ಬ್ರೇಕಿಂಗ್ ನ್ಯೂಸ್
02-11-22 08:12 pm HK News Desk ದೇಶ - ವಿದೇಶ
ಅಹ್ಮದಾಬಾದ್, ನ.2: ಮೋರ್ಬಿ ತೂಗು ಸೇತುವೆ ಕುಸಿದ ಪ್ರಕರಣದಲ್ಲಿ ಸೇತುವೆ ನಿರ್ವಹಣೆ ಗುತ್ತಿಗೆ ಹೊಂದಿದ್ದ ಅಜಂತಾ ಓರೇವಾ ಕಂಪನಿಯ ನಾಲ್ವರು ಸೇರಿದಂತೆ ಒಂಬತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅವರನ್ನು ಕೋರ್ಟಿಗೆ ಹಾಜರು ಪಡಿಸಿದಾಗ, ಪಬ್ಲಿಕ್ ಪ್ರಾಸಿಕ್ಯೂಟರ್ ಆರೋಪಿಗಳನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಓರೇವಾ ಕಂಪನಿಯ ಮ್ಯಾನೇಜರ್ ದೀಪಕ್ ಪಾರೇಖ್ ಬಳಿ ಯಾಕೆ ಹೀಗಾಯ್ತು ಎಂದು ಕೇಳಿದ್ದಕ್ಕೆ, ಎಲ್ಲವೂ ದೈವೇಚ್ಛೆ ಎಂದು ಉಡಾಫೆ ಉತ್ತರ ನೀಡಿದ್ದಾನೆ. ಇದೇ ವೇಳೆ, ಫಾರೆನ್ಸಿಕ್ ಸೈನ್ಸ್ ಲ್ಯಾಬ್ ಕಡೆಯಿಂದ ತೂಗು ಸೇತುವೆಯ ಸರಳುಗಳ ಬಗ್ಗೆ ರಿಪೋರ್ಟ್ ಬಂದಿದ್ದು, ಕಬ್ಬಿಣದ ಸರಳು ತುಕ್ಕು ಹಿಡಿದಿತ್ತು. ಜನ ಸಂಚಾರಕ್ಕೆ ತಕ್ಕುದಾಗಿರಲಿಲ್ಲ ಎಂದು ವರದಿ ನೀಡಿರುವುದು ಮೋರ್ಬಿ ಮಹಾನಗರ ಪಾಲಿಕೆ ಮತ್ತು ದುರಸ್ತಿ ಗುತ್ತಿಗೆ ಪಡೆದಿದ್ದ ಕಂಪನಿಯ ಕುತ್ತಿಗೆ ಹಿಡಿಯುವಂತಾಗಿದೆ.
ಫಾರೆನ್ಸಿಕ್ ವರದಿಯಲ್ಲಿ ಸೇತುವೆಯ ನಡೆದುಹೋಗುವ ತಳಭಾಗವನ್ನು ಮಾತ್ರ ಬದಲಿಸಲಾಗಿತ್ತು. ಕಟ್ಟಿದ್ದ ಹಗ್ಗವನ್ನು ಬದಲು ಮಾಡಿರಲಿಲ್ಲ. ಆಯಿಲ್, ಗ್ರೀಸ್ ಕೊಡುವ ಕೆಲಸವನ್ನೂ ಮಾಡಿಲ್ಲ ಎಂದು ಹೇಳಿದೆ. ಈ ಬಗ್ಗೆ ಕೋರ್ಟಿನಲ್ಲಿ ಪ್ರತಿಕ್ರಿಯೆ ನೀಡಿದ ಪಬ್ಲಿಕ್ ಪ್ರಾಸಿಕ್ಯೂಟರ್, ಇಲ್ಲಿ ದೇವರಿಚ್ಚೆಯಂತೆ ನಡೆದುಕೊಳ್ಳುವುದಿಲ್ಲ. ನಿಮ್ಮ ನಿರ್ಲಕ್ಷ್ಯ ಅಪರಾಧವಾಗಿದ್ದು, ಸೂಕ್ತ ಶಿಕ್ಷೆ ಎದುರಿಸಬೇಕಾಗುವುದು ಎಂದು ಮ್ಯಾನೇಜರ್ ಗಳನ್ನು ಉದ್ದೇಶಿಸಿ ಹೇಳಿದರು.
