ಬ್ರೇಕಿಂಗ್ ನ್ಯೂಸ್
10-12-22 10:00 pm HK News Desk ದೇಶ - ವಿದೇಶ
ಶಿಮ್ಲಾ, ಡಿ.10: ಹಿಮಾಚಲ ಪ್ರದೇಶದಲ್ಲಿ ನೂತನ ಮುಖ್ಯಮಂತ್ರಿಯಾಗಿ ಸುಖವಿಂದರ್ ಸಿಂಗ್ ಸುಖ್ಖು ಅವರನ್ನು ಶನಿವಾರ ನಡೆದ ಶಾಸಕಾಂಗ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಉಪ ಮುಖ್ಯಮಂತ್ರಿ ಆಗಿ ಮುಖೇಶ್ ಅಗ್ನಿಹೋತ್ರಿ ಅವರನ್ನು ಆಯ್ಕೆ ಮಾಡಲಾಗಿದೆ.
ಭಾನುವಾರ ಬೆಳಗ್ಗೆ 11 ಗಂಟೆಗೆ ಪ್ರಮಾಣವಚನ ಸಮಾರಂಭ ನಡೆಯಲಿದ್ದು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಭಾಗವಹಿಸಲಿದ್ದಾರೆ. ಸುಖವಿಂದರ್ ಸಿಂಗ್ ಹಿಮಾಚಲ ಪ್ರದೇಶದ 15ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಕೇಂದ್ರ ಸಚಿವ ಅನುರಾಗ್ ಠಾಕೂರ್ ಪ್ರತಿನಿಧಿಸುವ ಹಮೀರ್ ಪುರ್ ಜಿಲ್ಲೆಯ ನದೌನ್ ವಿಧಾನಸಭೆ ಕ್ಷೇತ್ರದಲ್ಲಿ ಸತತ ಗೆಲ್ಲುತ್ತಾ ಬಂದಿರುವ ಸುಖವಿಂದರ್ ಸಿಂಗ್, ತನ್ನ 17ನೇ ವಯಸ್ಸಿನಲ್ಲಿ ಪಕ್ಷದಲ್ಲಿ ತೊಡಗಿಸಿಕೊಂಡಿದ್ದೇನೆ. ಪಕ್ಷ ತನಗೇನೆಲ್ಲ ಕೊಟ್ಟಿದೆ ಅದನ್ನು ಮರೆಯಲಾಗದು. ನಾನು ಮತ್ತು ಮುಖೇಶ್ ಅಗ್ನಿಹೋತ್ರಿ ತಂಡವಾಗಿ ಸರಕಾರ ನಡೆಸುತ್ತೇವೆ ಎಂದಿದ್ದಾರೆ. ನದೌನ್ ಕ್ಷೇತ್ರದಲ್ಲಿ 2003ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಗೊಂಡಿದ್ದ ಸುಖವಿಂದರ್ ಸಿಂಗ್ ಈಗ ಮಾಸ್ ಲೀಡರ್ ಆಗಿ ಪರಿವರ್ತನೆ ಆಗಿದ್ದಾರೆ.
ಈ ಬಾರಿ ಬಿಜೆಪಿ ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸುವ ಹಮೀರ್ ಪುರ್ ನಲ್ಲಿ ಐದು ಶಾಸಕ ಸ್ಥಾನಗಳಲ್ಲಿ ನಾಲ್ಕನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿ ಪಾಲಾಗಿದೆ. ಐದರಲ್ಲಿ ನಾಲ್ಕು ಸ್ಥಾನ ಗೆಲ್ಲಲು ಸುಖವಿಂದರ್ ಸಿಂಗ್ ಕಾರಣ ಎಂದು ಹೇಳಲಾಗುತ್ತಿದೆ. ಕಾನೂನು ಪದವಿ ಪಡೆದಿರುವ ಸುಖವಿಂದರ್ ಸಿಂಗ್ ಕೇಂದ್ರ ಮಟ್ಟದಲ್ಲಿ ರಾಹುಲ್ ಗಾಂಧಿಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಶುಕ್ರವಾರ ಮತ್ತು ಶನಿವಾರ ಶಾಸಕಾಂಗ ಸಭೆ ನಡೆದರೂ, ಸುಖವಿಂದರ್ ಸಿಂಗ್ ಹೆಸರು ಮುಖ್ಯಮಂತ್ರಿ ಗಾದಿಗೆ ಕೇಳಿಬಂದಿರಲಿಲ್ಲ. ಆದರೆ ಶಾಸಕಾಂಗ ಸಭೆಯಲ್ಲಿ 21 ಮಂದಿ ಶಾಸಕರು ಸುಖವಿಂದರ್ ಸಿಂಗ್ ಪರವಾಗಿ ಕೈ ಎತ್ತಿದ್ದರಿಂದ ಅವರ ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದೆ. ವಿದ್ಯಾರ್ಥಿ ದಿಸೆಯಲ್ಲೇ ಎನ್ಎಸ್ ಯುಐನಲ್ಲಿ ತೊಡಗಿಸಿ, ರಾಜ್ಯಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.
ಮಾಜಿ ಸಿಎಂ ವೀರಭದ್ರ ಸಿಂಗ್ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದರೂ, 2018ರ ವರೆಗೆ ಆರೂವರೆ ವರ್ಷ ಸುಖವಿಂದರ್ ಸಿಂಗ್ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಈ ಹಿಂದೆಯೇ ಸುಖವಿಂದರ್ ಸಿಂಗ್ ಹೆಸರು ಸಿಎಂ ಹುದ್ದೆಗೆ ಕೇಳಿಬಂದಿದ್ದರೂ, ವೀರಭದ್ರ ಸಿಂಗ್ ಬಣದವರು ವಿರೋಧ ಮಾಡುತ್ತಿದ್ದರು. ಹಾಲಿ ರಾಜ್ಯ ಘಟಕದ ಅಧ್ಯಕ್ಷೆ ದಿವಂಗತ ವೀರಭದ್ರ ಸಿಂಗ್ ಪತ್ನಿ ಪ್ರತಿಭಾ ಸಿಂಗ್ ಕೂಡ ಸುಖವಿಂದರ್ ಸಿಂಗ್ ಆಯ್ಕೆಗೆ ವಿರೋಧ ನಿಲುವು ಹೊಂದಿದ್ದರು. ಪ್ರತಿಭಾ ಸಿಂಗ್, ಮುಖೇಶ್ ಅಗ್ನಿಹೋತ್ರಿ ಪರವಾಗಿ ನಿಲುವು ಹೊಂದಿದ್ದರು. ಆದರೆ ಮುಕೇಶ್ ಪಂಡಿತ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಮುಖ್ಯಮಂತ್ರಿ ಹುದ್ದೆಯನ್ನು ನಿರಾಕರಿಸಲಾಗಿದೆ ಎನ್ನಲಾಗುತ್ತಿದೆ.
Ignoring the claims of Pratibha Singh and intense protest by her supporters, Congress on Saturday chose Sukhvinder Singh Sukhu as Chief Minister and Mukesh Agnihotri as his deputy in Himachal Pradesh where the party unseated the ruling BJP in the latest Assembly elections two days ago. The swearing-in ceremony will be held in Shimla on Sunday 11 AM. The choice of Sukhu (58), who is younger than other contenders, is seen as a cleverly-crafted message that the party is ready to hand over the reins to a leader who rose from the grassroots by turning its face to the demands and pressure put by a political dynasty whose legacy it used so far.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am