ಬ್ರೇಕಿಂಗ್ ನ್ಯೂಸ್
22-11-22 08:33 pm HK News Desk ದೇಶ - ವಿದೇಶ
ನವದೆಹಲಿ, ನ.22: ಸೌದಿ ಅರೇಬಿಯಾದಲ್ಲಿ ಕದ್ದವರ ಕೈ ಕಡಿಯುವುದು, ಅತ್ಯಾಚಾರ ಎಸಗಿದವರ ಜನನಾಂಗ ಕಡಿಯುವುದು, ಕೊಲೆ ಮಾಡಿದವರ ತಲೆ ಕಡಿಯುವ ಕಾನೂನು ಇದೆ. ಮುಸ್ಲಿಮರ ಷರಿಯಾ ಕಾನೂನಿನಡಿ ಅಲ್ಲಿ ಅಪರಾಧಿಗಳಿಗೆ ಕ್ರೂರ ಶಿಕ್ಷೆಗಳನ್ನು ಜಾರಿಗೊಳಿಸಲಾಗುತ್ತಿದೆ. ಇದೇ ಕಾನೂನಿನಡಿ ಕಳೆದ ಹತ್ತು ದಿನಗಳಲ್ಲಿ 12 ಮಂದಿಯನ್ನು ತಲೆ ಕಡಿಯುವ ಶಿಕ್ಷೆ ಜಾರಿಗೊಳಿಸಲಾಗಿದೆ ಎನ್ನುವ ಸುದ್ದಿ ಬಂದಿದೆ.
ಈ ಬಗ್ಗೆ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದ್ದು, ಹತ್ತು ದಿನಗಳಲ್ಲಿ 12 ಮಂದಿಯನ್ನು ತಲೆ ಕಡಿಯುವ ಶಿಕ್ಷೆಗೆ ಗುರಿಪಡಿಸಲಾಗಿದೆ. ಅದರಲ್ಲಿ ಮೂರು ಪಾಕಿಸ್ಥಾನೀಯರು, ನಾಲ್ವರು ಸಿರಿಯನ್ನರು, ಇಬ್ಬರು ಜೋರ್ಡಾನ್ ಪ್ರಜೆಗಳು ಮತ್ತು ಮೂವರು ಸೌದಿ ಅರೇಬಿಯಾ ಪ್ರಜೆಗಳಾಗಿದ್ದಾರೆ. ಇಷ್ಟಕ್ಕೂ ಅವರ ಅಪರಾಧ ಏನಿತ್ತೆಂದರೆ, ಅವರು ಅಕ್ರಮವಾಗಿ ಡ್ರಗ್ ಸಾಗಾಟ ಮತ್ತು ಮಾರಾಟದಲ್ಲಿ ತೊಡಗಿರುವುದು.
ಕಳೆದ ಮಾರ್ಚ್ ಒಂದೇ ತಿಂಗಳಲ್ಲಿ ಸೌದಿಯ ಇತಿಹಾಸದಲ್ಲೇ ಅತಿ ಹೆಚ್ಚು ಅಂದರೆ 81 ಮಂದಿಗೆ ಶಿರಚ್ಛೇದ ಶಿಕ್ಷೆಗೆ ಗುರಿ ಪಡಿಸಲಾಗಿದೆ. ಉಗ್ರರಿಗೆ ಬೆಂಬಲ ನೀಡಿದ್ದು ಸೇರಿದಂತೆ ವಿವಿಧ ರೀತಿಯ ಅಪರಾಧಗಳಿಗಾಗಿ ತಲೆ ಕಡಿಯುವ ಶಿಕ್ಷೆ ನೀಡಲಾಗಿದೆ. 2018ರಲ್ಲಿ ಅಮೆರಿಕದ ಪತ್ರಕರ್ತ ಜಮಾಲ್ ಕಶೋಗಿ ಎಂಬಾತನನ್ನು ಸೌದಿಯ ರಾಜನ ಅಪ್ಪಣೆಯಂತೆ ತಲೆ ಕಡಿಯಲಾಗಿತ್ತು. ಈ ಕೃತ್ಯಕ್ಕೆ ಜಗತ್ತಿನಾದ್ಯಂತ ಭಾರೀ ಖಂಡನೆ ವ್ಯಕ್ತವಾಗಿತ್ತು. ಆನಂತರ, ಎರಡು ವರ್ಷಗಳಲ್ಲಿ ತಲೆ ಕತ್ತರಿಸುವ ಶಿಕ್ಷೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು. ಇದೀಗ ಮತ್ತೆ ಹಳೆ ಮಾದರಿಯ ಶಿರಚ್ಛೇದ ಶಿಕ್ಷೆ ಜಾರಿ ಮಾಡಲಾಗುತ್ತಿದೆ. 2018ರ ನಂತರ ಕೇವಲ ಕೊಲೆ ಪ್ರಕರಣಗಳಲ್ಲಿ ಆರೋಪ ಸಾಬೀತಾದರೆ ಮಾತ್ರ ಶಿರಚ್ಛೇದ ಶಿಕ್ಷೆ ಜಾರಿಗೊಳಿಸುವ ಬಗ್ಗೆ ಸರಕಾರ ತೀರ್ಮನ ಕೈಗೊಂಡಿತ್ತು. ಆದರೆ ಇತ್ತೀಚೆಗೆ ಅಲ್ಲಿನ ರಾಜನ ನಿಧನಾನಂತರ ಹೊಸ ರಾಜನ ಆಗಮನವಾಗಿದ್ದು, ಹಳೆ ಕಾಲದ ಕ್ರೂರ ಶಿಕ್ಷೆಯೂ ಜಾರಿಗೆ ಬಂದಿದೆ.
Saudi Arabia has reportedly executed 12 people in the last 10 days for drug-related offences. Some of these were beheadings with a sword, a report said. As many as 12 people were sentenced to death after being imprisoned on non-violent drug charges and included three Pakistanis, four Syrians, two Jordanians and three Saudis, the Telegraph reported.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm