ಬ್ರೇಕಿಂಗ್ ನ್ಯೂಸ್
22-12-22 07:06 pm HK News Desk ದೇಶ - ವಿದೇಶ
ನವದೆಹಲಿ, ಡಿ.22: ಜಗತ್ತಿಗೆ ಕೊರೊನಾ ವೈರಸ್ ಕಂಟಕವನ್ನು ಶುರು ಹಚ್ಚಿದ್ದ ಚೀನಾದಲ್ಲಿಯೇ ಕೊರೊನಾ ಮತ್ತೆ ರಣಕೇಕೆ ಶುರು ಮಾಡಿದೆ. ಇಡೀ ದೇಶವನ್ನು ಅಲ್ಲೋಲ ಕಲ್ಲೋಲ ಮಾಡಿದ್ದು, ಬೀದಿ ಬೀದಿಯಲ್ಲಿ ಜನರು ಸಾಯುವ ಸ್ಥಿತಿ ತಂದೊಡ್ಡಿದೆ. ಮಾಹಿತಿ ಪ್ರಕಾರ, ಚೀನಾದಲ್ಲಿ ಪ್ರತಿನಿತ್ಯ ಹತ್ತು ಲಕ್ಷಕ್ಕೂ ಹೆಚ್ಚು ಮಂದಿಗೆ ರೋಗ ತಗಲುತ್ತಿದ್ದು, ಸಾವಿರಾರು ಮಂದಿ ಬೀದಿ ಹೆಣವಾಗುತ್ತಿದ್ದಾರೆ.
ಚೀನಾದ ಸಂಕಷ್ಟದ ಸದ್ಯದ ಮಾಹಿತಿಗಳನ್ನು ನೋಡಿದರೆ, ಕಳೆದ ಬಾರಿ ಇಟಲಿ, ಅಮೆರಿಕ, ಮುಂಬೈನಲ್ಲಿ ಪಟ್ಟಿದ್ದ ಸಂಕಷ್ಟ ಏನೂ ಅಲ್ಲ ಅನಿಸುತ್ತಿದೆ. ಅಷ್ಟರ ಮಟ್ಟಿಗೆ ಭೀತಿ ಹುಟ್ಟಿಸುವ ದೃಶ್ಯಗಳು ಚೀನಾದಿಂದ ಹೊರಬರುತ್ತಿವೆ. ವಿಶ್ವದ ಮಿಕ್ಕೆಲ್ಲ ದೇಶಗಳು ಕೊರೊನಾ ಸಂಕಷ್ಟದಿಂದ ಪಾರಾಗಿ ಮಾಮೂಲಿ ಜೀವನಕ್ಕೆ ತೆರೆದುಕೊಂಡಿದ್ದರೆ, ಚೀನಾ ಮಾತ್ರ ಕೊರೊನಾ ನರಕದಲ್ಲಿಯೇ ಬಿದ್ದು ಒದ್ದಾಡತೊಡಗಿದೆ. ಚೀನಾಕ್ಕೆ ಕೊರೊನಾ ರೂಪಾಂತರಿ ಕಣಗಳೇ ಶಾಪವಾಗಿ ಪರಿಣಮಿಸುತ್ತಿದ್ದು, ಅಲ್ಲೀಗ ಕೊರೊನಾ ಮೂಲ ವೈರಸಿನ ಹೊಸ ಹೊಸ ರೂಪಗಳು ತೆರೆದುಕೊಳ್ಳುತ್ತಿವೆ.
ಬಿಎಫ್ 7 ರೂಪಾಂತರಿ ಹಾವಳಿ
ಚೀನಾದಲ್ಲಿ ಕೊರೊನಾ ಸೋಂಕು ಉಲ್ಬಣಿಸಲು ಕಾರಣ ಒಮಿಕ್ರಾನ್ ತಳಿಯ ರೂಪಾಂತರಿಗಳು ಕಾರಣ ಎನ್ನಲಾಗುತ್ತಿದೆ. ಇಲ್ಲೀಗ ಕೊರೊನಾ ವೈರಸ್ಸಿನ ಬಿ 5.2 ಮತ್ತು ಬಿಎಫ್ 7 ತಳಿಗಳು ಅಪಾಯಕಾರಿಯಾಗಿ ಪರಿಣಮಿಸಿದೆ. ಬಿ 5.2 ತಳಿಯು ಕೊರೊನಾ ಒಮಿಕ್ರಾನ್ ಬಿ 5ರ ಉಪ ತಳಿಯಾಗಿದ್ದು, ಕಳೆದ ಜುಲೈನಲ್ಲಿ ಶಾಂಘೈನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಆದರೆ ಇದೀಗ ಚೀನಾದಲ್ಲಿ ತೀವ್ರವಾಗಿ ಹರಡುತ್ತಿರುವುದು ಬಿಎ 5ರ ಉಪತಳಿ ಎನ್ನಲಾದ ಬಿಎಫ್ 7 ಅನ್ನುವುದನ್ನು ಡಬ್ಲ್ಯುಎಚ್ಓ ಪತ್ತೆ ಮಾಡಿದೆ. ಅದರ ಪ್ರಕಾರ, ಇದು ಕೊರೊನಾ ರೂಪಾಂತರಿಗಳಲ್ಲೇ ಅತಿ ಹೆಚ್ಚು ವೇಗದಲ್ಲಿ ಹರಡುವ ಸಾಮರ್ಥ್ಯ ಹೊಂದಿದೆ.



ಒಬ್ಬರಿಂದ 18 ಮಂದಿಗೆ ಸೋಂಕು ಚೀನಾದಲ್ಲಿ ಕಾಣಿಸಿಕೊಂಡ ಹೊಸ ರೂಪಾಂತರಿ ಒಬ್ಬರಿಗೆ ಹರಡಿದರೆ, ಅದು 18 ಮಂದಿಗೆ ಹರಡುವುದಂತೆ. ಈ ವೈರಾಣು ಅಷ್ಟು ಪ್ರಬಲ ಸಾಮರ್ಥ್ಯವನ್ನು ಹೊಂದಿದ್ದು, ಹಾಗಾಗಿ ಅಪಾಯಕಾರಿ ಎಂದು ವಿಶ್ವಸಂಸ್ಥೆ ವೈದ್ಯರು ಹೇಳಿದ್ದಾರೆ. ಭಾರತದಲ್ಲಿ 1ನೇ ಮತ್ತು 2ನೇ ಅಲೆಯಲ್ಲಿ ವೈರಾಣು ಹೆಚ್ಚೆಂದರೆ, ಒಬ್ಬರಿಂದ 5-6 ಮಂದಿಗಷ್ಟೇ ಹರಡುತ್ತಿತ್ತು. ಇದಲ್ಲದೇ, ಬಿಎಫ್ 7 ಯಾವುದೇ ರೋಗ ಲಕ್ಷಣಗಳನ್ನು ತೋರಿಸುವುದಿಲ್ಲ. ಸದ್ದಿಲ್ಲದೆ ಅಟ್ಯಾಕ್ ಮಾಡುವುದರಿಂದ ಜನರಿಗೆ ಹೆಚ್ಚು ಹೆಚ್ಚು ಸೋಂಕು ಹರಡುತ್ತಿದೆ. ತೀವ್ರವಾದ ಗಂಟಲು ಕೆರೆತ, ಮೈಕೈ ನೋವು, ತಲೆನೋವು ಮತ್ತು ಜ್ವರದ ಲಕ್ಷಣಗಳಿರುತ್ತವೆ. ಆದರೆ ಆರೋಗ್ಯವಂತರಲ್ಲಿ ಈ ರೀತಿಯ ಲಕ್ಷಣಗಳು ಇಲ್ಲದೇ ಇದ್ದರೂ, ಪಾಸಿಟಿವ್ ಕಂಡುಬರುತ್ತದೆ. ಆದರೆ ಈ ಸೋಂಕು ಮಾರಕ ಅಲ್ಲದಿದ್ದರೂ, ಚೀನಾದಲ್ಲೀಗ ಹೆಚ್ಚು ಶೀತ ವಾತಾವರಣ ಇರುವುದರಿಂದ ಅಪಾಯಕಾರಿಯಾಗಿ ಹಬ್ಬುತ್ತಿದೆ.
ಸದ್ಯಕ್ಕೆ ಚೀನಾ, ಬ್ರೆಜಿಲ್, ಅಮೆರಿಕ, ಜಪಾನ್, ದಕ್ಷಿಣ ಕೊರಿಯಾದಲ್ಲಿ ಕೊರೊನಾ ಸೋಂಕು ಹರಡುತ್ತಿರುವುದು ಕಂಡುಬಂದಿದೆ. ಆದರೆ ಅಪಾಯಕಾರಿಯಾಗಿ ಹಬ್ಬುತ್ತಿರುವುದು ಚೀನಾದಲ್ಲಿ ಮಾತ್ರ. ಹೊಸ ವರ್ಷದ ಜನವರಿ ವೇಳೆಗೆ ಭಾರತದಲ್ಲಿಯೂ ಸೋಂಕು ಹರಡುವ ಸಾಧ್ಯತೆಯಿದೆ. ಇದಕ್ಕಾಗಿ ಈಗಲೇ ವಿದೇಶಿ ಪ್ರಯಾಣಿಕರ ಬಗ್ಗೆ ನಿಗಾ ಇಡಲು ಸರಕಾರ ಮುಂದಾಗಿದೆ.
China is likely experiencing 1 million Covid infections and 5,000 virus deaths every day as it grapples with what is expected to be the biggest outbreak the world has ever seen, according to a new analysis.
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm