ಬ್ರೇಕಿಂಗ್ ನ್ಯೂಸ್
06-11-22 07:46 pm HK News Desk ದೇಶ - ವಿದೇಶ
ತಿರುಪತಿ, ನ.6: ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ತನ್ನ ಆಸ್ತಿ ವಿವರ ಘೋಷಿಸಿದ್ದು, ರೂ.15 ಸಾವಿರ ಕೋಟಿ ನಗದು, 10.3 ಟನ್ ಚಿನ್ನ, ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸುಮಾರು ರೂ. 5,300 ಕೋಟಿ ಠೇವಣಿಯನ್ನು ಹೊಂದಿದ್ದಾಗಿ ತಿಳಿಸಿದೆ.
ಈ ಬಗ್ಗೆ ಖಾಸಗಿ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಟಿಟಿಡಿ ಅಧಿಕಾರಿ ಎವಿ ಧರ್ಮಾ ರೆಡ್ಡಿ, ದೇವಾಲಯದ ಒಟ್ಟು ಆಸ್ತಿ 2.26 ಲಕ್ಷ ಕೋಟಿ ರೂಪಾಯಿ ತಲುಪಿರುವುದಾಗಿ ಹೇಳಿದ್ದಾರೆ.
2019ರಿಂದ ವಿವಿಧ ರೂಪಗಳಲ್ಲಿ ಟಿಟಿಡಿಯಿಂದ ರೂ. 15,938 ಕೋಟಿ ಹೂಡಿಕೆ ಮಾಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಹೂಡಿಕೆ ರೂ. 2,900 ಕೋಟಿ ಹೆಚ್ಚಾಗಿದೆ ಎಂದವರು ತಿಳಿಸಿದ್ದಾರೆ.
ಬ್ಯಾಂಕ್ಗಳಲ್ಲಿ ಚಿನ್ನದ ಠೇವಣಿ 2.9 ಟನ್ ಹೆಚ್ಚಾಗಿದ್ದು, 2019ರಲ್ಲಿ 7.3 ಟನ್ ಇತ್ತು. ಹೆಚ್ಚುವರಿ ಆದಾಯವನ್ನು ಆಂಧ್ರಪ್ರದೇಶ ಸರ್ಕಾರದ ಭದ್ರತಾ ಠೇವಣಿಗಳಲ್ಲಿ ಹೂಡಿಕೆ ಮಾಡಲಿದೆ ಎನ್ನುವ ವರದಿಗಳನ್ನು ಟಿಟಿಡಿ ಪ್ರತಿನಿಧಿಗಳು ನಿರಾಕರಿಸಿದ್ದಾರೆ.
ವಿವಿಧ ಕಡೆ 7,123 ಎಕರೆ ಆಸ್ತಿಯನ್ನು ಅಥವಾ 960 ಸ್ವತ್ತುಗಳನ್ನು ದೇವಾಲಯ ಹೊಂದಿದೆ. ಪ್ರತಿನಿತ್ಯ 50 ಸಾವಿರದಿಂದ 1 ಲಕ್ಷ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ನ.5ರಂದು 82 ಸಾವಿರ ಭಕ್ತರು ಭೇಟಿ ನೀಡಿದ್ದಾರೆ. ಉದ್ಯಮಿಗಳು, ಸಿನಿಮಾ ತಾರೆಯರು, ಜನಪ್ರಿಯ ವ್ಯಕ್ತಿಗಳು, ರಾಜಕಾರಣಿಗಳು ಹೆಚ್ಚಾಗಿ ತಿರುಪತಿಯಲ್ಲಿ ದೊಡ್ಡ ಮೊತ್ತದ ಸೇವೆ ಸಲ್ಲಿಸುತ್ತಾರೆ ಎಂದು ಧರ್ಮಾ ರೆಡ್ಡಿ ಮಾಹಿತಿ ನೀಡಿದ್ದಾರೆ.
The net worth of the Lord Venkateswara temple, believed to be one of the richest in India, is pegged at Rs 2.26 lakh crore. Tirupati temple trust has declared assets over 10 tonnes of gold and Rs 15,938 crores in cash. The trust, however, called social media reports that TTD had decided to invest surplus funds in the securities and bonds of the Andhra Pradesh government false and incorrect.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm