ಮೋರ್ಬಿ ಸೇತುವೆ ದುರಂತಕ್ಕೆ ಭ್ರಷ್ಟಾಚಾರವೇ ಕಾರಣ ; 2 ಕೋಟಿಯಲ್ಲಿ ಓರೆವಾ ಕಂಪನಿ ವ್ಯಯಿಸಿದ್ದು 12 ಲಕ್ಷ ಮಾತ್ರ!  

06-11-22 11:43 am       HK News Desk   ದೇಶ - ವಿದೇಶ

135 ಜನರ ಸಾವಿಗೆ ಕಾರಣವಾದ ಮೋರ್ಬಿ ಸೇತುವೆ ದುರಂತಕ್ಕೆ ದುರಸ್ತಿ ಕಾರ್ಯ ಕೈಗೊಂಡಿದ್ದ ಅಜಂತಾ ಒರೆವಾ ಕಂಪನಿಯ ಭ್ರಷ್ಟಾಚಾರವೇ ಕಾರಣ ಎನ್ನುವ ಅಂಶ ತನಿಖೆಯಲ್ಲಿ ತಿಳಿದುಬಂದಿದೆ.

ಅಹ್ಮದಾಬಾದ್, ನ.6: 135 ಜನರ ಸಾವಿಗೆ ಕಾರಣವಾದ ಮೋರ್ಬಿ ಸೇತುವೆ ದುರಂತಕ್ಕೆ ದುರಸ್ತಿ ಕಾರ್ಯ ಕೈಗೊಂಡಿದ್ದ ಅಜಂತಾ ಒರೆವಾ ಕಂಪನಿಯ ಭ್ರಷ್ಟಾಚಾರವೇ ಕಾರಣ ಎನ್ನುವ ಅಂಶ ತನಿಖೆಯಲ್ಲಿ ತಿಳಿದುಬಂದಿದೆ.

ಕಳೆದ ಮಾರ್ಚ್ ತಿಂಗಳಲ್ಲಿ ತೂಗು ಸೇತುವೆಯನ್ನು ಸಾರ್ವಜನಿಕ ಸಂಚಾರ ನಿಷೇಧಿಸಿ ದುರಸ್ತಿ ಕಾರ್ಯ ಕೈಗೊಳ್ಳಲು ಅಜಂತಾ ಒರೆವಾ ಕಂಪನಿಗೆ ವಹಿಸಲಾಗಿತ್ತು. ಆದರೆ ತೂಗು ಸೇತುವೆ ದುರಸ್ತಿ ಅನುಭವ ಹೊಂದಿಲ್ಲದ ಒರೆವಾ ಕಂಪನಿ ಬೇರೊಂದು ಕಂಪನಿಗೆ ಉಪ ಗುತ್ತಿಗೆ ನೀಡಿತ್ತು. ಇದಕ್ಕಾಗಿ ಮೋರ್ಬಿ ನಗರ ಪಾಲಿಕೆಯು ಖಾಸಗಿ ಕಂಪನಿಗೆ ಎರಡು ಕೋಟಿ ರೂಪಾಯಿ ನೀಡಿತ್ತು. ಆದರೆ ಕಂಪನಿಯು ಎರಡು ಕೋಟಿ ಮೊತ್ತದಲ್ಲಿ ಏಳು ತಿಂಗಳ ಅವಧಿಯಲ್ಲಿ ಕೇವಲ 12 ಲಕ್ಷ ರೂಪಾಯಿ ಮೊತ್ತವನ್ನು ಮಾತ್ರ ದುರಸ್ತಿ ಕಾರ್ಯಕ್ಕೆ ವಹಿಸಿತ್ತು. ಅಂದರೆ ಕೇವಲ ಆರು ಶೇಕಡಾ ಮೊತ್ತವನ್ನು ಮಾತ್ರ ವ್ಯಯಿಸಿತ್ತು ಎನ್ನುವ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

