ಬ್ರೇಕಿಂಗ್ ನ್ಯೂಸ್
27-10-22 04:20 pm HK News Desk ದೇಶ - ವಿದೇಶ
ಲಕ್ನೋ, ಅ.27: ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ಗೆ ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕಾಗಿ ಮೂರು ವರ್ಷಗಳ ಜೈಲು ಶಿಕ್ಷೆ ನೀಡಲಾಗಿದೆ. 2019ರಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಐಎಎಸ್ ಅಧಿಕಾರಿ ಆಂಜನೇಯ ಕುಮಾರ್ ಸಿಂಗ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣದಲ್ಲಿ ರಾಮಪುರ್ ಜಿಲ್ಲೆಯ ಜನಪ್ರತಿನಿಧಿಗಳ ನ್ಯಾಯಾಲಯ ಆಜಂ ಖಾನ್ ಗೆ ಶಿಕ್ಷೆ ಪ್ರಕಟಿಸಿದೆ.
ಮಾಜಿ ಸಂಸದ ಆಜಂ ಖಾನ್ ವಿರುದ್ಧ ರಾಮಪುರ್ ಜಿಲ್ಲೆಯ ಮಿಲಾಕ್ ಕೊತ್ವಾಲಿ ಠಾಣೆಯಲ್ಲಿ 153ಎ (ಎರಡು ಗುಂಪುಗಳ ನಡುವೆ ದ್ವೇಷ ಹಬ್ಬಿಸುವುದು), 505-1 (ಜನರಿಗೆ ತಪ್ಪು ಮಾಹಿತಿ ನೀಡುವುದು) ಜೊತೆಗೆ 1951ರ ಜನಪ್ರತಿನಿಥಿ ಕಾಯ್ದೆಯಡಿ 125 ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಲಾಗಿತ್ತು. ಆಜಂ ಖಾನ್ ವಿರುದ್ಧ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಸ್ಥಳೀಯ ಬಿಜೆಪಿ ಮುಖಂಡ ಮತ್ತು ವಕೀಲನಾಗಿರುವ ಆಕಾಶ್ ಸಕ್ಸೇನಾ, ಜಿಲ್ಲಾಧಿಕಾರಿ ಬಗ್ಗೆ ತಪ್ಪು ಮಾಹಿತಿ ನೀಡುವುದು, ಎರಡು ಸಮುದಾಯಗಳನ್ನು ಎತ್ತಿಕಟ್ಟಿ ದ್ವೇಷ ಹರಡಿಸುವುದು, ಸಿಎಂ ಯೋಗಿ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿದ್ದಕ್ಕೆ ದೂರು ನೀಡಿದ್ದರು.

ವಿಡಿಯೋ ಸಹಿತ ನೀಡಿದ್ದ ದೂರನ್ನು ಪರಿಗಣಿಸಿದ ಚುನಾವಣಾಧಿಕಾರಿ ಸ್ಥಳೀಯ ಪೊಲೀಸರಿಗೆ ಸ್ವಯಂಪ್ರೇರಿತ ಕೇಸು ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಿದ್ದರು. ಮೋಸ, ವಂಚನೆ ಪ್ರಕರಣದಲ್ಲಿ ಆಜಂ ಖಾನ್ ಎರಡು ವರ್ಷ ಸೀತಾಪುರ್ ಜೈಲಿನಲ್ಲಿದ್ದರು. ಕಳೆದ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟಿನಲ್ಲಿ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದರು. ಭ್ರಷ್ಟಾಚಾರ ಸೇರಿದಂತೆ ಆಜಂ ಖಾನ್ 90ಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಮುಲಾಯಂ ಸಿಂಗ್ ಕಾಲದಲ್ಲಿ ಉತ್ತರ ಪ್ರದೇಶದಲ್ಲಿ ಸಚಿವರೂ ಆಗಿದ್ದ ಆಜಂ ಖಾನ್ ಮತ್ತೆ ಜೈಲು ಸೇರಿದ್ದಾರೆ.
Samajwadi Party (SP) leader Azam Khan was on Thursday sentenced to three years in prison in a hate speech case by a special MP/MLA court of Uttar Pradesh’s Rampur. The 2019 case pertains to alleged “provocative remarks" made by Khan against UP Chief Minister Yogi Adityanath and IAS Aunjaneya Kumar Singh, the then DM.The court also imposed a fine of Rs 2,000 on Khan and two others. Khan was, however, granted interim bail by the court.
04-03-26 06:47 pm
HK News Staffer
ಅಡುಗೆ ವಿಚಾರದಲ್ಲಿ ಅತ್ತೆಯೊಂದಿಗೆ ಜಗಳ ಕಾದು ಯುವತಿ...
04-03-26 05:06 pm
ಚಿತ್ತೂರು ಬಳಿ ಭೀಕರ ರಸ್ತೆ ಅಪಘಾತ; ಕಂಟೇನರ್ ವಾಹನಕ್...
04-03-26 01:33 pm
ಮಾರ್ಚ್ 10ಕ್ಕೆ ಎಲ್ಲ ಶಾಸಕರು, ಸಚಿವರಿಗೆ ಡಿಕೆಶಿ ಡಿ...
04-03-26 01:27 pm
ಇರಾನ್ಗೆ ತೆರಳಿದ್ದ ಕಾಫಿನಾಡಿನ ಯುವಕ ನಾಪತ್ತೆ ; ಮಗ...
04-03-26 11:51 am
04-03-26 11:13 pm
HK News Desk
ಹರ್ಮುಜ್ ಜಲಸಂಧಿ ನಿರ್ಬಂಧ ಉಲ್ಲಂಘಿಸಿದ 10 ತೈಲ ಹಡಗಿ...
04-03-26 10:09 pm
ಇರಾನ್ ಹಡಗು ಸ್ಫೋಟ ಬೆನ್ನಲ್ಲೇ ಅಮೆರಿಕದ ಯುದ್ಧ ನೌಕೆ...
04-03-26 10:03 pm
ಇರಾನ್ ಸರ್ವೋಚ್ಚ ನಾಯಕರಾಗಿ ಖಮೇನಿ ಪುತ್ರ ಮೊಜ್ತಾಬಾ...
04-03-26 12:58 pm
ಯುದ್ಧಪೀಡಿತ ಮಧ್ಯಪ್ರಾಚ್ಯದಿಂದ ಪಾರಾಗಲು ಪ್ರತಿ ಸೀಟ್...
03-03-26 04:30 pm
04-03-26 09:31 pm
HK News Staffer
ಉಡುಪಿ; ಲವ್ ಮ್ಯಾಟರ್ ರಾಜಿ ವೇಳೆ ಮೀನುಗಾರ ಮುಖಂಡನಿಗ...
04-03-26 10:54 am
ಬೇಸಗೆಯಲ್ಲಿ ಹಾವು ಕಡಿತ ಪ್ರಕರಣ ಹೆಚ್ಚಳ; ಕರಾವಳಿ, ಮ...
03-03-26 09:33 pm
'ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ' ಎಂದು...
03-03-26 08:42 pm
ವಿದ್ಯುತ್ ಗುತ್ತಿಗೆದಾರರಲ್ಲಿ ಪರ್ಸೆಂಟ್ ಲೆಕ್ಕದಲ್ಲಿ...
03-03-26 03:10 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm