ಬ್ರೇಕಿಂಗ್ ನ್ಯೂಸ್
21-12-22 03:44 pm HK News Desk ದೇಶ - ವಿದೇಶ
ನವದೆಹಲಿ, ಡಿ.21: ಶಾರುಖ್ ಖಾನ್- ದೀಪಿಕಾ ಪಡುಕೋಣೆ ಪಠಾಣ್ ಚಿತ್ರದಲ್ಲಿ ಕೇಸರಿ ಬಿಕಿನಿ ಧರಿಸಿ ಅಭಿನಯಿಸಿದ್ದಕ್ಕೆ ಭಾರೀ ವಿರೋಧ ಕೇಳಿಬರುತ್ತಿರುವ ನಡುವೆಯೇ ಅಯೋಧ್ಯೆಯ ಸ್ವಾಮೀಜಿ ಪರಮಹಂಸ ಆಚಾರ್ಯ, ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶಾರುಖ್ ಖಾನ್ ಎದುರಿಗೆ ಸಿಕ್ಕರೆ ಜೀವಂತ ಸುಟ್ಟು ಹಾಕುತ್ತೇನೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಚಿತ್ರದ ಬೇಷಾರಮ್ ರಂಗ್ ಎನ್ನುವ ಹಾಡನ್ನು ರಿಲೀಸ್ ಮಾಡಲಾಗಿತ್ತು. ಅದರಲ್ಲಿ ದೀಪಿಕಾ ಕೇಸರಿ ಬಿಕಿನಿ ತೊಟ್ಟು ಅಶ್ಲೀಲವಾಗಿ ನರ್ತಿಸಿದ್ದರೆ, ಶಾರುಖ್ ಖಾನ್ ಹಸಿರು ಬಟ್ಟೆ ತೊಟ್ಟು ಸಾಥ್ ಕೊಟ್ಟಿದ್ದರು. ಈ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿದ್ದು ಹಲವು ಕಡೆಗಳಲ್ಲಿ ಪ್ರತಿಭಟನೆ ವ್ಯಕ್ತವಾಗಿದೆ. ಮಧ್ಯಪ್ರದೇಶ, ಉತ್ತರ ಪ್ರದೇಶದಲ್ಲಿ ಕೆಲವು ಸಚಿವರು ಕೂಡ ವಿರೋಧ ವ್ಯಕ್ತಪಡಿಸಿದ್ದರು.
ಇದೀಗ ಅಯೋಧ್ಯೆ ಸ್ವಾಮೀಜಿ ಪರಮಹಂಸ ಆಚಾರ್ಯ ಮಾತನಾಡಿ, ಬೇಷಾರಮ್ ರಂಗ್ ಹಾಡಿನಲ್ಲಿ ಕೇಸರಿ ಬಣ್ಣವನ್ನು ಅಶ್ಲೀಲವಾಗಿ ಚಿತ್ರಿಸಿ ಅಣಕಿಸಲಾಗಿದೆ. ಸನಾತನ ಧರ್ಮದ ಮಂದಿ ಇದಕ್ಕೆ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಇವತ್ತು ಶಾರುಖ್ ಖಾನ್ ಪೋಸ್ಟರನ್ನು ಸುಟ್ಟು ಹಾಕಲಾಗುತ್ತಿದೆ. ಆದರೆ ಜಿಹಾದಿ ಶಾರುಖ್ ಖಾನ್ ನನ್ನ ಎದುರಿಗೆ ಬಂದಲ್ಲಿ ಆತನನ್ನು ಜೀವಂತವಾಗಿಯೇ ಸುಟ್ಟು ಹಾಕುತ್ತೇನೆ ಎಂದು ಹೇಳಿದ್ದಾರೆ. ಸ್ವಾಮೀಜಿ ಹೀಗೆ ಹೇಳಿದ್ದಾಗಿ ಐಎಎನ್ಎಸ್ ಸುದ್ದಿಸಂಸ್ಥೆ ಪ್ರಕಟಿಸಿದೆ. ಅಲ್ಲದೆ, ಪಠಾಣ್ ಚಿತ್ರ ಥಿಯೇಟರ್ ನಲ್ಲಿ ಬಿಡುಗಡೆಯಾದರೆ, ಅದನ್ನು ಪ್ರದರ್ಶನ ಮಾಡುವ ಥಿಯೇಟರನ್ನೂ ಸುಟ್ಟು ಹಾಕುತ್ತೇನೆ ಎಂದು ಸ್ವಾಮೀಜಿ ಹೇಳಿದ್ದಾಗಿ ಸುದ್ದಿಸಂಸ್ಥೆ ಹೇಳಿದೆ.
ಇದೇ ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮಧ್ಯಪ್ರದೇಶ ಸ್ವೀಕರ್ ಗಿರೀಶ್ ಗೌತಮ್, ಶಾರುಖ್ ಖಾನ್ ತನ್ನ ಪುತ್ರಿಯ ಜೊತೆಗೆ ಕುಳಿತು ಈ ಚಿತ್ರವನ್ನು ನೋಡಬೇಕು. ಅದರ ಚಿತ್ರವನ್ನು ಪೋಸ್ಟ್ ಮಾಡಬೇಕು. ಅಲ್ಲದೆ, ಆತ ಪ್ರವಾದಿ ಪೈಗಂಬರ್ ಕುರಿತು ಇದೇ ರೀತಿಯ ಚಿತ್ರವನ್ನು ಮಾಡಲಿ, ನಾನು ಸವಾಲು ಹಾಕುತ್ತೇನೆ ಎಂದಿದ್ದಾರೆ.
The controversy over Bollywood superstar Shah Rukh Khan's upcoming film ‘Pathaan’ refuses to die down and now a prominent seer from the holy city Ayodhya has waded into the controversy over the song 'Besharam Rang' in the movie also starring actress Deepika Padukone. According to media reports, Mahant Paramhans Acharya of Tapasvi Chhavni has said that he would burn Shah Rukh Khan alive if he ever met him.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am