ಬ್ರೇಕಿಂಗ್ ನ್ಯೂಸ್
28-10-22 10:46 pm HK News Desk ದೇಶ - ವಿದೇಶ
ಕೋಝಿಕ್ಕೋಡ್, ಅ.28 : ದೇಶಾದ್ಯಂತ ಕ್ರಾಂತಿ ಎಬ್ಬಿಸಿರುವ ಕಾಂತಾರ ಸಿನಿಮಾದ 'ವರಾಹರೂಪಂ' ಹಾಡಿಗೆ ಕೋಝಿಕ್ಕೋಡ್ ಕೋರ್ಟ್ ತಡೆ ನೀಡಿದೆ. ಕಾಂತಾರ ಚಿತ್ರದಲ್ಲಿ ಮಲಯಾಳಂ ಭಾಷೆಯ 'ನವರಸಂ..' ಹಾಡಿನಿಂದ ಪ್ರೇರಣೆಗೊಂಡು 'ವರಾಹರೂಪಂ' ಹಾಡು ಹೆಣೆಯಲಾಗಿತ್ತು ಎಂಬ ಆರೋಪ ಎದುರಾಗಿತ್ತು.
ಈ ಬಗ್ಗೆ ಮಲಯಾಳಂ ಆಲ್ಬಂ ಸಾಂಗ್ ಮಾಡಿದ್ದ 'ತೈಕ್ಕುಡಂ ಬ್ರಿಡ್ಜ್ ತಂಡ ಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ಕೇರಳದ ಕೋಝಿಕೋಡ್ ನ್ಯಾಯಾಲಯ ವರಾಹ ರೂಪಂ ಹಾಡನ್ನು ಪ್ರಸಾರ ಮಾಡದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಈ ವಿಚಾರವನ್ನು 'ತೈಕ್ಕುಡಂ ಬ್ರಿಡ್ಜ್' ತಂಡವೇ ತನ್ನ ಸೋಶಿಯಲ್ ಮೀಡಿಯಾ ಪೇಜ್ನಲ್ಲಿ ಹಂಚಿಕೊಂಡಿದೆ.
ಕಾಂತಾರಾ ಸಿನಿಮಾದ 'ವರಾಹ ರೂಪಂ' ಟ್ಯೂನ್ ಅನ್ನು 5 ವರ್ಷ ಹಳೆಯ ಮಲಯಾಳಂ ಆಲ್ಬಂ ನಿಂದ ಕದ್ದಿದ್ದಾರೆ ಎಂಬ ಚರ್ಚೆ ಶುರುವಾಗಿತ್ತು. ಹಾಡಿನ ಮೇಲೆ ಕೃತಿಚೌರ್ಯದ ಆರೋಪವೂ ಕೇಳಿಬಂದಿತ್ತು. ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಬಿ. ಲೋಕನಾಥ್ ಅವರು ಮಾತ್ರ ಆ ಹಾಡಿನಿಂದ ಪ್ರೇರಣೆ ಪಡೆದಿದ್ದೆ. ಹಾಗಂತ ಕಾಪಿ ಮಾಡಿಲ್ಲ ಎಂದಿದ್ದರು.
'ಇದು ಕಾಪಿ ಅಲ್ಲ, ಅದರಿಂದ ಸ್ಫೂರ್ತಿ ಪಡೆದು ಹಾಡು ಮಾಡಿದ್ದು. ರಾಗಗಳು ಒಂದೇ ಆಗಿರುವ ಕಾರಣದಿಂದ ಸಾಮ್ಯತೆ ಸಹಜ ಎಂದು ಅಜನೀಶ್ ಸಮಜಾಯಿಷಿ ನೀಡಿದ್ದರು. ಇಷ್ಟು ದಿನ ಸುಮ್ಮನಿದ್ದ 'ತೈಕ್ಕುಡಂ ಬ್ರಿಡ್ಜ್' ತಂಡದವರು ಚಿತ್ರ ದೇಶಾದ್ಯಂತ ಸದ್ದು ಮಾಡಿದ ಬೆನ್ನಲ್ಲೇ ಕೇಸ್ ಹಾಕಲು ನಿರ್ಧರಿಸಿದ್ದರು.
The Kozhikode Sessions Court has issued an injunction barring Kantara makers from playing the “Varaha Roopam” song in theatres and other streaming platforms after receiving a plagiarism complaint from Kerala-based music band, Thaikudam Bridge.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm