ಬ್ರೇಕಿಂಗ್ ನ್ಯೂಸ್
24-11-22 01:24 pm HK News Desk ದೇಶ - ವಿದೇಶ
ನವದೆಹಲಿ, ನ.24: ಹಾಲೆಂಡ್ ನಿಂದ ಮಲೇಶ್ಯಾಕ್ಕೆ ತೆರಳುತ್ತಿದ್ದ ಜೆಟ್ ವಿಮಾನವನ್ನು ಕ್ಷಿಪಣಿ ಉಡಾಯಿಸಿ ಹೊಡೆದುರುಳಿಸಿದ್ದ ಮೂವರಿಗೆ ಹೇಗ್ ಅಂತಾರಾಷ್ಟ್ರೀಯ ನ್ಯಾಯಾಲಯ ಜೀವಿತಾವಧಿ ಶಿಕ್ಷೆಯನ್ನು ವಿಧಿಸಿದೆ.
2014ರಲ್ಲಿ ಹಾಲೆಂಡ್ ದೇಶದ ಆಮ್ ಸ್ಟರ್ ಡ್ಯಾಮ್ ನಗರದಿಂದ ಮಲೇಶ್ಯಾದ ಕೌಲಾಲಂಪುರಕ್ಕೆ ಜೆಟ್ ವಿಮಾನ ತೆರಳುತ್ತಿತ್ತು. ವಿಮಾನ ಪೂರ್ವ ಉಕ್ರೇನ್ ಭಾಗದಲ್ಲಿ ಸಾಗುತ್ತಿದ್ದಾಗ ನಾಲ್ಕು ಜನ ಬಂಡುಕೋರರು ವಿಮಾನಕ್ಕೆ ಗುರಿಯಿಟ್ಟಿದ್ದರು. ಇದರಿಂದ ವಿಮಾನ ಸ್ಫೋಟಗೊಂಡು ಪತನವಾಗಿದ್ದು, ಅದರಲ್ಲಿದ್ದ 80 ಮಕ್ಕಳು ಸೇರಿ ಎಲ್ಲ 298 ಮಂದಿಯೂ ಸಾವನ್ನಪ್ಪಿದ್ದರು. ರಷ್ಯಾದ ಮಾಜಿ ಗುಪ್ತಚರ ಏಜಂಟ್ ಈಗರ್ ಗಿರ್ಕಿನ್, ಸರ್ಜಿ ಡಬಿನ್ ಸ್ಕಿ ಮತ್ತು ಉಕ್ರೇನ್ ಬಂಡುಕೋರ ನಾಯಕ ಲಿಯೋನಿಡ್ ಕರ್ಷೆಂಕೋ ಅವರನ್ನು ಕೋರ್ಟ್ ತಪ್ಪಿತಸ್ಥರೆಂದು ಘೋಷಿಸಿದ್ದು, ಜೀವಿತಾವಧಿ ಕಠಿಣ ಶಿಕ್ಷೆಗೆ ಗುರಿಪಡಿಸಿದೆ. ಅಲ್ಲದೆ, 16 ಮಿಲಿಯನ್ ಯೂರೋ ಹಣವನ್ನು ದಂಡದ ರೂಪದಲ್ಲಿ ನೀಡಲು ಹೇಳಿದ್ದು, ಅದನ್ನು ಸಂತ್ರಸ್ತರ ಕುಟುಂಬಕ್ಕೆ ನೀಡುವಂತೆ ಹೇಳಿದೆ. ಇನ್ನೊಬ್ಬ ಆರೋಪಿ ರಷ್ಯಾ ಪ್ರಜೆ ಒಲೆಗ್ ಪುಲತೊವ್ ನನ್ನು ಕೋರ್ಟ್ ಖುಲಾಸೆ ಮಾಡಿದೆ.
ಆರೋಪಿಗಳು ಮಿಲಿಟರಿ ವಿಮಾನ ಹೊಡೆದುರುಳಿಸುವ ಗುರಿ ಹೊಂದಿದ್ದರು. ತಪ್ಪಾಗಿ ಪ್ಯಾಸೆಂಜರ್ ವಿಮಾನಕ್ಕೆ ಕ್ಷಿಪಣೆ ಉಡಾಯಿಸಿದ್ದರು. ಆದರೆ ವಿಮಾನ ಹೊಡೆಯುವುದು ಅಕ್ಷಮ್ಯ ಅಪರಾಧ ಎಂದು ನ್ಯಾಯಾಧೀಶರು ವಿಚಾರಣೆಯಲ್ಲಿ ಹೇಳಿದ್ದರು. ತನ್ನ ಇಬ್ಬರು ಪ್ರಜೆಗಳಿಗೆ ಕೋರ್ಟ್ ಶಿಕ್ಷೆ ವಿಧಿಸಿದ್ದಕ್ಕೆ ಕಿಡಿಕಾರಿರುವ ರಷ್ಯಾ, ನಮ್ಮವರು ವಿಮಾನ ಪತನ ಮಾಡಿದ್ದು ಅಲ್ಲ. ನ್ಯಾಯಾಲಯ ಇಂಥ ತೀರ್ಪು ನೀಡಿದ್ದು ದುರಂತಕಾರಿ ಎಂದು ಹೇಳಿದೆ.
2014ರ ಜುಲೈ 17ರಂದು ಮಲೇಶ್ಯಾಕ್ಕೆ ಸೇರಿದ ಎಂಎಚ್ 17 ಹೆಸರಿನ ಜೆಟ್ ವಿಮಾನ ಪತನಗೊಂಡಿತ್ತು. ಅದಕ್ಕೆ ರಷ್ಯನ್ ಬಂಡುಕೋರರ ದಾಳಿ ಎನ್ನುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ನಾಲ್ಕು ಮಂದಿಯನ್ನು ಉಕ್ರೇನ್ ಸರಕಾರ ಬಂಧಿಸಿತ್ತು. ಹೇಗ್ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಇದೀಗ ರಷ್ಯನ್ ಪ್ರಜೆಗಳಿಗೆ ಕಠಿಣ ಶಿಕ್ಷೆ ಜಾರಿಗೊಳಿಸಿದೆ. ಘಟನೆಯಲ್ಲಿ 17 ದೇಶಗಳ ಜನರು ಸತ್ತಿದ್ದರು. 198 ಹಾಲೆಂಡ್ ಪ್ರಜೆಗಳು, 43 ಮಲೇಶ್ಯಾ, 38 ಆಸ್ಟ್ರೇಲಿಯಾ, ಹತ್ತು ಮಂದಿ ಇಂಗ್ಲೆಂಡ್ ಪ್ರಜೆಗಳಿದ್ದರು. ಒಬ್ಬರು 41 ವರ್ಷದ ಭಾರತೀಯ ಪ್ರಜೆ ವಿಮಾನದ ಸಿಬಂದಿಯಾಗಿದ್ದು, ಅವಘಡದಲ್ಲಿ ತೀರಿಕೊಂಡಿದ್ದರು.
A Dutch court sentenced three men to life imprisonment in the downing of Malaysia Airlines flight MH17 over Ukraine 2014, in the early stages of a war that eight years later would put the world on edge.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am