ ಆಗಿದ್ದರು. ಈಗ ನೇಪಾಳದಲ್ಲಿ ದುರಂತಕ್ಕೊಳಗಾದ ವಿಮಾನದಲ್ಲಿ ಅದೇ ವ್ಯಕ್ತಿಯ ಪತ್ನಿ ಪೈಲಟ್ ಆಗುವ ಕನಸು ಕಂಡು ದುರಂತ ಸಾವಿಗೀಡಾಗಿದ್ದಾರೆ.
2006ರ ಜೂನ್ 21ರ ನೇಪಾಳದ ಯೇತಿ ಏರ್ಲೈನ್ಸ್ನ 9N AEQ ವಿಮಾನ ನೇಪಾಲ್ಗಂಜ್ನತ್ತ ಸಾಗುತ್ತಿದ್ದಾಗ, ಅಪಘಾತಕ್ಕೀಡಾಗಿ ಅದರಲ್ಲಿದ್ದ ಆರು ಪ್ರಯಾಣಿಕರು ಹಾಗೂ ನಾಲ್ವರು ಸಿಬ್ಬಂದಿ ಮೃತಪಟ್ಟಿದ್ದರು. ವಿಮಾನದಲ್ಲಿ ಕೋ-ಪೈಲಟ್ ಆಗಿದ್ದ ದೀಪಕ್ ಪೋಖ್ರೇಲ್ ಪೈಲಟ್ ಆಗುವ ಕನಸು ನನಸಾಗುವುದಕ್ಕೂ ಮೊದಲೇ ಪ್ರಾಣ ಬಿಟ್ಟಿದ್ದರು. ಇದೀಗ ಭಾನುವಾರ ನೇಪಾಳದಲ್ಲಿ ನಡೆದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಕೋ ಪೈಲಟ್ ಅಂಜು ಕಾಥಿವಾಡ್, 16 ವರ್ಷಗಳ ಹಿಂದೆ ಮೃತಪಟ್ಟ ಕೋ ಪೈಲಟ್ ದೀಪಕ್ ಅವರ ಪತ್ನಿಯಾಗಿದ್ದಾರೆ.
ಅಂಜು ಕೂಡ ಗಂಡನಂತೆಯೇ ಪೈಲಟ್ ಆಗುವ ಕನಸು ಕಂಡಿದ್ದರು. ಭಾನುವಾರದ ವಿಮಾನ ಹಾರಾಟವು ಕೋ-ಪೈಲಟ್ ಆಗಿ ಅವರ ಕೊನೆಯ ವಿಮಾನ ಸಂಚಾರವಾಗಿತ್ತು. ವಿಮಾನವನ್ನು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿಸಿದ್ದರೆ ಅವರು ಕ್ಯಾಪ್ಟನ್ ಆಗಿ ಬಡ್ತಿ ಪಡೆಯುತ್ತಿದ್ದರು. ಕೋ ಪೈಲಟ್ ಆಗಿದ್ದವರು ನೂರು ತಾಸುಗಳ ವಿಮಾನ ಹಾರಾಟ ಪೂರ್ಣಗೊಳಿಸಿದ ನಂತರ ಅವರಿಗೆ ಕ್ಯಾಪ್ಟನ್ ಆಗಿ ಬಡ್ತಿ ನೀಡಲಾಗುತ್ತದೆ. ಅಂಜು ಕೆಲವು ನಿಮಿಷಗಳ ಯಶಸ್ವೀ ಹಾರಾಟ ನಡೆಸುತ್ತಿದ್ದರೆ ಕ್ಯಾಪ್ಟನ್ ಆಗಿರುತ್ತಿದ್ದರು. ಆದರೆ ದುರಂತ ಅಂದ್ರೆ, ಪತಿ ದೀಪಕ್ ಮೃತಪಟ್ಟ ರೀತಿಯಲ್ಲೇ ಅಂಜು ಕೂಡ ಕೊನೆಯುಸಿರೆಳೆದಿದ್ದಾರೆ.
ಅಂಜು ಅವರೊಂದಿಗೆ ಹಿರಿಯ ಪೈಲಟ್ ಕಮಲ್ ಕೆ.ಸಿ. ವಿಮಾನದಲ್ಲಿ ಜೊತೆಗಿದ್ದರು. 35 ವರ್ಷಗಳಷ್ಟು ಅನುಭವ ಹೊಂದಿರುವ ಅವರು ಅನೇಕ ಪೈಲಟ್ಗಳಿಗೆ ತರಬೇತಿ ನೀಡಿದ್ದರು. ಆದರೆ ನಿನ್ನೆಯ ದುರಂತದಲ್ಲಿ ಕೇವಲ ಅರ್ಧ ಗಂಟೆಯ ಪ್ರಯಾಣದಲ್ಲಿ ವಿಮಾನ ಪತನಗೊಂಡಿತ್ತು. ಆಗಸದಲ್ಲೇ ತಿರುವುತ್ತಾ ಬಂದ ವಿಮಾನ ನೆಲಕ್ಕೆ ಬಡಿದು ಬೆಂಕಿ ಹತ್ತಿಕೊಳ್ಳುವ ದೃಶ್ಯ ವೈರಲ್ ಆಗಿದೆ.
In 2010, Anju Khatiwada joined Nepal's Yeti Airlines, following in the footsteps of her husband, a pilot who had died in a crash four years earlier when a small passenger plane he was flying for the domestic carrier went down minutes before landing.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am