ಬ್ರೇಕಿಂಗ್ ನ್ಯೂಸ್
29-11-22 08:32 pm HK News Desk ದೇಶ - ವಿದೇಶ
ನವದೆಹಲಿ, ನ.29: ಶ್ರದ್ಧಾ ವಾಲ್ಕರ್ ಹಂತಕ ಅಫ್ತಾಬ್ ಪೂನಾವಾಲ ಬಗ್ಗೆ ದಿನಕ್ಕೊಂದು ಸುದ್ದಿಗಳು ಹೊರಬರುತ್ತಿವೆ. ಪೊಲೀಸರ ತನಿಖೆಯಲ್ಲಿ ಮೇ 18ರಂದು ಶ್ರದ್ಧಾಳನ್ನು ಅಚಾನಕ್ಕಾಗಿ ಕೊಂದಿದ್ದು ಅಲ್ವಂತೆ. ಆಕೆ, ಆತನ ಕಿರುಕುಳದಿಂದ ಬೇಸತ್ತು ದೂರವಾಗಲು ಬಯಸಿದ್ದಳಂತೆ. ಆತನನ್ನು ಬಿಟ್ಟು ತನ್ನೂರಿಗೆ ಹೊರಡಲು ಅನುವಾಗಿದ್ದಳಂತೆ. ಇದನ್ನು ಅರಗಿಸಿಕೊಳ್ಳಲಾಗದ ಅಫ್ತಾಬ್, ಶ್ರದ್ಧಾಳನ್ನು ಉಪಾಯದಿಂದ ಕೊಂದು ಹಾಕಿದ್ದನಂತೆ.
ತನ್ನವರು ಮತ್ತು ಮನೆಯವರನ್ನು ಬಿಟ್ಟು ಬಂದಿದ್ದುದರಿಂದ ಆಕೆಗೆ ಮರಳಿ ಹೋಗುವ ಬಗ್ಗೆ ಅಳುಕು ಇತ್ತು. ಆದರೂ ತನ್ನ ಗೆಳತಿಯರ ಬೆಂಬಲದಲ್ಲಿ ಮತ್ತೆ ಮನೆ ಸೇರಲು ನಿರ್ಧರಿಸಿದ್ದಳಂತೆ. ಅಫ್ತಾಬ್ ಜೊತೆಗಿನ ವೈಮನಸ್ಸು, ಆತನ ವರ್ತನೆಯಿಂದ ಬೇಸತ್ತು ಮನಸ್ಸು ಕಡಿದುಕೊಂಡಿದ್ದರೂ, ಫ್ಲ್ಯಾಟ್ ನಲ್ಲಿ ಒಟ್ಟಿಗೆ ವಾಸವಿದ್ದರು. ಅಷ್ಟರಲ್ಲಿಯೇ ಅಫ್ತಾಬ್ ಈ ಕೃತ್ಯ ಎಸಗಿದ್ದಾನೆ ಎಂದು ದೆಹಲಿ ಪೊಲೀಸರು ನ್ಯೂಸ್ 18 ಸಂಸ್ಥೆಗೆ ತಿಳಿಸಿದ್ದಾಗಿ ವರದಿಯಾಗಿದೆ.
ದೆಹಲಿಯ 200ಕ್ಕಿಂತಲೂ ಹೆಚ್ಚು ಪೊಲೀಸರು ಅಫ್ತಾಪ್ ಪ್ರಕರಣದಲ್ಲಿ ತನಿಖೆ ನಡೆಸುತ್ತಿದ್ದಾರೆ. ಆಕೆಯ ದೇಹದ ಭಾಗಗಳು, ಮೊಬೈಲ್, ಅಫ್ತಾಬ್ ಹಿನ್ನೆಲೆ, ಇಂಟರ್ನೆಟ್ ವ್ಯವಹಾರಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಅಫ್ತಾಬ್ ಸೆರೆಯಾಗುವುದಕ್ಕೂ ಮೊದಲೇ ತನ್ನ ಇಂಟರ್ನೆಟ್ ಹಿಸ್ಟರಿಗಳನ್ನು ಡಿಲೀಟ್ ಮಾಡಿದ್ದ. ಫೇಸ್ಬುಕ್, ಇನ್ ಸ್ಟಾ ಗ್ರಾಮ್, ಗೂಗಲ್ ಪೇ, ಜೊಮೇಟೊ ಆರ್ಡರ್ ಇತ್ಯಾದಿ ವಿವರಗಳನ್ನು ಅಳಿಸಿ ಹಾಕಿದ್ದು, ಇದಕ್ಕಾಗಿ ಆ ಕಂಪನಿಗಳಿಂದ ಮಾಹಿತಿ ನೀಡುವಂತೆ ಪೊಲೀಸರು ಕೇಳಿಕೊಂಡಿದ್ದಾರೆ. ಜೊಮೆಟೋ ಪೊಲೀಸರಿಗೆ ಮಾಹಿತಿ ನೀಡಿದ್ದು, ದಿನವೂ ಇಬ್ಬರಿಗೆ ಆರ್ಡರ್ ತರಿಸುತ್ತಿದ್ದ ಅನ್ನುವುದನ್ನು ಹೇಳಿದೆ. ಹೀಗಾಗಿ ಶ್ರದ್ಧಾ ಕೊಲೆಯ ನಂತರವೂ ಆತನ ಮನೆಯಲ್ಲಿ ಇಬ್ಬರು ಇದ್ದರು ಮತ್ತು ಬೇರೆ ಯುವತಿಯರನ್ನು ಮನೆಗೆ ಕರೆಸಿಕೊಳ್ಳುತ್ತಿದ್ದ ಅನ್ನುವುದಕ್ಕೆ ಸಾಕ್ಷಿ ಒದಗಿಸಿದೆ.
ಈ ನಡುವೆ, ಅಫ್ತಾಬ್ ಇದ್ದ ಮೆಹ್ರೌಲಿಯ ಮನೆಯ ಕಿಚನ್, ಬೆಡ್ ರೂಮಿನಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಅದನ್ನು ಎಫ್ಎಸ್ ಎಲ್ ತಂಡ ಪತ್ತೆ ಮಾಡಿದ್ದು, ಅದು ಶ್ರದ್ಧಾನದ್ದೇ ಅನ್ನುವ ಬಗ್ಗೆ ಪರೀಕ್ಷೆ ನಡೆಸುತ್ತಿದ್ದಾರೆ. ಡಿ.1 ಮತ್ತು 5ರಂದು ನಾರ್ಕೋ ಟೆಸ್ಟ್ ನಡೆಸುವುದಕ್ಕೆ ಪೊಲೀಸರು ನಿರ್ಧರಿಸಿದ್ದಾರೆ.
Contrary to his initial statement, suspect Aaftab Poonawala, 28, did not kill his live-in partner Shraddha Walkar, 26, out of sudden provocation on May 18, but murdered her because he could not digest the fact that she wanted to end their relationship, sources in the Delhi Police told News18 amid the ongoing probe. The Delhi Police on November 12 arrested Poonawala for allegedly killing Walkar, chopping her body into 35 pieces and scattering them across the city. Various teams of Delhi Police, with at least 200 police officers, are carrying investigating the case.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am