ಬ್ರೇಕಿಂಗ್ ನ್ಯೂಸ್
14-12-22 03:36 pm HK News Desk ದೇಶ - ವಿದೇಶ
ಭೋಪಾಲ್, ಡಿ.14: ಐದು ವರ್ಷಗಳ ಹಿಂದೆ ಹಿಂದು ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ ಮುಸ್ಲಿಂ ಯುವಕನೊಬ್ಬ ಹಿಂದು ಧರ್ಮಕ್ಕೆ ಮತಾಂತರಗೊಂಡಿದ್ದಾನೆ. ಮಧ್ಯಪ್ರದೇಶದ ಮಂಡ್ ಸೌರ್ ಜಿಲ್ಲೆಯ ಕಚ್ ನಾರಾ ಗ್ರಾಮದ ನಿವಾಸಿ ಅಫ್ಸರ್ ಮನ್ಸೂರಿ ಎಂಬಾತ ಹಿಂದುವಾಗಿ ಬದಲಾಗಿದ್ದಲ್ಲದೆ, ತನ್ನ ಹೆಸರನ್ನು ಕೃಷ್ಣ ಸನಾತನಿ ಎಂದು ಬದಲಿಸಿಕೊಂಡಿದ್ದಾನೆ.
ಐದು ವರ್ಷಗಳ ಹಿಂದೆ ರಾಧಾ ಎಂಬವಳನ್ನು ದೇವಸ್ಥಾನದಲ್ಲಿ ಮದುವೆಯಾಗಿದ್ದ ಅಫ್ಸರ್, ಆನಂತರ ತನ್ನ ಕುಟುಂಬದಿಂದ ದೂರವಿದ್ದು ಪ್ರತ್ಯೇಕವಾಗಿ ವಾಸವಿದ್ದರು. ಹಿಂದು ಸಂಪ್ರದಾಯಗಳನ್ನು ಪಾಲನೆ ಮಾಡುತ್ತಿದ್ದರು. ಇದೀಗ ಹಿಂದು ಹೆಸರಿನೊಂದಿಗೆ ಧರ್ಮವನ್ನು ಬದಲಿಸಿಕೊಂಡಿದ್ದಾರೆ. ಹಿಂದು ಧರ್ಮಕ್ಕೆ ಮತಾಂತರಗೊಂಡ ಪ್ರಕ್ರಿಯೆಯನ್ನು ಗಾಯತ್ರಿ ಪರಿವಾರದ ಅರ್ಚಕರೊಬ್ಬರು ನೆರವೇರಿಸಿದ್ದಾರೆ. ಗೋವಿನ ಮೂತ್ರ, ಸೆಗಣಿ, ಮೊಸರು, ಹಾಲು, ಜೇನಿನ ಅಭಿಷೇಕ ಮಾಡಿ ಮಂತ್ರ ಪಠಣಗೈದು ಹಿಂದು ಧರ್ಮಕ್ಕೆ ಸೇರಿಸಿಕೊಂಡಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿ ರೋಗಿಗಳ ಕೇರ್ ಟೇಕರ್ ಆಗಿ ರಾಧಾ ಕೆಲಸ ಮಾಡುತ್ತಿದ್ದರು. ಅಲ್ಲಿಗೆ ಅಫ್ಸರ್ ಮನ್ಸೂರಿ ಬೇರೆ ಬೇರೆ ಕಡೆಯಿಂದ ರೋಗಿಗಳನ್ನು ಒಯ್ದು ತಲುಪಿಸುತ್ತಿದ್ದರು. ಈ ವೇಳೆ, ರಾಧಾ ಪರಿಚಯವಾಗಿ ಪ್ರೀತಿ ಬೆಳೆದು ಮದುವೆಯಾಗಿದ್ದರು. ಆನಂತರ, ರಾಧಾಳನ್ನು ಜೊತೆಗೆ ಕರೆದುಕೊಂಡು ಬಂದು ಮಧ್ಯಪ್ರದೇಶದ ಮಂಡ್ ಸೌರ್ ನಲ್ಲಿಯೇ ವಾಸ ಮಾಡಿಕೊಂಡಿದ್ದರು. ಹಿಂದು ಯುವತಿಯನ್ನು ಪ್ರೀತಿಸಿ ಮದುವೆಯಾಗಿ ಬಳಿಕ ಮುಸ್ಲಿಂ ಆಗಿ ಮತಾಂತರಿಸುವ ಬಗ್ಗೆ ದೇಶದ ಎಲ್ಲೆಡೆ ಆರೋಪ ಕೇಳಿಬರುತ್ತಿರುವ ಸಂದರ್ಭದಲ್ಲೇ ಇಲ್ಲೊಬ್ಬ ತನ್ನ ಪ್ರೀತಿಗಾಗಿ ಪತ್ನಿಯ ಧರ್ಮಕ್ಕೇ ಮತಾಂತರಗೊಂಡಿದ್ದಾನೆ.
A Muslim man, who married a Hindu woman five years ago, has converted to Hindusim an changed his name to 'Krishna Sanatani'. The incident was reported from Madhya Pradesh's Mandsaur district. The Muslim man had married the woman from the Hindu community at a temple after falling in love with her.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm