ಬ್ರೇಕಿಂಗ್ ನ್ಯೂಸ್
27-11-22 05:30 pm HK News Desk ದೇಶ - ವಿದೇಶ
ನವದೆಹಲಿ, ನ.27: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಜಯ ಸಾಧಿಸಲಿದ್ದು, ಸರಕಾರ ರಚಿಸುವುದು ನಿಶ್ಚಿತ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಮುಂದಿನ ವರ್ಷ ಜನವರಿ 31ರೊಳಗೆ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲಿದ್ದು, ಅದಕ್ಕಾಗಿ ರಾಜ್ಯ ಸರಕಾರಿ ನೌಕರರು ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಬೇಕು ಎಂದು ಕರೆ ನೀಡಿದ್ದಾರೆ. ಸೂರತ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಜ್ರಿವಾಲ್, 27 ವರ್ಷಗಳ ಬಿಜೆಪಿ ಸರಕಾರದಿಂದ ಗುಜರಾತ್ ಜನರು ಬೇಸತ್ತಿದ್ದಾರೆ. ಪರ್ಯಾಯ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ಹೇಳಿದ್ದಾರೆ.
ದೆಹಲಿ ಮತ್ತು ಪಂಜಾಬ್ ನಲ್ಲಿ ನನ್ನ ಭವಿಷ್ಯವಾಣಿ ನಿಜವಾಗಿತ್ತು. ಹಾಗೆಯೇ ದೆಹಲಿಯಲ್ಲೂ ನನ್ನ ಭವಿಷ್ಯ ನಿಜವಾಗಲಿದೆ. ನನ್ನ ಹೇಳಿಕೆಯನ್ನು ಬರೆದಿಟ್ಟುಕೊಳ್ಳಿ. ನಿಶ್ಚಿತವಾಗಿ ಆಪ್ ಗುಜರಾತ್ ನಲ್ಲಿ ಸರಕಾರ ರಚಿಸುತ್ತದೆ ಎಂದು ಹಾಳೆಯಲ್ಲಿ ಬರೆದು ಕೇಜ್ರಿವಾಲ್ ಅದನ್ನು ಮಾಧ್ಯಮಕ್ಕೆ ತೋರಿಸಿದರು. ಬಿಜೆಪಿ ಸರಕಾರದಿಂದ ಗುಜರಾತ್ ಜನರು ಭಯಗೊಂಡಿದ್ದು ಆಮ್ ಆದ್ಮಿ ಬೆಂಬಲ ನೀಡುತ್ತಿದ್ದಾರೆ. 27 ವರ್ಷಗಳ ದುರಾಡಳಿತದಿಂದ ಮುಕ್ತಿ ಹೊಂದಲು ಬಯಸುತ್ತಿದ್ದಾರೆ ಎಂದು ಹೇಳಿದರು.
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್, ಬಿಜೆಪಿ ದುರಾಡಳಿತದ ಬಗ್ಗೆ ಟೀಕಿಸುತ್ತಲೇ ಹೊಸ ಪರ್ಯಾಯವಾಗಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುವಂತೆ ಕರೆ ನೀಡಿದ್ದಾರೆ. ಬಿಜೆಪಿಯು 2005ರ ಎಪ್ರಿಲ್ ಬಳಿಕ ನೇಮಕಗೊಂಡಿರುವ ಸರಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆ ಜಾರಿಗೊಳಿಸುವುದಾಗಿ ಹೇಳಿದೆ. 185 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5ರಂದು ಚುನಾವಣೆ ನಡೆಯಲಿದ್ದು, 8ರಂದು ಮತ ಎಣಿಕೆ ನಡೆಯಲಿದೆ.
Delhi Chief Minister Arvind Kejriwal on Sunday made a written assertion that the Aam Aadmi Party (AAP) will form government in Gujarat after the upcoming Assembly polls. He also urged government employees in Gujarat to back the AAP while promising implementation of the old pension scheme for them by January 31 next year. Addressing a press conference in Surat, AAP national convener and Delhi Chief Minister Kejriwal said his predictions for the Delhi and Punjab Assembly elections came true, and the same will happen in Gujarat as well.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am