ಬಿಷ್ಣೋಯ್ ಗ್ಯಾಂಗ್ ಕೊಲೆ ಬೆದರಿಕೆ ; ನಟ ಸಲ್ಮಾನ್ ಖಾನ್ ಗೆ ವೈ ಪ್ಲಸ್ ದರ್ಜೆಯ ಭದ್ರತೆ 

02-11-22 01:17 pm       HK News Desk   ದೇಶ - ವಿದೇಶ

ಜೀವ ಬೆದರಿಕೆ ಕರೆಗಳ ಹಿನ್ನೆಲೆಯಲ್ಲಿ ಬಾಲಿವುಡ್ ಸೂಪರ್‌ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ವೈ ಪ್ಲಸ್ ದರ್ಜೆಯ ಭದ್ರತೆಯನ್ನು ಒದಗಿಸಲಾಗಿದೆ. ಪಂಜಾಬ್ ಮೂಲದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ನಟ ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. 

ಮುಂಬೈ, ನ.2: ಜೀವ ಬೆದರಿಕೆ ಕರೆಗಳ ಹಿನ್ನೆಲೆಯಲ್ಲಿ ಬಾಲಿವುಡ್ ಸೂಪರ್‌ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ವೈ ಪ್ಲಸ್ ದರ್ಜೆಯ ಭದ್ರತೆಯನ್ನು ಒದಗಿಸಲಾಗಿದೆ. ಪಂಜಾಬ್ ಮೂಲದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ನಟ ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. 

ಇದರಂತೆ, ಸಲ್ಮಾನ್ ಖಾನ್ ಜೊತೆಗೆ ಇಬ್ಬರು ಶಸ್ತ್ರಸಜ್ಜಿತ ಕಾವಲುಗಾರರು ಇರುತ್ತಾರೆ. ಅವರ ನಿವಾಸಕ್ಕೆ ಇಬ್ಬರು ಹೆಚ್ಚುವರಿ ಕಾವಲುಗಾರರನ್ನೂ ನಿಯೋಜಿಸಲಾಗುತ್ತದೆ. ಕಳೆದ ಮೇ 29 ರಂದು ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಹತ್ಯೆ ಮಾಡಲಾಗಿತ್ತು. ಇದನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಮಾಡಿದ್ದಾಗಿ ಹೇಳಲಾಗಿತ್ತು. ಕೆನಡಾದಲ್ಲಿ ಅವಿತುಕೊಂಡಿರುವ ಬಿಷ್ಣೋಯ್ ತನ್ನ ಸಹವರ್ತಿಗಳ ಮೂಲಕ ಕೊಲೆ ಮಾಡಿಸಿದ್ದ. 

What is X, Y, Z, Z+, And SPG Category Security In India? - Sentinelassam

Salman Khan's father Salim Khan on how their family is taking care of their  house staff and employees | Hindi Movie News - Times of India

Sidhu Moosewala - Will withdraw my FIR and leave country: Sidhu Moosewala's  father still demanding justice for son's murder - Telegraph India

ಆ ಕೊಲೆ ಪ್ರಕರಣದ ಬಳಿಕ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರಿಗೆ ಬೆದರಿಕೆ ಪತ್ರಗಳು ಬಂದಿದ್ದವು. ಅದರಲ್ಲಿ ಸಲ್ಮಾನ್‌ ಅವರನ್ನು ಸಿದ್ದು ಮೂಸೆವಾಲಾ ರೀತಿಯಲ್ಲೇ ಹತ್ಯೆಗೀಡಾಗಲಿದ್ದಾರೆ ಎಂದು ಬರೆಯಲಾಗಿತ್ತು. ಇದೇ ವೇಳೆ, ಸಿದ್ದು ಮೂಸೆವಾಲಾನನ್ನು ಕೊಂದಿರುವುದಾಗಿ ಒಪ್ಪಿಕೊಂಡ ಬಿಷ್ಣೋಯ್ ಗ್ಯಾಂಗ್‌ನ ಹಲವು ಸದಸ್ಯರನ್ನು ಪೊಲೀಸರು ಬಂಧಿಸಿದ್ದರು. ಇದರ ಬೆನ್ನಲ್ಲೇ ಬೆದರಿಕೆ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ ಮುಂಬೈ ಪೊಲೀಸರು ನಟ ಸಲ್ಮಾನ್ ಗೆ ಹೆಚ್ಚಿನ ಭದ್ರತೆ ನೀಡಲು ಮುಂದಾಗಿದ್ದಾರೆ.

In the wake of threats from the Lawrence Bishnoi gang, the Maharashtra government has upgraded the security of some Bollywood stars including Salman Khan and Akshay Kumar, as per media reports. Salman will now be under Y+ category - four armed guards in different shifts will protect him. Lawrence Bishnoi gang, faces charges of being behind the murder of Punjabi singer Sidhu Moosewala.