ಇದೇ ಸಂದರ್ಭದಲ್ಲಿ ತೂಗು ಸೇತುವೆ ಕುಸಿತಕ್ಕೆ ಕಾರಣವಾದ ಅಜಂತಾ ಓರೆವಾ ಕಂಪನಿಯ ಪ್ರತಿನಿಧಿಗಳು ಮತ್ತು ಆರೋಪಿಗಳ ಪರವಾಗಿ ವಕಾಲತ್ತು ನಡೆಸುವುದಿಲ್ಲ ಎಂದು ಮೋರ್ಬಿ ಮತ್ತು ರಾಜಕೋಟ್ ಜಿಲ್ಲೆಯ ವಕೀಲರು ನಿರ್ಧರಿಸಿದ್ದಾರೆ. ಈ ಬಗ್ಗೆ ಎರಡೂ ಜಿಲ್ಲೆಗಳ ಬಾರ್ ಅಸೋಸಿಯೇಶನ್ ಪ್ರತಿನಿಧಿಗಳು ಹೇಳಿಕೆ ನೀಡಿದ್ದು ತಾವು ವಕಾಲತ್ತು ಮಾಡುವುದಿಲ್ಲ ಎಂದು ನಿರ್ಣಯಿಸಿದ್ದಾರೆ. ಭಾನುವಾರ ಸಂಜೆ ಬ್ರಿಟಿಷರ ಕಾಲದ ಮೋರ್ಬಿ ಸೇತುವೆ ಅತಿಯಾದ ಜನ ದಟ್ಟಣೆಯಿಂದಾಗಿ ಕುಸಿದು ಬಿದ್ದು 135 ಮಂದಿ ಮೃತಪಟ್ಟಿದ್ದರು. ದುರಂತ ಘಟನೆ ಇಡೀ ದೇಶಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿತ್ತು.
ದುರಂತದ ಹಿನ್ನೆಲೆಯಲ್ಲಿ ಗುಜರಾತ್ ರಾಜ್ಯದಲ್ಲಿ ಎರಡು ದಿನ ಶೋಕಾಚರಣೆ ಮಾಡಲಾಗಿದ್ದು, ಅರ್ಧಕ್ಕೆ ರಾಷ್ಟ್ರ ಧ್ವಜ ಹಾರಿಸಿ ಸಂತಾಪ ಸೂಚಿಸಲಾಗಿದೆ. ಎರಡು ಕೋಟಿ ವೆಚ್ಚದಲ್ಲಿ ತೂಗು ಸೇತುವೆಯನ್ನು ಆರು ತಿಂಗಳ ಕಾಲ ದುರಸ್ತಿ ಪಡಿಸಿ ದುರಂತ ನಡೆದ ನಾಲ್ಕು ದಿನಗಳ ಹಿಂದಷ್ಟೇ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಎರಡು ಕೋಟಿ ವೆಚ್ಚ ಮಾಡಿದ್ದರೂ, ತೂಗು ಸೇತುವೆಯ ಪ್ರಮುಖ ಅಂಗವಾದ ಕಬ್ಬಿಣದ ಸರಳುಗಳನ್ನು ಬದಲು ಮಾಡದೇ ಇರುವುದು ಕಂಪನಿ ಮತ್ತು ಮಹಾನಗರ ಪಾಲಿಕೆಯ ಲೋಪವಾಗಿ ಎದ್ದು ಕಂಡಿದೆ.
Morbi bridge collapse tragedy, in which 135 people lost their lives, was an “act of God" (Bhagwan ki ichcha), one of the arrested accused told the court as per the Additional Public Prosecutor of the case. Advocate HS Panchal further revealed that as per the Forensic Science Laboratory (FSL) report the cable wires of the structure were not in the condition to be reopened for the public and were “rusting away".
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm