ಬ್ರೇಕಿಂಗ್ ನ್ಯೂಸ್
12-01-23 01:28 pm HK News Desk ದೇಶ - ವಿದೇಶ
ತಿರುವನಂತಪುರಂ, ಜ.12: ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಏಲಕ್ಕಿ ಹಾಕದ ʻಅರವಣ ಪಾಯಸಂʼ ತಯಾರಿಸಲು ತಿರುವಾಂಕೂರು ದೇವಸ್ವಂ ಬೋರ್ಡ್ ತೀರ್ಮಾನಿಸಿದೆ. ಏಲಕ್ಕಿಯಲ್ಲಿ ಮಿತಿಮೀರಿದ ಕೀಟನಾಶಕ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ಶಬರಿಮಲೆ ದೇವಸ್ಥಾನದಲ್ಲಿ ಸಿಗುವ ಪ್ರಸಾದ ಅರವಣ ಪಾಯಸಕ್ಕೆ ವಿಶೇಷ ಮಹತ್ವ. ಆದರೆ ಇತ್ತೀಚೆಗೆ ಅರವಣ ಪಾಯಸದಲ್ಲಿ ಕೀಟನಾಶಕ ಬಳಸಿದ ಏಲಕ್ಕಿ ಬಳಸಿರುವುದು ಪತ್ತೆಯಾಗಿತ್ತು. ಹಾಗಾಗಿ ಆ ಸರದಿಯಲ್ಲಿ ತಯಾರಿಸಲ್ಪಟ್ಟ ಪ್ರಸಾದವನ್ನು ವಿತರಿಸದೇ ಇರುವಂತೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ದೇವಸ್ವಂ ಬೋರ್ಡ್ ಏಲಕ್ಕಿ ಹಾಕದೇ ಪಾಯಸ ತಯಾರಿಸಲು ತೀರ್ಮಾನ ತೆಗೆದುಕೊಂಡಿದೆ.
ಅಲ್ಲದೆ, ಪ್ರಸಾದ ತಯಾರಿಸುವುದಕ್ಕು ಮುನ್ನ ಎಲ್ಲ ಯಂತ್ರಗಳನ್ನು ಸ್ವಚ್ಛಗೊಳಿಸಲಾಗುತ್ತದೆ. ಬಳಿಕ ತಾತ್ಕಾಲಿಕವಾಗಿ ಏಲಕ್ಕಿ ಹಾಕದೇ ಅರವಣ ಪಾಯಸಂ ತಯಾರಿಸಲಾಗುವುದು. ಗುರುವಾರದಿಂದ ಈ ಏಲಕ್ಕಿ ರಹಿತ ಅರವಣ ಪಾಯಸಂ ವಿತರಣೆ ಆಗಲಿದೆ. ಸಾವಯವ ಏಲಕ್ಕಿ ಖರೀದಿ ಪ್ರಕ್ರಿಯ ಚಾಲ್ತಿಯಲ್ಲಿದೆ ಎಂದು ದೇವಸ್ವಂ ಬೋರ್ಡ್ ಅಧ್ಯಕ್ಷ ಕೆ.ಅನಂತಗೋಪನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತಿರುವನಂತಪುರದ ಆಹಾರ ಸುರಕ್ಷತಾ ಪ್ರಾಧಿಕಾರದ ಲ್ಯಾಬ್ ಮತ್ತು ಕೊಚ್ಚಿಯಲ್ಲಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಲ್ಯಾಬ್ಗಳಲ್ಲಿ ಅರವಣ ಪ್ರಸಾದವನ್ನು ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಮಿತಿ ಮೀರಿದ ಕೀಟನಾಶಕದ ಅಂಶ ಪತ್ತೆಯಾಗಿತ್ತು. ಭಕ್ತರು ಅರವಣ ಪಾಯಸಂ ಗುಣಮಟ್ಟದ ಬಗ್ಗೆ ದೂರುಗಳನ್ನು ನೀಡಿದ್ದರಿಂದ ಕೇರಳ ಹೈಕೋರ್ಟ್ ನಿರ್ದೇಶನದ ಮೇರೆಗೆ ಈ ಪರೀಕ್ಷೆಗಳನ್ನು ನಡೆಸಲಾಗಿತ್ತು. ಎರಡೂ ಲ್ಯಾಬ್ಗಳ ಪರೀಕ್ಷಾ ಫಲಿತಾಂಶವನ್ನು ಕೋರ್ಟ್ಗೆ ಸಲ್ಲಿಸಲಾಗಿತ್ತು. ಅದರಂತೆ ಪರೀಕ್ಷೆಗೆ ಒಡ್ಡಲಾದ ಪ್ರಸಾದವನ್ನು ವಿತರಣೆ ಮಾಡಬಾರದು ಎಂದು ಹೈಕೋರ್ಟ್ ದೇವಸ್ವಂ ಬೋರ್ಡ್ಗೆ ಸೂಚಿಸಿತ್ತು.
In view of a High Court order to stop immediately the distribution of aravana at Sabarimala temple, the Travancore Devaswom Board (TDB) is all set to commence the distribution of cardamom-less Aravana for sale at Sabarimala from Thursday onwards.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am