ಮೋರ್ಬಿ ಸೇತುವೆ ದುರಂತ ; ಮೋದಿ ಭೇಟಿ ನೀಡುವ ಆಸ್ಪತ್ರೆಗೆ ಸುಣ್ಣ ಬಣ್ಣಕ್ಕೆ ತರಾತುರಿ, ಫೋಟೊ ಒಳ್ಳೆ ಬರಬೇಕಲ್ಲಾ ಎಂದು ಕಾಂಗ್ರೆಸ್ ಟ್ವೀಟ್ ! 

01-11-22 02:00 pm       HK News Desk   ದೇಶ - ವಿದೇಶ

ಮೋರ್ಬಿ ತೂಗು ಸೇತುವೆ ಕುಸಿತದ ಸಂತ್ರಸ್ತರನ್ನು ಭೇಟಿ ಮಾಡಲು ಗುಜರಾತಿನ ಮೋರ್ಬಿಯ ಸಿವಿಲ್ ಆಸ್ಪತ್ರೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ತರಾತುರಿಯಲ್ಲಿ ಆಸ್ಪತ್ರೆ ಕಟ್ಟಡವನ್ನು ದುರಸ್ತಿ ಪಡಿಸುವ ಫೋಟೊ, ವಿಡಿಯೋಗಳನ್ನು ಕಾಂಗ್ರೆಸ್ ಹಾಗೂ ಆಪ್ ಪಕ್ಷಗಳು ಟ್ವೀಟ್ ಮಾಡಿದ್ದು ನೇರವಾಗಿ ವಾಗ್ದಾಳಿ ನಡೆಸಿವೆ. 

ಅಹ್ಮದಾಬಾದ್, ನ.1: ಮೋರ್ಬಿ ತೂಗು ಸೇತುವೆ ಕುಸಿತದ ಸಂತ್ರಸ್ತರನ್ನು ಭೇಟಿ ಮಾಡಲು ಗುಜರಾತಿನ ಮೋರ್ಬಿಯ ಸಿವಿಲ್ ಆಸ್ಪತ್ರೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ತರಾತುರಿಯಲ್ಲಿ ಆಸ್ಪತ್ರೆ ಕಟ್ಟಡವನ್ನು ದುರಸ್ತಿ ಪಡಿಸುವ ಫೋಟೊ, ವಿಡಿಯೋಗಳನ್ನು ಕಾಂಗ್ರೆಸ್ ಹಾಗೂ ಆಪ್ ಪಕ್ಷಗಳು ಟ್ವೀಟ್ ಮಾಡಿದ್ದು ನೇರವಾಗಿ ವಾಗ್ದಾಳಿ ನಡೆಸಿವೆ. 

ಸಿವಿಲ್ ಆಸ್ಪತ್ರೆಗೆ ಬಣ್ಣ ಬಳಿಯುವ ಮತ್ತು ಟೈಲ್ಸ್ ಹಾಕುವ ಚಿತ್ರಗಳನ್ನು ಕಾಂಗ್ರೆಸ್ ಹಂಚಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಆಸ್ಪತ್ರೆಗೆ ಬಂದಾಗ ಉತ್ತಮ ಚಿತ್ರಗಳು ಬರಬೇಕಲ್ಲಾ.. ಅದಕ್ಕಾಗಿ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದೆ. ದುರಸ್ತಿ ಕಾರ್ಯವನ್ನು "ದುರಂತದ ಘಟನೆ" ಎಂದು ಕರೆದಿರುವ ಕಾಂಗ್ರೆಸ್, "ಅವರಿಗೆ ಇದರಿಂದ ನಾಚಿಕೆಯಾಗುವುದಿಲ್ಲ! ಅನೇಕ ಜನರು ಸತ್ತರೂ, ಅವರು ತಮ್ಮ ಪ್ರಚಾರ ಕಾರ್ಯಕ್ರಮಕ್ಕಾಗಿ ತಯಾರಿ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ದೂಷಿಸಿದೆ. 

