ಆಸ್ಟ್ರೇಲಿಯದಲ್ಲಿ ಯುವತಿ ಕೊಲೆ ಪ್ರಕರಣ ; ಪಂಜಾಬ್ ಮೂಲದ ಆರೋಪಿ ಪತ್ತೆಗಾಗಿ 5.31 ಕೋಟಿ ರೂ. ಬಹುಮಾನ ಘೋಷಣೆ  

04-11-22 11:38 am       HK Desk News   ದೇಶ - ವಿದೇಶ

ಯುವತಿಯನ್ನು ಕೊಲೆಗೈದ ಪ್ರಕರಣದಲ್ಲಿ ಆಸ್ಟ್ರೇಲಿಯಾದಿಂದ ತಪ್ಪಿಸಿಕೊಂಡು ಬಂದಿರುವ ಪಂಜಾಬ್ ಮೂಲದ ಆರೋಪಿಯನ್ನು ಪತ್ತೆ ಮಾಡುವುದಕ್ಕಾಗಿ ಆಸ್ಟ್ರೇಲಿಯಾ ಒಂದು ಮಿಲಿಯನ್ ಆಸ್ಟ್ರೇಲಿಯನ್ ಡಾಲರ್(5.31 ಕೋಟಿ ರೂ.) ಬಹುಮಾನ ಘೋಷಣೆ ಮಾಡಿದೆ.

ನವದೆಹಲಿ, ನ.4: ಯುವತಿಯನ್ನು ಕೊಲೆಗೈದ ಪ್ರಕರಣದಲ್ಲಿ ಆಸ್ಟ್ರೇಲಿಯಾದಿಂದ ತಪ್ಪಿಸಿಕೊಂಡು ಬಂದಿರುವ ಪಂಜಾಬ್ ಮೂಲದ ಆರೋಪಿಯನ್ನು ಪತ್ತೆ ಮಾಡುವುದಕ್ಕಾಗಿ ಆಸ್ಟ್ರೇಲಿಯಾ ಒಂದು ಮಿಲಿಯನ್ ಆಸ್ಟ್ರೇಲಿಯನ್ ಡಾಲರ್(5.31 ಕೋಟಿ ರೂ.) ಬಹುಮಾನ ಘೋಷಣೆ ಮಾಡಿದೆ. 2018ರಲ್ಲಿ ನಡೆದ ಯುವತಿ ಕೊಲೆ ಪ್ರಕರಣದಲ್ಲಿ ಭಾರತದ ಪಂಜಾಬ್ ಮೂಲದ 38 ವರ್ಷದ ರಾಜವಿಂದರ್ ಸಿಂಗ್ ಆರೋಪಿಯಾಗಿದ್ದು, ಆತನಿಗಾಗಿ ಆಸ್ಟ್ರೇಲಿಯಾದ ಪೊಲೀಸರು ದೆಹಲಿಗೆ ಬಂದು ಸಿಬಿಐ ಜೊತೆ ಸೇರಿ ಹುಡುಕಾಟ ನಡೆಸುತ್ತಿದ್ದಾರೆ.

2018ರ ಅಕ್ಟೋಬರ್ 21ರಂದು ಕ್ವೀನ್ಸ್ ಲ್ಯಾಂಡ್ ನಗರದ ವಾಂಗೆಟ್ಟಿ ಬೀಚ್ ನಲ್ಲಿ ತೋಯಾ ಕಾರ್ಡಿಂಗ್ಲೆ ಎಂಬ 24 ವರ್ಷದ ಯುವತಿ ನಾಪತ್ತೆಯಾಗಿದ್ದಳು. ಮರುದಿನ ಆಕೆಯ ಶವ ಬೀಚ್ ಪಕ್ಕದಲ್ಲಿಯೇ ಪತ್ತೆಯಾಗಿತ್ತು. ಆಕೆಯನ್ನು ಕೊಲೆಗೈದಿರುವ ಬಗ್ಗೆ ಶಂಕೆ ವ್ಯಕ್ತಗೊಂಡು ಪೊಲೀಸರು ತನಿಖೆ ಆರಂಭಿಸಿದ್ದರು. ಇದರ ಬೆನ್ನಲ್ಲೇ ಕಾರ್ಡಿಂಗ್ಲೇ ಜೊತೆಗೆ ವೈರತ್ವ ಹೊಂದಿದ್ದ ರಾಜವಿಂದರ್ ಸಿಂಗ್ ಆಸ್ಟ್ರೇಲಿಯಾದಿಂದ ಭಾರತಕ್ಕೆ ನಿರ್ಗಮಿಸಿದ್ದ. ಅಲ್ಲಿನ ಪೊಲೀಸರು ತನಿಖೆ ಆರಂಭಿಸುವಷ್ಟರಲ್ಲಿ ರಾಜವಿಂದರ್ ಸಿಂಗ್ ಪಂಜಾಬಿನ ಅಮೃತಸರಕ್ಕೆ ತನ್ನ ಹೆಂಡ್ತಿ ಮಕ್ಕಳೊಂದಿಗೆ ತಲುಪಿದ್ದು, ಇಲ್ಲಿ ಭೂಗತನಾಗಿದ್ದಾನೆ.

