ಬ್ರೇಕಿಂಗ್ ನ್ಯೂಸ್
13-11-22 02:45 pm HK News Desk ದೇಶ - ವಿದೇಶ
ನವದೆಹಲಿ, ನ.13 : ಎರಡನೇ ವಿಶ್ವಯುದ್ಧದ ಸ್ಮರಣಾರ್ಥ ಅಮೆರಿಕದ ಟೆಕ್ಸಾಸ್ ನಲ್ಲಿ ನಡೆಯುತ್ತಿದ್ದ ವೈಮಾನಿಕ ಪ್ರದರ್ಶನದಲ್ಲಿ ಎರಡು ಯುದ್ಧ ವಿಮಾನಗಳ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದ್ದು ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ.
ಎರಡನೇ ವಿಶ್ವಯುದ್ಧ ಕಾಲದಲ್ಲಿ ಬಳಕೆಯಾಗಿದ್ದ ಬೋಯಿಂಗ್ ಬಿ-17 ಬಾಂಬರ್ ವಿಮಾನ ಮತ್ತು ಬೆಲ್ ಪಿ-63 ಕಿಂಗ್ ಕೋಬ್ರಾ ಎನ್ನುವ ಎರಡು ಯುದ್ಧ ವಿಮಾನಗಳು ಪ್ರದರ್ಶನದಲ್ಲಿ ಭಾಗಿಯಾಗಿದ್ದವು. ಡಲ್ಲಾಸ್ ಎಕ್ಸಿಕ್ಯೂಟಿವ್ ಏರ್ಪೋರ್ಟ್ನಲ್ಲಿ ಏರ್ ಶೋ ನಡೆದಿತ್ತು.
ಆದರೆ ಪ್ರದರ್ಶನ ನಡೆಯುತ್ತಿದ್ದಾಗಲೇ ಇವೆರಡೂ ಯುದ್ಧ ವಿಮಾನಗಳ ಮೇಲೆ ಕೆಳಗೆ ಹಾರಾಟ ನಡೆಸಿದ್ದು ಒಂದಕ್ಕೊಂದು ಪರಸ್ಪರ ಘರ್ಷಿಸಿ ಪತನಗೊಂಡಿದ್ದು ನೆಲಕ್ಕೆ ಬೀಳುತ್ತಲೇ ಬೆಂಕಿ ಹತ್ತಿಕೊಂಡು ಸ್ಫೋಟ ಸಂಭವಿಸಿದೆ. ಸಾವಿರಾರು ಜನರು ಏರ್ ಶೋ ನೋಡಲು ನೆರೆದಿರುವಾಗಲೆ ಆಗಸದಲ್ಲಿ ವಿಸ್ಮಯ ರೀತಿ ಸ್ಫೋಟ ನಡೆದಿದ್ದು ಇದರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಘಟನೆಯಲ್ಲಿ ಎರಡೂ ವಿಮಾನದಲ್ಲಿದ್ದ ಪೈಲಟ್ ಸೇರಿ ಆರು ಮಂದಿ ಅಧಿಕಾರಿಗಳು ಸುಟ್ಟು ಹೋಗಿದ್ದಾರೆ. ಘಟನೆ ಸಂಬಂಧ ವಿಮಾನ ನಿಲ್ದಾಣದ ಅಧಿಕಾರಿಗಳು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಘಟನೆಯಲ್ಲಿ 6 ಮಂದಿ ಮೃತಪಟ್ಟಿದ್ದು ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ಸ್ಫೋಟ ಘಟನೆಯ ವಿಡಿಯೋಗಳು ಟ್ವಿಟರ್ ನಲ್ಲಿ ವೈರಲ್ ಆಗಿದ್ದು ಬೆಚ್ಚಿ ಬೀಳಿಸುತ್ತವೆ.
ಎರಡನೇ ಯುದ್ಧ ಜರ್ಮನಿ ಮಣಿಸಿದ್ದ ಬಾಂಬರ್ ವಿಮಾನ !
ಬಿ -17 ಬಾಂಬರ್ ವಿಮಾನ ನಾಲ್ಕು ಇಂಜಿನ್ ಗಳದ್ದಾಗಿದ್ದು ಎರಡನೇ ಜಾಗತಿಕ ಯುದ್ಧದಲ್ಲಿ ಕೊನೆಗೆ ಜರ್ಮನಿಯ ಮೇಲೆ ಬಾಂಬಿನ ಮಳೆಗರೆದು ಅದನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. 1945 ರಲ್ಲಿ ಜಾಗತಿಕ ಯುದ್ಧ ಗೆಲ್ಲಿಸಿಕೊಟ್ಟಿದ್ದ ವಿಮಾನವನ್ನು ಅಮೆರಿಕ ಹಾಗೆಯೇ ಉಳಿಸಿಕೊಂಡಿತ್ತು. ಏರ್ ಶೋನಲ್ಲಿ ಮಾತ್ರ ಬಳಕೆ ಮಾಡುತ್ತಿತ್ತು. ಇನ್ನೊಂದು ಕಿಂಗ್ ಕೋಬ್ರಾ ಸಣ್ಣ ವಿಮಾನವಾಗಿದ್ದು ಆನಂತರ ರಷ್ಯಾ ಜೊತೆಗಿನ ಯುದ್ಧದಲ್ಲಿ ಬಳಕೆಯಾಗಿತ್ತು. ಎರಡು ವಿಮಾನಗಳು ಪರಸ್ಪರ ಹತ್ತಿರ ಬಂದು ಮುತ್ತಿಕ್ಕುವ ರೀತಿಯ ಪ್ರದರ್ಶನದಲ್ಲಿ ರೆಕ್ಕೆ ಬಡಿದುಕೊಂಡು ಎರಡೂ ವಿಮಾನಗಳು ಬ್ಲಾಸ್ಟ್ ಆಗಿವೆ. ಯುದ್ಧ ವಿಮಾನಗಳು ಈ ರೀತಿ ಘರ್ಷಣೆಗೊಂಡು ಪತನಕ್ಕೀಡಾಗುವುದು ಭಾರೀ ಅಪರೂಪ. ಘಟನೆ ಬಗ್ಗೆ ಅಮೆರಿಕ ಸರಕಾರ ಉನ್ನತ ಮಟ್ಟದ ತನಿಖೆಗೆ ಆದೇಶ ಮಾಡಿದೆ.
Two World War II airplanes collide and crash during Wings Over Dallas air show (6 people believed to be onboard)#dallasairshow pic.twitter.com/CRa0VEdEJZ
— Tammy the Black Prepper (@TammytheBP) November 12, 2022
Two World War II-era airplanes collided and crashed while performing a flyover at a commemorative event in Texas on Saturday, the Federal Aviation Administration said in a statement. Six people were onboard the two planes at the time of the crash, the Commemorative Air Force said.A Boeing B-17 Flying Fortress and a Bell P-63 Kingcobra were participating in the Air Force's Wings Over Dallas air show when they collided mid-air near the Dallas Executive Airport just before 1:30 p.m. local time, the FAA said.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm