ಬ್ರೇಕಿಂಗ್ ನ್ಯೂಸ್
23-12-22 07:04 pm HK News Desk ದೇಶ - ವಿದೇಶ
ಭಾರತದಲ್ಲಿ ಕಳೆದ ಕೆಲವು ದಿನಗಳಿಂದ ವರದಿಯಾಗುತ್ತಿರುವ ಕೊರೊನಾ ಪ್ರಕರಣಗಳ ಸರಾಸರಿ ಸಂಖ್ಯೆ 200 ಕ್ಕಿಂತ ಕಡಿಮೆಯಾಗಿದೆ. ಜುಲೈ ಮತ್ತು ಅಕ್ಟೋಬರ್ 2022 ರ ನಡುವೆ BF.7 ನ ನಾಲ್ಕು ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇವುಗಳಲ್ಲಿ ಮೂರು ಗುಜರಾತ್ನಲ್ಲಿ ಮತ್ತು ಒಂದು ಪ್ರಕರಣ ಒಡಿಶಾದಲ್ಲಿ ಕಂಡುಬಂದಿವೆ.
ಈ ನಾಲ್ಕೂ ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಈ ರೂಪಾಂತರದ ವೈಶಿಷ್ಟ್ಯಗಳೇನು ತಿಳಿಯೋಣ ಬನ್ನಿ.
ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಗಳಿಸುತ್ತಿರುವ ಬಿಎಫ್.7 ಕೋವಿಡ್ ವೆರಿಯಂಟ್ ಭಾರತೀಯರಲ್ಲೂ ಆತಂಕ ಮೂಡಿಸಿದೆ. ಇಲ್ಲಿಯವರೆಗೆ ಕೇವಲ ನಾಲ್ಕು ಪ್ರಕರಣಗಳು ವರದಿಯಾಗಿದ್ದರೂ, ಭಾರತ ಸರ್ಕಾರ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಹಿಂದೆ ಡೆಲ್ಟಾ ಮತ್ತು ಓಮಿಕ್ರಾನ್ನಂತಹ ರೂಪಾಂತರಗಳನ್ನು ಯಶಸ್ವಿಯಾಗಿ ಎದುರಿಸಿದ್ದರೂ ಅಧಿಕಾರಿಗಳು ಈ ರೂಪಾಂತರದ ಬಗ್ಗೆ ಏಕೆ ಚಿಂತೆಗೀಡಾಗಿದ್ದಾರೆ ಎಂಬುದನ್ನು ತಿಳಿಯುವುದು ಅಗತ್ಯ.
ಉಸಿರಾಟ ಸಮಸ್ಯೆ ಸೃಷ್ಟಿಸುತ್ತೆ:
BF.7 ಮುಖ್ಯವಾಗಿ ಎದೆಯ ಮೇಲ್ಭಾಗದಲ್ಲಿ ಉಸಿರಾಟದ ಸಮಸ್ಯೆ ಸೃಷ್ಟಿಸುತ್ತದೆ. ಅಂದರೆ ಇದು ಮೇಲಿನ ಎದೆ ಮತ್ತು ಗಂಟಲಿನಲ್ಲಿ ಹೆಚ್ಚು ಪರಿಣಾಮ ಬೀರುತ್ತದೆ. ಇವುಗಳಲ್ಲದೆ ಜ್ವರ, ನೆಗಡಿ ಕಾಡಬಹುದು. ಉಸಿರಾಟದ ತೊಂದರೆಗಳು ಉಲ್ಬಣಗೊಳ್ಳುವುದರಿಂದ, ಅದರಿಂದಾಗಿಯೇ ವ್ಯಕ್ತಿಯು ಸಾಯುವ ಸಾಧ್ಯತೆಗಳು ಹೆಚ್ಚು. ಕೆಲವರಿಗೆ ಹೊಟ್ಟೆ ನೋವು, ವಾಂತಿ ಮತ್ತು ಅತಿಸಾರದಂಥ ರೋಗಲಕ್ಷಣಗಳು ಕಾಣಿಸಬಹುದು. ಈ ರೋಗಲಕ್ಷಣಗಳು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಉತ್ತಮ. ಇದರಿಂದ ವೈರಸ್ ಹರಡುವುದನ್ನು ತಡೆಯಬಹುದು.
ಭಾರತದಲ್ಲಿ ಕಳೆದ ಕೆಲವು ದಿನಗಳಿಂದ ವರದಿಯಾಗುತ್ತಿರುವ ಕೊರೊನಾ ಪ್ರಕರಣಗಳ ಸರಾಸರಿ ಸಂಖ್ಯೆ 200 ಕ್ಕಿಂತ ಕಡಿಮೆಯಾಗಿದೆ. ಜುಲೈ ಮತ್ತು ಅಕ್ಟೋಬರ್ 2022 ರ ನಡುವೆ BF.7 ನ ನಾಲ್ಕು ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇವುಗಳಲ್ಲಿ ಮೂರು ಗುಜರಾತ್ನಲ್ಲಿ ಮತ್ತು ಒಂದು ಪ್ರಕರಣ ಒಡಿಶಾದಲ್ಲಿ ಕಂಡುಬಂದಿವೆ. ಈ ನಾಲ್ಕೂ ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
BF 7 ನ ತೀವ್ರತೆ ತುಂಬಾ ಕಡಿಮೆ.. ಆದರೆ?:
ಹಿಂದಿನ ರೂಪಾಂತರಗಳಿಗೆ ಹೋಲಿಸಿದರೆ, BF.7 ನ ತೀವ್ರತೆ ತುಂಬಾ ಕಡಿಮೆಯಾಗಿದೆ. ಆದರೆ ಅದರ ಹೆಚ್ಚಿನ ಪ್ರಮಾಣದ ಹರಡುವಿಕೆಯಿಂದಾಗಿ, ಹೆಚ್ಚಿನ ಜನ ಈ ವೈರಸ್ಗೆ ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳುತ್ತಾರೆ. ಇದು ಭಾರತವನ್ನು ಪ್ರವೇಶಿಸಿದರೆ, ಇದುವರೆಗೆ ಎದುರಿಸಿದ ರೂಪಾಂತರಗಳಿಗಿಂತ ಹೆಚ್ಚು ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ. ಮೇಲಾಗಿ ಸಂತ್ರಸ್ತರಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸುವುದು ಕಷ್ಟಸಾಧ್ಯ ಎಂದು ಹೇಳಲಾಗುತ್ತಿದೆ.
ಮೊದಲ ಅಲೆಯ ಸಮಯದಲ್ಲಿ ಚೀನಾ ತುಂಬಾ ಕಷ್ಟದ ಪರಿಸ್ಥಿತಿಯನ್ನು ಎದುರಿಸಿತ್ತು ಎಂದು ಹೇಳಲಾಗಿತ್ತು. ಆದರೆ ಈಗ BF.7 ರೂಪಾಂತರದಿಂದ ದೇಶ ಪ್ರಸ್ತುತ ಅದಕ್ಕೂ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಹೀಗಾಗಿಯೇ ಈ ರೂಪಾಂತರ ಭಾರತದಲ್ಲಿ ಹರಡಿದರೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಸರ್ಕಾರ ಮತ್ತು ವೈದ್ಯಕೀಯ ಅಧಿಕಾರಿಗಳು ಚಿಂತಿತರಾಗಿದ್ದಾರೆ. ಅದಕ್ಕಾಗಿಯೇ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರ ಜನರಿಗೆ ಎಚ್ಚರಿಕೆ ನೀಡುತ್ತಿದೆ.
ಚೀನಾ ಬಿಟ್ಟರೆ ಬೇರೆ ಕಡೆ ಹರಡುವಿಕೆ ತೀವ್ರತೆ ಕಡಿಮೆ: BF.7 ರೂಪಾಂತರವು ಚೀನಾ ಮಾತ್ರವಲ್ಲದೇ ಅಮೆರಿಕ, ಇಂಗ್ಲೆಂಡ್, ಬೆಲ್ಜಿಯಂ, ಜರ್ಮನಿ, ಫ್ರಾನ್ಸ್, ಡೆನ್ಮಾರ್ಕ್ ಮತ್ತು ಇತರ ದೇಶಗಳಲ್ಲಿಯೂ ಹರಡುತ್ತಿದೆ. ಆದರೆ ಬೇರೆ ದೇಶಗಳಲ್ಲಿ ಇದರ ಹರಡುವಿಕೆ ಚೀನಾದಷ್ಟು ಹೆಚ್ಚಿಲ್ಲ ಎಂಬುದೇ ಸಮಾಧಾನ. ಎರಡು ತಿಂಗಳ ಹಿಂದೆ ಈ ರೂಪಾಂತರವು ತಮ್ಮ ದೇಶವನ್ನು ಪ್ರವೇಶಿಸಿದೆ ಎಂದು ಕಂಡುಕೊಂಡ ಇಂಗ್ಲೆಂಡ್, ಬಲವಾದ ಸುರಕ್ಷತಾ ಕ್ರಮಗಳೊಂದಿಗೆ ಅದರ ಹರಡುವಿಕೆಯನ್ನು ತಡೆಯಲು ಶಕ್ತವಾಗಿದೆ.
ವೈರಸ್ನ ಹಿಂದಿನ ರೂಪಾಂತರಗಳಿಗೆ ಚೀನಾ ದೇಶದ ಜನತೆ ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವುದರಿಂದಲೇ ಅಲ್ಲಿ BF.7 ರೂಪಾಂತರ ವೇಗವಾಗಿ ಹರಡುತ್ತಿದೆ ಎನ್ನಲಾಗಿದೆ. ಇದಲ್ಲದೆ, ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿರುವುದು ಸಹ ಈ ರೂಪಾಂತರದ ಹರಡುವಿಕೆಗೆ ಕಾರಣವಾಗಿರಬಹುದು ಎಂದು ವೈದ್ಯಕೀಯ ತಜ್ಞರು ಅಂದಾಜಿಸಿದ್ದಾರೆ.
The rise in infections of Covid-19 in China has been attributed to the emergence of the BF.7 sub-variant of the virus. This variant was introduced in October and has since replaced the dominant ones in various European and US countries.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am