Morbi hospital gets makeover ahead of PM Modi's visit - Rediff.com India  News

Morbi hospital gets makeover ahead of PM Modi's visit- The New Indian  Express

ಮೋರ್ಬಿಯ ಸೇತುವೆ ದುರಂತದಲ್ಲಿ 141 ಮಂದಿ ಸಾವನ್ನಪ್ಪಿದ್ದಾರೆ. ನಿಜವಾದ ಅಪರಾಧಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ, ಆದರೆ ಬಿಜೆಪಿಯವರು ಫೋಟೋಶೂಟ್ ಮಾಡುವ ಮೂಲಕ ಎಲ್ಲವನ್ನೂ ಮುಚ್ಚಿಡಬೇಕಾಗಿದೆ ಎಂದು ಆಪ್ ಆರೋಪಿಸಿದೆ. ಒಂದು ಕಡೆ ಮೋರ್ಬಿ ತೂಗು ಸೇತುವೆ ದುರಂತದಲ್ಲಿ ನೂರಾರು ಮಂದಿ ಸಾವಿನ ಮನೆ ಸೇರಿದ್ದಾರೆ. ಇನ್ನೊಂದು ಕಡೆಯಲ್ಲಿ ಪ್ರಧಾನಿ ಮೋದಿ ಭೇಟಿ ನೀಡುತ್ತಾರೆ ಎನ್ನುವ ಆತುರದಲ್ಲಿ ಸರ್ಕಾರಿ ಆಸ್ಪತ್ರೆಯನ್ನು ಅಲಂಕರಿಸಲಾಗುತ್ತಿದೆ. ಜನರ ಆರೋಗ್ಯಕ್ಕಿಂತ ಪ್ರಧಾನಿ ಮೋದಿ ಫೋಟೋಶೂಟ್ ಮುಖ್ಯವಾಯಿತೇ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಮೋರ್ಬಿ ಆಸ್ಪತ್ರೆಯಲ್ಲಿ ಪುನರ್ ನಿರ್ಮಾಣ ಹಾಗೂ ಸುಣ್ಣ ಬಣ್ಣ ಬಳೆಯುತ್ತಿರುವ ಫೋಟೋಗಳನ್ನು ಕಾಂಗ್ರೆಸ್ ತನ್ನ ಟ್ವೀಟ್ ನಲ್ಲಿ ಉಲ್ಲೇಖಿಸಿದೆ. 

PM modi Covid meeting: PM Narendra Modi interacts with CMs over Covid  situation - The Economic Times

ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿಯ ಹಿನ್ನೆಲೆಯಲ್ಲಿ ಗುಜರಾತ್‌ನ ಮೋರ್ಬಿಯ ಸಿವಿಲ್ ಆಸ್ಪತ್ರೆಯ ಗೋಡೆಗಳಿಗೆ ಬಣ್ಣವನ್ನು ಬಳಿಯಲಾಗುತ್ತಿದೆ. "ಮೋರ್ಬಿ ಸಿವಿಲ್ ಆಸ್ಪತ್ರೆಗೆ ರಾತ್ರೋರಾತ್ರಿ ಬಣ್ಣ ಬಳಿಯಲಾಗುತ್ತಿದೆ, ಆದ್ದರಿಂದ ನಾಳೆ ಪ್ರಧಾನಿ ಮೋದಿಯವರ ಫೋಟೋಶೂಟ್ ಸಮಯದಲ್ಲಿ ಕಟ್ಟಡದ ಕಳಪೆ ಸ್ಥಿತಿಯು ಬಹಿರಂಗಗೊಳ್ಳುವುದಿಲ್ಲ" ಎಂದು ಎಎಪಿ ಹಿಂದಿಯಲ್ಲಿ ಹೇಳಿದೆ.

The government hospital at Morbi has got a makeover ahead of Prime Minister Narendra Modi's visit to the facility to meet those injured in Sunday's suspension bridge collapse which claimed 135 lives. Workers were seen cleaning and painting a portion of the 300-bed hospital, which is a ground plus two-storey structure of three wings, ahead of Modi's visit later Tuesday.