ಆವತ್ತಿನಿಂದಲೇ ಆಸ್ಟ್ರೇಲಿಯನ್ ಪೊಲೀಸರು ತನಿಖೆ ನಡೆಸುತ್ತಿದ್ದು ಭಾರತದ ಸಹಕಾರವನ್ನೂ ಕೋರಿದ್ದರು. ಆಸ್ಟ್ರೇಲಿಯಾದ ಫೆಡರಲ್ ಬ್ಯೂರೋ ಅಧಿಕಾರಿಗಳು ಬಳಿಕ ದೆಹಲಿಗೆ ಬಂದು ತನಿಖೆಯನ್ನೂ ನಡೆಸುತ್ತಿದ್ದಾರೆ. ಇದೀಗ ಕ್ವೀನ್ಸ್ ಲ್ಯಾಂಡ್ ಆಡಳಿತವು ಆರೋಪಿ ಪತ್ತೆಗಾಗಿ ಭಾರೀ ಮೊತ್ತದ ಬಹುಮಾನವನ್ನು ಘೋಷಿಸಿದೆ. ರಾಜವಿಂದರ್ ಸಿಂಗ್ ಪಂಜಾಬ್ ರಾಜ್ಯದ ಮೋಗಾ ಜಿಲ್ಲೆಯ ಬುಟ್ಟರ್ ಕಲನ್ ನಿವಾಸಿಯಾಗಿದ್ದು, 2018ರ ಅಕ್ಟೋಬರ್ 23ರಂದು ಕ್ವೀನ್ಸ್ ಲ್ಯಾಂಡ್ ನಿಂದ ಅಮೃತಸರಕ್ಕೆ ತಲುಪಿದ್ದ. ಆನಂತರ ಎಲ್ಲಿಗೆ ಹೋಗಿದ್ದಾನೆ ಅನ್ನುವುದು ಯಾರಿಗೂ ಗೊತ್ತಿಲ್ಲ. ಹಿಂದಿ ಮತ್ತು ಪಂಜಾಬಿ ಭಾಷೆ ತಿಳಿದಿರುವ ಅಧಿಕಾರಿಗಳನ್ನು ತನಿಖೆಗೆ ನಿಯೋಜಿಸಿದ್ದು, ಪಂಜಾಬ್, ದೆಹಲಿಯಾದ್ಯಂತ ಹುಡುಕಾಟ ನಡೆಸುತ್ತಿದ್ದಾರೆ. ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿರುವುದು ಸಿಸಿಟಿವಿಯಲ್ಲಿ ದಾಖಲಾಗಿತ್ತು.

ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವುದಕ್ಕಾಗಿ ಆಸ್ಟ್ರೇಲಿಯನ್ ಪೊಲೀಸರು ದೊಡ್ಡ ಮೊತ್ತದ ಬಹುಮಾನ ಘೋಷಣೆ ಮಾಡಿದ್ದಾರೆ. ಆಸ್ಟ್ರೇಲಿಯದ ಅಪರಾಧ ಪತ್ತೆ ವಿಭಾಗದಲ್ಲಿ ನುರಿತ ಅಧಿಕಾರಿಗಳು ಇದರ ಹಿಂದೆ ಬಿದ್ದಿದ್ದು, ಭಾರತದಲ್ಲಿ ಸ್ಥಳೀಯ ಪೊಲೀಸರು, ಸಿಬಿಐ ಅಧಿಕಾರಿಗಳನ್ನೂ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿಸಲಾಗಿದೆ. ರಾಜವಿಂದರ್ ಸಿಂಗ್ ಮತ್ತು ಕಾಡಿಂಗ್ಲೇ ಜೊತೆಯಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕೆಲಸದ ಜಾಗದಲ್ಲಿ ವೈರತ್ವ ಉಂಟಾಗಿ ಬೀಚ್ ನಲ್ಲಿ ತನ್ನ ನಾಯಿ ಜೊತೆ ಸಾಗುತ್ತಿದ್ದ ಕಾಡಿಂಗ್ಲೇಯನ್ನು ಅಪಹರಿಸಿ ಕೊಲೆ ಮಾಡಲಾಗಿತ್ತು ಎನ್ನುವ ಆರೋಪಗಳಿವೆ.

Australia is offering 1 million Australian dollar ($633,000) reward for anyone who sheds lights on the whereabouts of an Indian-origin suspect in a 2018 murder case. “A $1 million reward for information from the public has been announced as part of ongoing investigations into the 2018 murder of 24-year-old Toyah Cordingley in Far North Queensland,” Queensland Police said Thursday. Singh was a nurse working at Innisfail, south of Cairns, when the body of Toyah Cordingley was found on Wangetti Beach, news agency AP reported, adding that Toyah had gone to the beach to walk her dog the previous day.