ಬ್ರೇಕಿಂಗ್ ನ್ಯೂಸ್
12-12-22 10:29 pm HK News Desk ದೇಶ - ವಿದೇಶ
ನವವದೆಹಲಿ, ಡಿ.12: ಅರುಣಾಚಲ ಪ್ರದೇಶದ ಚೀನಾ ಗಡಿಯಲ್ಲಿ ಭಾರತೀಯ ಸೇನೆ ಮತ್ತು ಚೀನಾ ಸೈನಿಕರ ನಡುವೆ ಜಟಾಪಟಿ ನಡೆದಿದೆ. ಡಿ.9ರಂದು ಘಟನೆ ನಡೆದಿದ್ದು, ತವಾಂಗ್ ಸೆಕ್ಟರಿನ ಯಾಂಗ್ ಸ್ಟೆ ಎಂಬಲ್ಲಿ ಉಭಯ ದೇಶಗಳ ಸೈನಿಕರು ಪರಸ್ಪರ ಕಾದಾಡಿದ್ದಾರೆ. ಈ ಬಗ್ಗೆ ಸೋಮವಾರ ಭಾರತೀಯ ಸೇನೆ ಅಧಿಕೃತ ಮಾಹಿತಿ ನೀಡಿದ್ದು, ಭಾರತದ ಕಡೆಯಲ್ಲಿ ಆರು ಮಂದಿ ಸೈನಿಕರು ಗಾಯಗೊಂಡಿದ್ದಾಗಿ ತಿಳಿಸಿದೆ.
ಎರಡೂ ಕಡೆಗಳಲ್ಲಿ ಕೆಲವು ಸೈನಿಕರು ಅಲ್ಪಸ್ವಲ್ಪ ಗಾಯಗೊಂಡಿದ್ದಾರೆ. ಭಾರತದ ಸೈನಿಕರನ್ನು ಹೆಲಿಕಾಪ್ಟರ್ ನಲ್ಲಿ ಗುವಾಹಟಿಗೆ ತರಲಾಗಿದೆ. 17 ಸಾವಿರ ಅಡಿ ಎತ್ತರದ ಈ ಭಾಗದಲ್ಲಿ 300ರಷ್ಟು ಚೀನಾ ಸೈನಿಕರು ಏಕಾಏಕಿ ಎಲ್ಎಸಿ ಲೈನನ್ನು ದಾಟಿ ನುಗ್ಗಿ ಬಂದಿದ್ದಾರೆ. ಚೀನಾ ಸೈನಿಕರ ಅತಿಕ್ರಮಣ ತಿಳಿಯುತ್ತಿದ್ದಂತೆ ಭಾರತೀಯ ಸೈನಿಕರು ತಡೆದಿದ್ದು, ದೈಹಿಕ ಜಟಾಪಟಿ ನಡೆದಿದೆ. ಸದ್ಯಕ್ಕೆ ಗಡಿ ರೇಖೆಯ ಉದ್ದಕ್ಕೂ ಹಿಮ ಬಿದ್ದಿದ್ದು, ಇದರ ನಡುವೆ ಗಡಿ ರೇಖೆಯನ್ನು ಬದಲಿಸಲು ಚೀನಾ ಸೈನಿಕರು ಮುಂದಾಗಿದ್ದಾರೆ. ಆದರೆ ಭಾರತದ ಸೈನಿಕರು ಚೀನಾದ ಪ್ರಯತ್ನಕ್ಕೆ ತಡೆ ಹಾಕಿದ್ದಾರೆ.
ಆನಂತರ, ಚೀನಾ ಸೈನಿಕರನ್ನು ಹಿಮ್ಮೆಟ್ಟಿಸಲಾಗಿದೆ. ಸದ್ಯಕ್ಕೆ ಉಭಯ ದೇಶಗಳ ಸೇನೆಯ ಕಮಾಂಡರ್ ದರ್ಜೆಯ ಅಧಿಕಾರಿಗಳು ಶಾಂತಿ ಮಾತುಕತೆ ನಡೆಸಿದ್ದಾರೆ. ಕಳೆದ 2021ರ ಡಿಸೆಂಬರ್ ನಲ್ಲಿಯೂ ಅರುಣಾಚಲ ಪ್ರದೇಶದ ಇದೇ ಭಾಗದಲ್ಲಿ ಚೀನಾ ಸೈನಿಕರ ಅತಿಕ್ರಮಣ ನಡೆದಿತ್ತು. ಆನಂತರ, ನಿರಂತರ ಮಾತುಕತೆಯ ಬಳಿಕ ಎರಡೂ ಕಡೆಗಳಲ್ಲಿ ಜಮಾವಣೆಗೊಂಡಿದ್ದ ಸೇನೆಯನ್ನು ನಾಲ್ಕು ತಿಂಗಳ ನಂತರ ಹಿಂಪಡೆಯಲಾಗಿತ್ತು.
ಈ ಬಗ್ಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಶ್ನೆ ಮಾಡಿದ್ದು, ಸಂಸತ್ತಿನಲ್ಲಿ ಅಧಿವೇಶನ ನಡೆಯುತ್ತಿದ್ದರೂ ಸರಕಾರ ಏಕೆ ಇದನ್ನು ಮುಚ್ಚಿಟ್ಟಿದೆ. ಇದು ಬೇಸರ ಮೂಡಿಸುವ ಸಂಗತಿ. ಚೀನಾ ಗಡಿಯಲ್ಲಿ ಉಭಯ ದೇಶಗಳ ಸೇನೆಗಳ ನಡುವೆ ಕಾದಾಟ ನಡೆದಿದ್ದರೂ, ಭಾರತ ಸರಕಾರ ಅದನ್ನು ಜನರಿಗೆ ತಿಳಿಸದೆ ಕತ್ತಲಲ್ಲಿಟ್ಟಿದ್ದು ಯಾಕೆ ಎಂದು ಕೇಳಿದ್ದಾರೆ. ಕಾಂಗ್ರೆಸ್ ನಾಯಕರು, ಚೀನಾಗೆ ಸೂಕ್ತ ಪ್ರತ್ಯುತ್ತರ ನೀಡಬೇಕಾಗಿದೆ. ಭಾರತ ಸರಕಾರ ಯಾಕೆ ಸುಮ್ಮನೆ ಕುಳಿತಿದೆ ಎಂದು ಪ್ರಶ್ನೆ ಮಾಡಿದ್ದಾರೆ.
Indian and Chinese troops clashed along the Line of Actual Control (LAC) in the Tawang Sector in Arunachal Pradesh on December 9. Soldiers from both sides were injured in the clash.On December 9, the Chinese troops clashed with the Indian soldiers in Yangste area near Tawang sector, as per defense sources. The face-off led to minor injuries to a few personnel from both sides. At least Indian six soldiers were injured in the clash and were airlifted to Guwahati for treatment.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am