ಬ್ರೇಕಿಂಗ್ ನ್ಯೂಸ್
09-01-23 10:27 pm HK News Desk ದೇಶ - ವಿದೇಶ
ಲಖನೌ, ಜ 09: ತೀವ್ರ ಚಳಿ ವಾತಾವರಣದ ಪರಿಣಾಮವಾಗಿ ಉತ್ತರ ಪ್ರದೇಶದ ಲಖನೌನಲ್ಲಿ ಹೃದಯಾಘಾತ ಮತ್ತು ಮೆದುಳು ನಿಷ್ಕ್ರೀಯದಿಂದ ಕಳೆದ ಐದೇ ದಿನದಲ್ಲಿ ಒಟ್ಟು 98 ಮಂದಿ ಮೃತಪಟ್ಟಿದ್ದಾರೆ.
ಉತ್ತರ ಭಾರತದಾದ್ಯಂತ ಕಳೆದ ಕೆಲವು ವಾರಗಳಿಂದ ತೀವ್ರವಾಗಿ ಚಳಿ ಗಾಳಿ ಬೀಸುತ್ತಿದೆ. ನಿತ್ಯ ಬೆಳಗ್ಗೆ ದಟ್ಟ ಮಂಜು ಕವಿದ ವಾತಾವರಣ ದಾಖಲಾಗುತ್ತಿದೆ. ಈ ಕಾರಣದಿಂದ ಯಾರೂ ಮನೆಯಿಂದ ಹೊರ ಬರುತ್ತಿಲ್ಲ. ಎದುರಿಗಿನ ಹತ್ತಿರದ ವ್ಯಕ್ತಿಗಳೇ ಕಾಣದಷ್ಟು ಮಂಜು ಕವಿಯುತ್ತಿದೆ. ಈ ತೀವ್ರ ಶೀತದಿಂದ ಅನಾರೋಗ್ಯಕ್ಕೆ ಒಳಗಾಗುವುದು ಸಾಮಾನ್ಯವಾಗಿತ್ತು. ಆದರೆ ಇದೇ ಕಾರಣದಿಂದ ಇದೀಗ ಕಾನ್ಪುರದಲ್ಲಿ ಸರಣಿ ಸಾವುಗಳು ಸಂಭವಿಸಿವೆ.
ಒಟ್ಟು 98 ಸಾವುಗಳ ಪೈಕಿ 44 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರೆ, 54 ಮಂದಿ ಆಸ್ಪತ್ರೆಗೆ ಬರುವ ದಾರಿ ಮಧ್ಯದಲ್ಲೇ ಉಸಿರು ಚೆಲ್ಲಿದ್ದಾರೆ. ಈ ಬಗ್ಗೆ ಅಧಿಕೃತ ಕಾರಣ ತಿಳಿಸಿದ ಕಾನ್ಪುರದ ಎಲ್ಪಿಎಸ್ ಹೃದ್ರೋಗ ಸಂಸ್ಥೆಯ ಹೃದ್ರೋಗ ತಜ್ಞರ ಮತ್ತು ಕಾರ್ಡಿಯಾಕ್ ಸರ್ಜನ್ ಲಕ್ಷ್ಮೀಪಥ್ ಸಿಂಗಾನಿಯ ಅವರು ಅಂಕಿ ಅಂಶಗಳನ್ನು ಬಹಿರಂಗಪಡಿಸಿದ್ದಾರೆ.
ಕಳೆದ ಒಂದು ವಾರದಲ್ಲಿ ನಮ್ಮ ಹೃದ್ರೋಗ ಸಂಸ್ಥೆಗೆ 723 ಮಂದಿ ಹೃದಯ ಸಂಬಂಧಿ ತೀವ್ರ ಅನಾರೋಗ್ಯಕ್ಕೆ ಒಳಗಾದವರು ಆಗಮಿಸಿದ್ದರು. ಅದರಲ್ಲಿ 14 ಮಂದಿ ತೀವ್ರ ಶೀತದಿಂದ ಬಳಲುತ್ತಿದ್ದರು. ಅದರಲ್ಲಿ ಆರು ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದು, ಅವರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು ಎಂಬುದು ತಪಾಸಣೆ ವೇಳೆ ತಿಳಿದು ಬಂದಿದೆ. ಬಾಕಿ ಎಂಟು ಮಂದಿ ಆಸ್ಪತ್ರೆ ಬರುವ ಮುನ್ನವೇ ಮೃತಪಟ್ಟಿದ್ದರು ಎಂದು ಅವರು ತಿಳಿಸಿದರು.
ಒಟ್ಟು 14 ಮಂದಿ 24 ಗಂಟೆಯಲ್ಲಿ ಮೃತಪಟ್ಟಿದ್ದಾರೆ. ಅಲ್ಲದೇ ಒಟ್ಟು 604 ಮಂದಿ ರೋಗಿಗಳು ಹೃದ್ರೋಗ ಸಂಸ್ಥೆಗೆ ದಾಖಲಾಗಿದ್ದಾರೆ. ಅದರಲ್ಲಿ 54 ಮಂದಿ ಹೊಸ ರೋಗಿಗಳಿದ್ದು, 27ಮಂದಿ ಈಗಾಗಲೇ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿ ಚಿಕಿತ್ಸೆ ಪಡೆದ ಹಳೆ ರೋಗಿಗಳು ಇದ್ದಾರೆ.
ಹೃದ್ರೋಗ ಸಂಸ್ಥೆಯ ನಿರ್ದೇಶಕ ವಿನಯ ಕೃಷ್ಣ ಅವರು, ಜನರು ತೀವ್ರ ಶೀತದಿಂದ ರಕ್ಷಿಸಿಕೊಳ್ಳಬೇಕು. ಸದಾ ಬೆಚ್ಚಿನ ವಾತಾವರಣದಲ್ಲಿ ಇರುವ ಮೂಲಕ ಆರೋಗ್ಯವಾಗಿರಬೇಕು ಎಂದರು.
ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (ಕೆಜಿಎಂಯು) ಅಧ್ಯಾಪಕರೊಬ್ಬರು,ಈ ಶೀತ ವಾತಾವರಣದಲ್ಲಿ ಹೃದಯಾಘಾತವು ಕೇವಲ ವಯಸ್ಸಾದವರಿಗೆ ಸೀಮಿತವಾಗದೇ ಹದಿ ಹರೆಯದವರೂ ಸಹ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ಶೀತಕ್ಕೆ ಮೈಯೊಡ್ಡದೇ ಸದಾ ಬೆಚ್ಚಗಿದ್ದು, ಆರೋಗ್ಯವಾಗಿರಬೇಕು ಎಂದು ಅವರು ಸಲಹೆ ನೀಡಿದರು.
The figures are scary enough to give a shock. In the past five days, 98 persons have died due to heart and brain strokes in Uttar Pradesh's Kanpur. Of the 98 deaths, 44 died in the hospital while 54 patients died before treatment. These statistics have been given by the L.P.S Institute of Cardiology.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am