ಬ್ರೇಕಿಂಗ್ ನ್ಯೂಸ್
20-12-22 08:03 pm HK News Desk ದೇಶ - ವಿದೇಶ
ಮುಂಬೈ, ಡಿ.20: ಬಿಜೆಪಿ ಉಚ್ಛಾಟಿತ ನಾಯಕಿ ನೂಪುರ್ ಶರ್ಮಾ ಪರವಾಗಿ ಪೋಸ್ಟ್ ಹಾಕಿದ್ದ ಕಾರಣಕ್ಕೆ ಕೊಲೆಯಾಗಿದ್ದ ಅಮರಾವತಿ ಜಿಲ್ಲೆಯ ಕೆಮಿಸ್ಟ್ ಉಮೇಶ್ ಕೊಲ್ಹೆ ಪ್ರಕರಣದಲ್ಲಿ ಎನ್ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಪ್ರವಾದಿ ಅವಹೇಳನ ಮಾಡಿದ್ದಕ್ಕಾಗಿ ಜಮಾತೆ ತಬ್ಲಿಘಿ ಸಂಘಟನೆಯ ತೀವ್ರಗಾಮಿಗಳು ಸೇರಿ ಹತ್ಯೆ ನಡೆಸಿದ್ದಾರೆ ಎಂದು ಅಧಿಕಾರಿಗಳು ಕೋರ್ಟಿಗೆ ತಿಳಿಸಿದ್ದಾರೆ.
ಉಮೇಶ್ ಕೊಲ್ಹೆ ಮುಸ್ಲಿಂ ಧಾರ್ಮಿಕ ಭಾವನೆಯನ್ನು ಘಾಸಿಗೊಳಿಸಿದ್ದಕ್ಕಾಗಿ ತಬ್ಲಿಘಿ ಸದಸ್ಯರು ಹತ್ಯೆ ಮಾಡಿದ್ದಾರೆ. ಇದೊಂದು ತೀವ್ರಗಾಮಿಗಳ ಗುಂಪಿನಿಂದ ನಡೆದ ಭಯೋತ್ಪಾದಕ ಕೃತ್ಯವೆಂದು ಎನ್ಐಎ ತಿಳಿಸಿದೆ. ಪ್ರವಾದಿ ಪೈಗಂಬರ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಪರವಾಗಿ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಉಮೇಶ್ ಕೊಲ್ಹೆ ಅವರನ್ನು ಜೂನ್ 21ರಂದು ಕೊಲೆ ಮಾಡಲಾಗಿತ್ತು.
ಜೂನ್ 28ರಂದು ರಾಜಸ್ಥಾನದ ಉದಯಪುರದಲ್ಲಿ ಕನ್ನಯ್ಯಲಾಲ್ ಎಂಬ ಟೈಲರನ್ನು ದುಷ್ಕರ್ಮಿಗಳು ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದರು. ಈ ಘಟನೆ ಬೆನ್ನಲ್ಲೇ ನೂಪುರ್ ಶರ್ಮಾ ಪರವಾಗಿ ಪೋಸ್ಟ್ ಹಾಕಿದ್ದ ಕಾರಣಕ್ಕೆ ಹತ್ಯೆ ಆಗಿರುವುದು ದೇಶದಲ್ಲಿ ದೊಡ್ಡ ಸಂಚಲನ ಉಂಟು ಮಾಡಿತ್ತು. ಆನಂತರ, ಜೂನ್ 21ರಂದು ಮೆಡಿಕಲ್ ಶಾಪ್ ಬಂದ್ ಮಾಡಿ ಹೋಗುತ್ತಿದ್ದ ಉಮೇಶ್ ಕೊಲ್ಹೆ ಅವರನ್ನು ಕೊಲೆ ಮಾಡಿರುವುದು ಕೂಡ ಅದೇ ರೀತಿಯ ಕೃತ್ಯ ಎನ್ನುವುದು ಪತ್ತೆಯಾಗಿತ್ತು. ಕೃತ್ಯದ ಬಗ್ಗೆ ತನಿಖೆ ನಡೆಸಿದ ಎನ್ಐಎ, ಕೊಲೆ ಹಿಂದಿನ ಭಯಾನಕ ಸಂಚನ್ನು ಹೊರಗೆಡವಿದೆ. ಕೊಲೆ ಆರೋಪಿಗಳಿಗೆ ಉಮೇಶ್ ಕೊಲ್ಹೆ ವಿರುದ್ಧ ಯಾವುದೇ ವೈಯಕ್ತಿಕ ಹಗೆತನ ಇಲ್ಲದಿದ್ದರೂ, ಕೇವಲ ಪ್ರವಾದಿ ನಿಂದನೆಗೆ ಬೆಂಬಲ ವ್ಯಕ್ತಪಡಿಸಿದ್ದಾನೆ ಎಂಬ ಕಾರಣಕ್ಕೆ ಕುತ್ತಿಗೆ ಕಡಿದು ಕೊಲೆ ಮಾಡಿದೆ.
ಪ್ರವಾದಿ ನಿಂದಕರಿಗೆ ಶಿರಚ್ಛೇದವೇ ಶಿಕ್ಷೆ ಎನ್ನುವ ಷರಿಯಾ ಕಾನೂನನ್ನು ತಬ್ಲಿಘಿ ಸದಸ್ಯರು ಜಾರಿ ಮಾಡಿದ್ದಾರೆ. ಇದಕ್ಕಾಗಿ ತೀವ್ರಗಾಮಿಗಳು ಸೇರಿಕೊಂಡು ಪ್ರತ್ಯೇಕ ಗುಂಪನ್ನು ರಚಿಸಿದ್ದರು. ಅಲ್ಲದೆ, ನೂಪುರ್ ಶರ್ಮಾ ಬೆಂಬಲಿಸಿ ವಾಟ್ಸಾಪ್ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದನ್ನೇ ಗುರಿಯಾಗಿಸಿ ಸೇಡು ತೀರಿಸಿಕೊಳ್ಳಲು ಸಂಚು ನಡೆಸಿದ್ದರು. ರಾತ್ರಿ ವೇಳೆ ಮೆಡಿಕಲ್ ಶಾಪ್ ಬಂದ್ ಮಾಡಿ ಮಗನ ಜೊತೆಗೆ ಬೈಕಿನಲ್ಲಿ ಹಿಂತಿರುಗುತ್ತಿದ್ದ ಉಮೇಶ್ ಕೊಲ್ಹೆ(54) ಅವರನ್ನು ಅಡ್ಡಗಟ್ಟಿ ಕುತ್ತಿಗೆ ಸೀಳಿ ಕೊಲೆ ಮಾಡಲಾಗಿತ್ತು. ಅಲ್ಲದೆ, ಕೊಲೆಗೈದ ಬಳಿಕ ಆರೋಪಿಗಳು ಸಮಾಜದಲ್ಲಿ ಭಯ ಮೂಡಿಸುವುದಕ್ಕಾಗಿ ಸಂಭ್ರಮಾಚರಣೆ ಮಾಡಿದ್ದರು ಎಂಬುದನ್ನು ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ನಮೂದಿಸಿದ್ದಾರೆ.
ಕೊಲೆಗೆ ಹತ್ತು ದಿನ ಮೊದಲೇ ಸ್ಕೆಚ್
ಇರ್ಫಾನ್ ಖಾನ್ ಕೊಲೆ ಕೃತ್ಯದ ಮಾಸ್ಟರ್ ಮೈಂಡ್ ಆಗಿದ್ದ. ನೂಪುರ್ ಶರ್ಮಾ ಹೇಳಿಕೆಯ ವಿಚಾರದಲ್ಲಿ ದೇಶದಾದ್ಯಂತ ಪ್ರತಿಭಟನೆ, ದೂರುಗಳು ದಾಖಲಾದ ಸಂದರ್ಭದಲ್ಲೇ ಅಮರಾವತಿಯ ಸ್ಥಳೀಯ ಠಾಣೆಯಲ್ಲಿ ಇರ್ಫಾನ್ ಖಾನ್ ಮತ್ತಿತರರು ದೂರು ದಾಖಲಿಸಲು ಮುಂದಾಗಿದ್ದರು. ಆದರೆ ದೆಹಲಿ ಸೇರಿದಂತೆ ವಿವಿಧ ಕಡೆ ಎಫ್ಐಆರ್ ದಾಖಲಾಗಿದ್ದರಿಂದ ಮತ್ತೊಂದು ಎಫ್ಐಆರ್ ದಾಖಲಿಸುವ ಅಗತ್ಯವಿಲ್ಲ ಎಂದು ಪೊಲೀಸರು ನಿರಾಕರಿಸಿದ್ದರು. ಆದರೆ ಇದರಿಂದ ತೃಪ್ತರಾಗದ ಮುಸ್ಲಿಂ ತೀವ್ರಗಾಮಿಗಳು ಪ್ರತ್ಯೇಕ ಸಭೆಯನ್ನು ನಡೆಸಿದ್ದಾರೆ. ಪ್ರವಾದಿ ನಿಂದಕರಿಗೆ ಶಿರಚ್ಛೇದವೇ ಶಿಕ್ಷೆ ಎಂಬುದನ್ನು ಜಾರಿಗೊಳಿಸಲು ಮುಂದಾಗಿದ್ದಾರೆ. ಇದೇ ವೇಳೆ, ಕೆಲವರು ನೂಪುರ್ ಶರ್ಮಾ ಪರವಾಗಿ ಪೋಸ್ಟ್ ಹಾಕುತ್ತಿರುವುದನ್ನು ಪತ್ತೆ ಮಾಡಿ ಅವರ ಕೊಲೆಗೆ ಸಂಚು ರೂಪಿಸಿದ್ದರು. ಅಮರಾವತಿಯಲ್ಲಿ ಉಮೇಶ್ ಕೊಲ್ಹೆ ಸೇರಿದಂತೆ ಮೂವರ ಹತ್ಯೆಗೆ ಸಂಚು ಹೂಡಿದ್ದರು. ಕೃತ್ಯ ಜಾರಿಗೊಳಿಸಲು ಇರ್ಫಾನ್ ಖಾನ್ ನೇತೃತ್ವದಲ್ಲಿ ತಂಡ ರೆಡಿ ಮಾಡಿಕೊಂಡಿದ್ದರು.
ಅತ್ತ ಉದಯಪುರದಲ್ಲಿ ಕನ್ನಯ್ಯಲಾಲ್ ಕೊಲೆ ಕೃತ್ಯದ ಬೆನ್ನಲ್ಲೇ ಜಾಗೃತಗೊಂಡ ಎನ್ಐಎ ಅಧಿಕಾರಿಗಳು ಅಮರಾವತಿಯ ಉಮೇಶ್ ಕೊಲ್ಹೆ ಪ್ರಕರಣವನ್ನು ಜುಲೈ 2ರಂದು ಕೈಗೆತ್ತಿಕೊಂಡಿದ್ದರು. ಪ್ರಕರಣದಲ್ಲಿ 11 ಮಂದಿ ಆರೋಪಿಗಳನ್ನು ಬಂಧಿಸಿದ್ದು, ದೇಶದ್ರೋಹದ ಕಾಯ್ದೆಯಡಿ ಕೇಸು ದಾಖಲಿಸಿದ್ದಾರೆ. ಚಾರ್ಜ್ ಶೀಟ್ ನಲ್ಲಿ 170ಕ್ಕೂ ಸಾಕ್ಷಿಗಳನ್ನು ಕಲೆಹಾಕಿರುವುದನ್ನು ಉಲ್ಲೇಖಿಸಿದೆ. ಅಲ್ಲದೆ, ತಾಂತ್ರಿಕ ಸಾಕ್ಷ್ಯ ಮತ್ತು ಆರೋಪಿಗಳ ಫೋನ್ ಕರೆಯ ಮಾಹಿತಿಗಳನ್ನು ಸೇರಿಸಿದೆ.
“The brutality of murdering a father in front of his son, under the open sky in a public space, with proper planning and celebration is a terrorist action, to say the least,’’ the NIA stated in its charge-sheet in the Umesh Kolhe murder case. Kolhe's killing in Maharashtra’s Amravati district on June 21 was a well-hatched terror conspiracy to spread terror in the hearts and minds of people across the country, the NIA told the Mumbai court while slapping charges against eleven accused in the case in its 137-page charge-sheet.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am