The Morbi bridge collapse and India's steel frame | Deccan Herald

Morbi bridge collapse: Search and rescue ops called off - here's why | Mint

ಹೀಗಾಗಿ ಓರೆವಾ ಕಂಪನಿಯ ಭ್ರಷ್ಟಾಚಾರದಿಂದಲೇ ತೂಗು ಸೇತುವೆ ಕುಸಿದು ಬೀಳುವಂತಾಗಿದೆ. ಉಪ ಗುತ್ತಿಗೆ ಪಡೆದಿದ್ದ ದೇವಪ್ರಕಾಶ್ ಸೊಲ್ಯುಷನ್ಸ್ ಕಂಪನಿಯಿಂದ ದುರಸ್ತಿ ಕಾರ್ಯಕ್ಕೆ ವ್ಯಯಿಸಿದ್ದ ಮೊತ್ತದ ಕುರಿತು ದಾಖಲೆಗಳನ್ನು ಪೊಲೀಸರು ಪಡೆದಿದ್ದಾರೆ. ಈ ವೇಳೆ, ಕೇವಲ 12 ಲಕ್ಷ ರೂ. ಮೊತ್ತವನ್ನಷ್ಟೇ ಖರ್ಚು ಮಾಡಿರುವುದು ತಿಳಿದುಬಂದಿದೆ. ಹೀಗಿದ್ದರೂ ಗುಜರಾತಿನ ಹೊಸ ವರ್ಷ ಅಕ್ಟೋಬರ್ 24 ಮತ್ತು ದೀಪಾವಳಿ ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆಂದು ತರಾತುರಿಯಲ್ಲಿ ಸೇತುವೆಯನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತ ಮಾಡಲಾಗಿತ್ತು. ಆದರೆ ಅತಿಯಾದ ಜನ ದಟ್ಟಣೆಯಿಂದಾಗಿ ಸೇತುವೆ ಕುಸಿದು ಬಿದ್ದಿತ್ತು. ಇದಕ್ಕೆ ಅಜಂತಾ ಒರೆವಾ ಕಂಪನಿಯೇ ಹೊಣೆಯೆಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Gujarat Morbi Bridge Collapse: What Led To Tragedy? Here Are Some Reasons

Gujarat Morbi bridge collapse: State govt suspends senior official | Mint

ಕಳೆದ ಮಾರ್ಚ್ ತಿಂಗಳಲ್ಲಿ ಅಹ್ಮದಾಬಾದ್ ಮೂಲದ ಅಜಂತಾ ಓರೆವಾ ಕಂಪನಿಗೆ ತೂಗು ಸೇತುವೆಯ ನಿರ್ವಹಣಾ ಗುತ್ತಿಗೆಯನ್ನು 15 ವರ್ಷಕ್ಕೆ ನೀಡಲಾಗಿತ್ತು. ಕಂಪನಿಯ ಅಧ್ಯಕ್ಷ ಜಯಸುಖ್ ಪಟೇಲ್ ಈ ಗುತ್ತಿಗೆಯನ್ನು ಪಡೆದಿದ್ದರು. ಮೇಲ್ನೋಟಕ್ಕೆ ತೂಗು ಸೇತುವೆ ಹೆಸರಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದು ಕಂಡುಬಂದಿದ್ದು ಮೋರ್ಬಿ ನಗರ ಪಾಲಿಕೆಯ ಅಧಿಕಾರಿಗಳನ್ನೂ ದುರಂತಕ್ಕೆ ಹೊಣೆ ಮಾಡಲಾಗಿದೆ. ಎರಡು ದಿನಗಳ ಹಿಂದೆ ಮೋರ್ಬಿ ಸೇತುವೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಮೋರ್ಬಿ ಪುರಸಭೆಯ ಮುಖ್ಯಾಧಿಕಾರಿಯನ್ನು ಅಮಾನತು ಮಾಡಲಾಗಿತ್ತು.

The shocking collapse of the 143-year-old Morbi suspension footbridge in Gujarat can be termed one of the most tragic events in the recent past. The mishap that occurred on October 30 claimed 135 lives.