ಬ್ರೇಕಿಂಗ್ ನ್ಯೂಸ್
25-10-22 07:37 pm HK News Desk ದೇಶ - ವಿದೇಶ
ಲಂಡನ್, ಅ.25: ಇಂಗ್ಲೆಂಡಿನ ರಾಜ ಚಾರ್ಲ್ಸ್ ಅವರನ್ನು ಭೇಟಿಯಾದ ನಿಯೋಜಿತ ಪ್ರಧಾನ ಮಂತ್ರಿ ರಿಷಿ ಸುನಕ್, ಕೆಲಹೊತ್ತು ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಅಲ್ಲದೆ, ಸುನಕ್ ಪ್ರಧಾನಿ ಸ್ಥಾನಕ್ಕೇರುವುದಕ್ಕೆ ರಾಜ ಚಾರ್ಲ್ಸ್ ಅಧಿಕೃತ ಮುದ್ರೆ ಹಾಕಿದ್ದಾರೆ. ಆನಂತರ ಮೊದಲ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದ ರಿಷಿ ಸುನಕ್, ದೇಶಕ್ಕೆದುರಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಇದಕ್ಕಾಗಿ ದೇಶ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಕೊರೊನಾ ನಂತರದ ದಿನಗಳಲ್ಲಿ ಎದುರಾದ ಬಿಕ್ಕಟ್ಟು ಮತ್ತು ರಷ್ಯಾ- ಉಕ್ರೇನ್ ಯುದ್ಧದ ಕಾರಣ ಉಂಟಾಗಿರುವ ಬಿಕ್ಕಟ್ಟಿನ ಪರಿಣಾಮ ದೇಶದ ಮೇಲಾಗಿದೆ. ಯುದ್ಧದ ಕಾರಣ ಪೂರೈಕೆ ಜಾಲದಲ್ಲಿ ವ್ಯತ್ಯಾಸವಾಗಿದೆ ಎಂದು ಹೇಳಿದ ಅವರು, 45 ದಿನಗಳಲ್ಲಿ ಅಧಿಕಾರ ತ್ಯಜಿಸಿದ ಲಿಜ್ ಟ್ರಸ್ ಬಗ್ಗೆಯೂ ಮಾತನಾಡಿದ್ದಾರೆ. ದೇಶಕ್ಕಾಗಿ ಕಠಿಣ ನಿರ್ಧಾರಗಳನ್ನು ತಳೆಯಬೇಕಾಗಿತ್ತು. ಅದರಲ್ಲಿ ಲಿಜ್ ಟ್ರಸ್ ತಪ್ಪು ಮಾಡಿದ್ದಾರೆಂದು ಹೇಳುವುದಿಲ್ಲ. ಸದುದ್ದೇಶದಿಂದಲೇ ಕೆಲವು ನಿರ್ಧಾರಗಳನ್ನು ಕೈಗೊಂಡರು. ಆದರೆ, ಸ್ವಲ್ಪ ಎಡವಟ್ಟು ಆಗಿತ್ತು ಎಂದರು.
ನಿಮ್ಮೆಲ್ಲರ ಪ್ರಧಾನಿಯಾಗಿ ನನ್ನನ್ನು ಆಯ್ಕೆ ಮಾಡಿದ್ದೀರಿ. ದೇಶದ ಪರವಾಗಿ ಶೀಘ್ರ ಕ್ರಮಗಳನ್ನು ಕೈಗೊಳ್ಳುತ್ತೇನೆ. ದೇಶದ ಆರ್ಥಿಕ ಸ್ಥಿತಿ ಮೇಲೆತ್ತಲು ಮತ್ತು ದೇಶದ ಜನರ ಹೃದಯ ಗೆಲ್ಲಲು ಕ್ರಮ ವಹಿಸುತ್ತೇನೆ. ಇದರರ್ಥ, ಭವಿಷ್ಯದಲ್ಲಿ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ರಿಷಿ ಸುನಕ್ ಹೇಳಿದ್ದಾರೆ. ಕೊರೊನಾ ಸಂದರ್ಭದಲ್ಲಿ ನಾನು ಕೈಗೊಂಡಿದ್ದ ಕ್ರಮಗಳನ್ನು ನೀವು ನೋಡಿದ್ದೀರಿ. ಹಾಗಂತ, ಈಗಿನ ಸಂದರ್ಭದಲ್ಲಿ ಜನರು ಮತ್ತು ಉದ್ಯಮದ ಪರ ನಿಲ್ಲಲು ಹಣಕಾಸು ನೆರವಿನ ಯೋಜನೆ ಪ್ರಕಟಿಸುವುದು ಸರಿಯಲ್ಲ. ಈಗಿನ ದಿನಗಳನ್ನು ಎದುರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದ್ದೇನೆ. ಭವಿಷ್ಯದಲ್ಲಿ ನಿಮ್ಮ ಮಕ್ಕಳು, ಮುಂದಿನ ತಲೆಮಾರು ಸಾಲ ಭರಿಸುವಂತಹ ಪರಿಸ್ಥಿತಿಯನ್ನು ತಂದೊಡ್ಡುವುದಿಲ್ಲ ಎಂದು ಹೇಳಿದರು.
ನಾನು ದೇಶದ ಜನರನ್ನು ಒಗ್ಗೂಡಿಸುತ್ತೇನೆ. ಕೇವಲ ಮಾತುಗಳಿಂದಲ್ಲ, ಕೆಲಸಗಳಿಂದ ಈ ಕಾರ್ಯ ಮಾಡುತ್ತೇನೆ ಎಂದು ರಿಷಿ ಸುನಕ್ ಹೇಳಿದರು.
Rishi Sunak took charge as the next UK Prime Minister on Tuesday. In his first address as the UK PM, Rishi Sunak said that he will place economic stability and confidence at the heart of his government's agenda. “This will mean difficult decisions to come,” Rishi Sunak said.
15-09-25 04:45 pm
Bangalore Correspondent
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
15-09-25 04:57 pm
HK News Desk
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm