ಬ್ರೇಕಿಂಗ್ ನ್ಯೂಸ್
20-12-22 03:29 pm HK News Desk ದೇಶ - ವಿದೇಶ
ಜೈಪುರ, ಡಿ.20: ಬಡತನ ರೇಖೆಗಿಂತ ಕೆಳಗಿರುವ ಮತ್ತು ಕೇಂದ್ರ ಸರಕಾರದ ಉಜ್ವಲ ಯೋಜನೆಯಡಿ ಒಳಗೊಂಡಿರುವ ಎಲ್ಪಿಜಿ ಗ್ಯಾಸ್ ಗ್ರಾಹಕರಿಗೆ ರಾಜಸ್ಥಾನ ಸರಕಾರ ಬಿಗ್ ಆಫರ್ ಘೋಷಿಸಿದೆ. ವರ್ಷದಲ್ಲಿ 12 ಸಿಲಿಂಡರ್ ಗಳನ್ನು ತಲಾ 500 ರೂ.ಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಘೋಷಿಸಿದ್ದಾರೆ.
ಮುಂದಿನ ವರ್ಷ ಚುನಾವಣೆ ಎದುರಿಸಲಿರುವ ರಾಜಸ್ಥಾನದ ಕಾಂಗ್ರೆಸ್ ಸರಕಾರ, ಚುನಾವಣೆ ದೃಷ್ಟಿಯಲ್ಲಿರಿಸಿ ಬೆಲೆಯೇರಿಕೆಯಿಂದ ತತ್ತರಿಸಿರುವ ಜನರಿಗೆ ಸಿಲಿಂಡರ್ ದರವನ್ನು ಇಳಿಸುವ ಘೋಷಣೆ ಮಾಡಿದೆ. ನಾನು ಮುಂದಿನ ತಿಂಗಳ ಬಜೆಟ್ ಗೆ ಸಿದ್ಧತೆ ನಡೆಸುತ್ತಿದ್ದೇನೆ. ಮೋದಿಯವರು ಉಜ್ವಲ ಯೋಜನೆಯಡಿ ಬಡವರಿಗೆ ಸಿಲಿಂಡರ್ ಗಳನ್ನು ನೀಡಿದ್ದಾರೆ. ಆದರೆ ಅವು ಈಗ ಖಾಲಿಯಾಗಿವೆ. ಯಾಕಂದ್ರೆ, ಸಿಲಿಂಡರ್ ಬೆಲೆ ಈಗ 400 ರೂ.ನಿಂದ 1040 ರೂ.ಗೆ ಏರಿಕೆಯಾಗಿದೆ. ಇದಕ್ಕಾಗಿ ನಾನು ಭರವಸೆ ನೀಡುತ್ತಿರೋದು ಏನಂದ್ರೆ, ಬಡವರಿಗೆ ಕೇವಲ 500 ರೂ.ನಲ್ಲಿಯೇ ಸಿಲಿಂಡರ್ ಗಳನ್ನು ನೀಡಲಿದ್ದೇನೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಉಪಸ್ಥಿತಿಯಲ್ಲೇ ಅಶೋಕ್ ಗೆಹ್ಲೋಟ್ ಈ ಘೋಷಣೆ ಮಾಡಿದ್ದಾರೆ.
ಮುಂದಿನ ವರ್ಷ ಅಸೆಂಬ್ಲಿ ಚುನಾವಣೆ ನಡೆಯಲಿದ್ದು, ಎರಡನೇ ಬಾರಿಗೆ ಕಾಂಗ್ರೆಸ್ ಅಧಿಕಾರಕ್ಕೇರಲು ಗೆಹ್ಲೋಟ್ ಹರಸಾಹಸ ನಡೆಸುತ್ತಿದ್ದಾರೆ. ಸಚಿನ್ ಪೈಲಟ್ ಬಳಗದ ಜೊತೆಗಿನ ಒಳಜಗಳದ ನಡುವಲ್ಲೇ ಮುಂದಿನ ಬಾರಿಯೂ ತಾನೇ ಮುಖ್ಯಮಂತ್ರಿಯಾಗಲು ಗೆಹ್ಲೋಟ್ ಕಸರತ್ತು ನಡೆಸಿದ್ದಾರೆ. ರಾಹುಲ್ ಗಾಂಧಿಯ ಭಾರತ್ ಜೋಡೊ ಯಾತ್ರೆ ರಾಜಸ್ಥಾನ ಪ್ರವೇಶ ಮಾಡಿದ ಈ ತಿಂಗಳ ಆರಂಭದಲ್ಲಿಯೇ ಅಲ್ಲಿನ ಒಳ ಜಗಳ ಹೊರಗೆ ಬಂದಿತ್ತು.
ಆದರೆ ಈ ನಡುವೆ, ರಾಹುಲ್ ಗಾಂಧಿ ಅಲ್ವಾರ್ ಜಿಲ್ಲೆಯಲ್ಲಿ ಯಾತ್ರೆಯ ನಡುವಲ್ಲೇ ರಾಜಸ್ಥಾನ ಸರಕಾರದ ಸಾಧನೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ರಾಜ್ಯ ಸರಕಾರ ಆರಂಭಿಸಿರುವ 1700 ಇಂಗ್ಲಿಷ್ ಮೀಡಿಯಂ ಶಾಲೆಗಳನ್ನು ರಾಹುಲ್ ಗಾಂಧಿ ಉಲ್ಲೇಖಿಸಿದ್ದಾರೆ.
The Congress government in Rajasthan will provide 12 LPG cylinders a year at ₹500 each to poor families enrolled under the Pradhan Mantri Ujjwala Yojana from April 1, Chief Minister Ashok Gehlot said on Monday. Mr. Gehlot made the announcement at a public meeting organised during Congress leader Rahul Gandhi’s Bharat Jodo Yatra at Mala Kheda village in Alwar district.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am